ETV Bharat / state

ಅಕ್ಟೋಬರ್ 13 ರಿಂದ 27ರವರೆಗೆ ಹಾಸನಾಂಬ ದೇವಿಯ ದರ್ಶನ

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಾಲಯದಲ್ಲಿ ವರ್ಷದ ಹಿಂದೆ ಹೊತ್ತಿಸಿದ ದೀಪ ಉರಿಯುತ್ತಲೇ ಇರುತ್ತದೆ. ದೇವಿಗೆ ಅರ್ಪಿಸಿದ ಪ್ರಸಾದ ಹಾಳಾಗುವುದಿಲ್ಲ. ಹೂವುಗಳು ಬಾಡುವುದಿಲ್ಲ. ಈ ರೀತಿಯ ಅನೇಕ ಅದ್ಭುತಗಳಿಗೆ ಸಾಕ್ಷಿಯಾಗಿರುವ ದೇಗುಲದ ಬಾಗಿಲನ್ನು ದೀಪಾವಳಿಯ ಸಮಯದಲ್ಲಿ ತೆಗೆಯಲಾಗುತ್ತದೆ.

Hasanamba temple
ಹಾಸನಾಂಬ ದೇವಾಲಯ
author img

By

Published : Sep 11, 2022, 7:23 AM IST

ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು 15 ದಿನಗಳ ಕಾಲ ತೆರೆಯಲಿದೆ. ಅಧಿದೇವತೆಯು ಭಕ್ತರಿಗೆ 12 ದಿನ ದರ್ಶನ ನೀಡಲಿದ್ದಾಳೆ. ಆಶ್ವಿಜ ಮಾಸದ ಶುಕ್ಲ ಪಕ್ಷದ ಮೊದಲ ಗುರುವಾರದಂದು ಹಾಸನಾಂಬೆಯ ಬಾಗಿಲು ತೆರೆದು ಬಲಿಪಾಡ್ಯಮಿಯ ಮಾರನೇಯ ದಿನ ಶಾಸ್ತ್ರೋಕ್ತವಾಗಿ ಗರ್ಭಗುಡಿಗೆ ಬಾಗಿಲು ಹಾಕಲಾಗುತ್ತದೆ.

ಈ ಬಗ್ಗೆ ಮಾತನಾಡಿದ ಶಾಸಕ ಪ್ರೀತಂ ಜೆ. ಗೌಡ,"ಈ ಬಾರಿ 15 ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದೆ. ಅಕ್ಟೋಬರ್ 13ರ ಮೊದಲ ದಿನ, ಅ. 25ರ ಸೂರ್ಯ ಗ್ರಹಣದ ದಿನ ಮತ್ತು 27ನೇ ಕೊನೆಯ ದಿನದಂದು ಸಾರ್ವಜನಿಕರಿಗೆ ದರ್ಶನ ಭಾಗ್ಯ ಇರುವುದಿಲ್ಲ. ಇನ್ನುಳಿದಂತೆ, ಭಕ್ತರಿಗೆ ಯಾವ ರೀತಿಯಲ್ಲೂ ಅಡಚಣೆಯಾಗದಂತೆ ನಿಗಾ ವಹಿಸಲಾಗುವುದು. ಮುಖ್ಯ ಅತಿಥಿಗಳು, ಗಣ್ಯರು ಬಂದಾಗಲೂ ಯಾವುದೇ ಸಮಸ್ಯೆ ಆಗದಂತೆ ಸಾರ್ವಜನಿಕರಿಗೆ ದರ್ಶನ ಭಾಗ್ಯ ನೀಡುವ ವ್ಯವಸ್ಥೆ ಮಾಡಲಾಗುತ್ತದೆ" ಎಂದರು.

ಶಾಸಕ ಪ್ರೀತಂ.ಜೆ.ಗೌಡ ಹಾಗೂ ಡಿಸಿ ಅರ್ಚನಾ ಪ್ರತಿಕ್ರಿಯೆ

"ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸರಳವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಗಿತ್ತು. ಈ ಬಾರಿ ಅದ್ಧೂರಿ ಆಚರಣೆಗೆ ಜಿಲ್ಲಾಡಳಿತ ಸಿದ್ಧವಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದರು.

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಗೊಂಡಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಸೇರಿ ಎಲ್ಲಾ ಜನಪ್ರತಿನಿಧಿಗಳನ್ನು ಜಿಲ್ಲಾಡಳಿತದ ಪರವಾಗಿ ಆಹ್ವಾನಿಸಲಾಗುವುದು. ಸಂಸದರು, ಎಂಎಲ್​​ಸಿ ಸೇರಿದಂತೆ ಎಲ್ಲರನ್ನೂ ಕರೆದು ಸಭೆ ಮಾಡಲಾಗುವುದು. ಹೊರ ರಾಜ್ಯದಿಂದಲೂ ಭಕ್ತಾಧಿಗಳು ಬರುವುದರಿಂದ ಅವರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ನೀಡಲು ಸನ್ನದ್ಧರಾಗಿದ್ದೇವೆ" ಎಂದು ಪ್ರೀತಂ ಜೆ. ಗೌಡ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅರ್ಚನಾ ಪ್ರತಿಕ್ರಿಯಿಸಿ, "ಈ ಹಿಂದೆ ಸಾರ್ವಜನಿಕರಿಗೆ ಕೆಲ ಸಮಸ್ಯೆ ಆಗಿದ್ದು ಈ ವರ್ಷ ಮೊದಲೇ ಸಭೆ ಮಾಡಲಾಗಿದೆ. ಹಾಸನಾಂಬ ದೇವಿ ದರ್ಶನದಲ್ಲಿ ಯಾವುದೇ ಲೋಪ ಬಾರದಂತೆ ಏನೇನು ತಯಾರಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಗಿದೆ. ಇದೇ ಸೋಮವಾರದಿಂದಲೇ ನಮ್ಮ ಆಡಳಿತಾಧಿಕಾರಿಗಳು ಎಲ್ಲಾ ತಯಾರಿ ಪ್ರಾರಂಭಿಸಲಿದ್ದಾರೆ. ಶನಿವಾರ ದೇವಾಲಯದ ವೀಕ್ಷಣೆ ಮಾಡಿ ಮಾಹಿತಿ ಪಡೆದಿದ್ದು, ಜನಸಂದಣೆ ಹೆಚ್ಚಾಗುವುದರಿಂದ ತೊಂದರೆ ಆಗದಂತೆ ದೇವರ ದರ್ಶನ ನೀಡುವುದು ನಮ್ಮ ಉದ್ದೇಶ. ವಿಐಪಿಗಳು ಬಂದಾಗ ಸಾಮಾನ್ಯ ಜನರ ದರ್ಶನದಲ್ಲಿ ಯಾವುದೇ ಅಡಚಣೆ ಆಗದಂತೆ ನಿಗಾ ವಹಿಸಲಾಗುವುದು" ಹೇಳಿದರು.

ಇದನ್ನೂ ಓದಿ: ಭಕ್ತರಿಗೆ ದರ್ಶನಭಾಗ್ಯ ಕರುಣಿಸಿದ ಹಾಸನಾಂಬ; ಇಂದಿನಿಂದ ಪೂಜೆ-ಪುನಸ್ಕಾರ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.