ETV Bharat / state

ಹಾಸನ: ಸರ್ಕಾರಕ್ಕೆ ವಾಪಸಾದ 4.88 ಕೋಟಿ ರೂ ಅನುದಾನ - ಮಾಜಿ ಸಚಿವ ಎಚ್.ಡಿ. ರೇವಣ್ಣ

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಅಧಿಕಾರಿಗಳ ಮೇಲೆ ಹರಿಹಾಯ್ದರು.

General Meeting
ಸಾಮಾನ್ಯ ಸಭೆ
author img

By

Published : Oct 5, 2020, 8:34 PM IST

ಹಾಸನ: ವಿವಿಧ ಕಾಮಗಾರಿಗೆ 2019-20ನೇ ಸಾಲಿನಲ್ಲಿ ಬಿಡುಗಡೆಯಾದ 4.88 ಕೋಟಿ ರೂ. ಸರ್ಕಾರಕ್ಕೆ ವಾಪಸ್ಸಾಗಿದ್ದು ಅಧಿಕಾರಿಗಳ ನಿರ್ಲಕ್ಷೃದಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಅಧಿಕಾರಿಗಳ ಮೇಲೆ ಮುಗಿಬಿದ್ದರು. ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಮಾ. 23ರ ಒಳಗೆ ಹಣ ಪಡೆಯಬೇಕಿದ್ದರೂ ಅಧಿಕಾರಿಗಳು ಗಮನ ಹರಿಸಲಿಲ್ಲ. ಉಳಿದ ಆರು ತಿಂಗಳ ಅವಧಿಗೆ ಉತ್ತಮ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕಿತ್ತು ಎಂದರು.

ಸಾಮಾನ್ಯ ಸಭೆ

ಮಲ್ಲಿಪಟ್ಟಣ ಕ್ಷೇತ್ರದ ಎಸ್.ಪಿ. ರೇವಣ್ಣ ಮಾತನಾಡಿ, ಫೆ. 28ರ ಒಳಗೆ 10 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದರೂ ಬಿಲ್ ಮಂಜೂರಾಗಲಿಲ್ಲ. ಇಂಜಿನಿಯರ್‌ಗೆ ಎಷ್ಟೇ ಬಾರಿ ಮನವಿ ಮಾಡಿದರೂ ಸ್ಪಂದನೆ ನೀಡಲಿಲ್ಲ. ನೇರವಾಗಿ ಇಂತಿಷ್ಟು ಕಮಿಷನ್ ಬೇಕೆಂದು ಕೇಳುತ್ತಾರೆ. ಜಿಲ್ಲಾ ಪಂಚಾಯಿತಿ ಮರ್ಯಾದೆ ಹಾಳಾಗಬಾರದೆಂದು ಎಲ್ಲಿಯೂ ಬಹಿರಂಗಪಡಿಸಿದ್ದೇನೆ. ಹೀಗಾಗಿ ಜನ ನಮ್ಮನ್ನು ಹೇಗೆ ನಂಬುತ್ತಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಇಂಜಿನಿಯರ್ ಸ್ಥಾನಕ್ಕೆ ಬರಲು 25 ಲಕ್ಷ ರೂ. ಲಂಚ ಕೊಟ್ಟಿರುತ್ತಾರೆ. ಅದನ್ನು ಸದಸ್ಯರಿಂದಲೇ ವಸೂಲಿ ಮಾಡಬೇಕೆ ಹೊರತು ಬೇರೆ ದಾರಿ ಇಲ್ಲ. ಹೀಗಾಗಿ ಅವರನ್ನು ದೂಷಿಸುವುದು ಬೇಡ ಎಂದು ವ್ಯಂಗ್ಯವಾಡಿದರು.

4.88 ಕೋಟಿ ರೂ. ವಾಪಸ್ಸಾಗಿರುವುದಕ್ಕೆ ಅಧಿಕಾರಿಗಳೇ ಜವಾಬ್ದಾರರು. ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸದಸ್ಯರು ಒಟ್ಟಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನ ಭೇಟಿಯಾಗೋಣ. ಅಭಿವೃದ್ಧಿಗಾಗಿ ಹಣ ಕಲ್ಪಿಸಿ ಎಂದು ಮನವಿ ಮಾಡೋಣ ಎಂದರು.

ಎರಡು ಲಕ್ಷದಂತೆ ಹಂಚಿಕೆ ಮಾಡಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿವೇಚನಾ ಅಡಿ ಬಿಡುಗಡೆಯಾಗಿರುವ 1 ಕೋಟಿ ರೂ. ಅನುದಾನವನ್ನು ಜಿಪಂನ 40 ಸದಸ್ಯರಿಗೆ ತಲಾ ಎರಡು ಲಕ್ಷ ರೂ. ನೀಡಬೇಕು. 10 ಲಕ್ಷ ಅಧ್ಯಕ್ಷರು ಹಾಗೂ 5 ಲಕ್ಷ ರೂ. ಉಪಾಧ್ಯಕ್ಷರಿಗೆ ಮಿಸಲಿಡಬೇಕು. ಉಳಿದ 5 ಲಕ್ಷ ರೂ. ನೀರಿಗೆ ತತ್ವಾರ ಇರುವ ಕ್ಷೇತ್ರಕ್ಕೆ ನಿಗದಿಪಡಿಸಬೇಕು ಎಂದು ಸಲಹೆ ನೀಡಿದರು.

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಹೊಳೆನರಸೀಪುರ ತಾಲೂಕಿನಲ್ಲಿ 2.70 ಲಕ್ಷ ರೂ. (ಸ್ಪಿಲ್ ಓವರ್) ಮಾತ್ರ ಹಣ ವಾಪಸ್ಸಾಗಿದೆ. ಆದರೆ ನಮ್ಮ ಕ್ಷೇತ್ರದಿಂದ ಒಂದೂವರೆ ಕೋಟಿಗೆ ಖೋತಾ ಬಿದ್ದಿದೆ. ಹೊಳೆನರಸೀಪುರ ತಾಲೂಕಿಗೆ 5 ಇಂಜಿನಿಯರ್‍ಗಳಿದ್ದರೆ ನಮಗೆ ಒಬ್ಬರೇ ಇದ್ದಾರೆ. ಉಳಿದ ಎಂಎಲ್‍ಎಗಳೆಲ್ಲ ದನ ಕಾಯೋಕ್ ಹೋಗ್ಬೇಕು. ಏನಾದರೂ ಸಮಸ್ಯೆಯಾದರೆ ಜನ ನನ್ನ ಮನೆ ಮುಂದೆ ಬಂದು ನಿಲ್ತಾರೆ, ಶಾಸಕರಾಗಿ ಸಾರ್ವಜನಿಕರ ಪ್ರಶ್ನೆಗೆ ಏನಂತ ಉತ್ತರ ಕೊಡಲಿ. ನಿಮ್ಮಂತ ಅಧಿಕಾರಿಗಳಿದ್ದರೆ ನಮಗೆ ಕೆಟ್ಟ ಹೆಸರು ಎಂದು ತರಾಟೆಗೆ ತೆಗೆದುಕೊಂಡರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿ, ಅಕ್ಷರ ದಾಸೋಹ ಯೋಜನೆಯಡಿ ಬಿಡುಗಡೆಯಾಗಿರುವ ತೊಗರಿ ಬೇಳೆ ಕಳಪೆಯಾಗಿದ್ದು, ಯಾವ ಕಾರಣಕ್ಕೂ ಮಕ್ಕಳಿಗೆ ವಿತರಿಸಬಾರದು ಎಂದು ಆಗ್ರಹಿಸಿದರು.

ಜಿಪಂ ಪ್ರತಿನಿಧಿಗಳಾಗಿ ನಾಲ್ಕು ವರ್ಷ ಕಳೆದಿದ್ದೇವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳು ನಮ್ಮಿಂದ ಆಗಿಲ್ಲ. ರಾಜ್ಯದ ಬೇರೆ ಜಿಲ್ಲಾ ಪಂಚಾಯಿತಿಗಳು ನಮಗಿಂತ ಹೆಚ್ಚು ಕೆಲಸ ಮಾಡಿವೆ ಎಂದರು.

ಶಾಸಕರಾದ ಕೆ.ಎಸ್. ಲಿಂಗೇಶ್, ಎಚ್.ಕೆ. ಕುಮಾರಸ್ವಾಮಿ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಜಿಪಂ ಸಿಇಒ ಬಿ.ಎ. ಪರಮೇಶ್ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್, ಅಭಿವೃದ್ಧಿ ಅಧಿಕಾರಿ ನಾಗರಾಜ್ ಹಾಗೂ ಇತರರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.