ETV Bharat / state

ಈ ರಸ್ತೆಯಲ್ಲಿ ವೈಯ್ಯಾರಿ ಹಾಗೆ ಬಳಕುತ್ತವೆ ವಾಹನಗಳು.. ಸ್ವಲ್ಪ ಎಚ್ಚರ ತಪ್ಪಿದ್ರೂ ಹರೋಹರ...!

ಹಾಸನ-ದುದ್ದ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮಣ್ಣಿನ ಸ್ನಾನದೊಂದಿಗೆ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರ ಗೋಳೂ ಕೇಳುವವರೇ ಇಲ್ಲದಂತಾಗಿದೆ.

author img

By

Published : Sep 13, 2019, 2:18 PM IST

ಹಾಸನ-ದುದ್ದ ರಸ್ತೆ

ಹಾಸನ : ಕಳೆದ 3 ದಶಕಗಳಿಂದ ಜಿಲ್ಲಾ ರಸ್ತೆಗೆ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆಯನ್ನ ಸರ್ಕಾರದ ಮುಂದಿಡುತ್ತಾ ಬಂದ್ರೂ, ನಾಯಕರುಗಳು ಕೇವಲ ಭರವಸೆಗಳ ಮೂಲಕ ಜನಸಾಮಾನ್ಯರ ಮೂಗಿಗಿ ತುಪ್ಪ ಸುರಿಯುತ್ತಿದ್ದಾರೆ. ರಸ್ತೆ ಕಾಮಗಾರಿ ಆಗಿಯೇ ಹೋಯ್ತು ಎನ್ನುವಷ್ಟರಲ್ಲಿ ಸರ್ಕಾರ ಬದಲಾದ ಹಿನ್ನಲೆಯಲ್ಲಿ ಮತ್ತೆ ನೆನೆಗುದಿಗೆ ಬಿದ್ದಿದ್ದು, ರಸ್ತೆಯಲ್ಲಿ ಓಡಾಡಲು ಜೀವವನ್ನೆ ಕೈಯಲ್ಲಿಡಿದು ಓಡಾಡುತ್ತಿದ್ದಾರೆ.

ಗುಂಡಿ ಬಿದ್ದಿರುವ ಹಾಸನ-ದುದ್ದ ರಸ್ತೆ

ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ನಡೆಯದೇ ಇದ್ದುದರಿಂದ ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿ ಓಡಾಡುವ ಮಂದಿ ಮಾತ್ರ ಅದ್ಯಾವ ಕರ್ಮ ಮಾಡಿದ್ರೋ ಗೊತ್ತಿಲ್ಲ ಕಣ್ರಿ. ಹೌದು ಹಾಸನ-ದುದ್ದ ಸಂಪರ್ಕಿಸುವ ರಸ್ತೆಯಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮಣ್ಣಿನ ಸ್ನಾನದೊಂದಿಗೆ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ರು ಕೂಡಾ ಇತ್ತ ಯಾವೊಬ್ಬ ಜನಪ್ರತಿನಿಧಿಯೂ ಕೂಡಾ ಗಮನಹರಿಸುವ ಕಾಯಕ ಮಾಡಿಲ್ಲ ಅನ್ನೋದೇ ಬೇಸರದ ಸಂಗತಿ.

ರಸ್ತೆ ಎಲ್ಲ ಕಡೆ ಗುಂಡಿ ಬಿದ್ದಿದ್ದು, ರಸ್ತೆಯಲ್ಲಿ ಸಾಗುವ ವಾಹನಗಳು ವೈಯಾರವಾಗಿ ಬಳುಕುತ್ತಲೇ ಬರುತ್ತವೆ. ಬಳುಕುವ ರೀತಿಯನ್ನ ನೋಡಿದ್ರೆ, ವಾಹನಗಳು ಎಲ್ಲಿ ಬಿದ್ದುಬಿಡುತ್ತೋ ಎಂಬ ಭಯ ಪ್ರಯಾಣಿಕರಿಗೆ. ಹೌದು ಈಗ ಇದು ಹೇಗಿದೆ ಅಂದ್ರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೇ ರಾಜಕೀಯ ಪ್ರತಿಷ್ಠೆ ಮತ್ತು ಕೆಲ ಸಾರ್ವಜನಿಕರ ವಿರೋಧದಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದು, ಅದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಅನುಕೂಲಕರವಾಗಲಿ ಎಂಬುದು ಸ್ಥಳೀಯರ ಒತ್ತಾಸೆ

Intro:ಹಾಸನ: ಕಳೆದ 3 ದಶಕಗಳಿಂದ ಜಿಲ್ಲಾ ರಸ್ತೆಗೆ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆಯನ್ನ ಸರ್ಕಾರದ ಮುಂದಿಡುತ್ತಾ ಬಂದ್ರೂ, ನಾಯಕರುಗಳು ಕೇವಲ ಭರವಸೆಗಳ ಮೂಲಕ ಜನಸಾಮಾನ್ಯರ ಮೂಗಿಗಿ ತುಪ್ಪ ಸುರಿಯುತ್ತಿದ್ದಾರೆ. ರಸ್ತೆ ಕಾಮಗಾರಿ ಆಗಿಯೇ ತೀರ್ತು ಎನ್ನುವಷ್ಟರಲ್ಲಿ ಸರ್ಕಾರ ಬದಲಾದ ಹಿನ್ನಲೆಯಲ್ಲಿ ಮತ್ತೆ ನೆನೆಗುದಿಗೆ ಬಿದ್ದಿದ್ದು, ರಸ್ತೆಯಲ್ಲಿ ಓಡಾಡಲು ಜೀವವನ್ನೆ ಕೈಯಲ್ಲಿಡಿದು ಓಡಾಡುತ್ತಿದ್ದಾರೆ. ಕಳೆದ ಒಂದುವರೆ ವರ್ಷದಿಂದ ಕಾಮಗಾರಿ ನಡೆಯದೇ ಇದ್ದುದರಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿ ಓಡಾಡುವ ಮಂದಿ ಮಾತ್ರ ಅದ್ಯಾವ ಕರ್ಮ ಮಾಡಿದ್ರೋ ಗೊತ್ತಿಲ್ಲ ಕಣ್ರಿ.... ಬನ್ನಿ ಆ ರಸ್ತೆಯನ್ನ ನಾವೊಮ್ಮೆ ನೋಡಿಕೊಂಡು ಬರೋಣ ಬನ್ನಿ... ಇದು ಹಾಸನ-ದುದ್ದ ಸಂಪರ್ಕಿಸುವ ರಸ್ತೆಯ ಒಂದು ನೋಟ. ಇಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮಣ್ಣಿನ ಸ್ನಾನದೊಂದಿಗೆ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ರು ಕೂಡಾ ಇತ್ತ ಯಾವೊಬ್ಬ ಜನಪ್ರತಿನಿಧಿಯೂ ಕೂಡಾ ಗಮನಹರಿಸುವ ಕಾಯಕ ಮಾಡಿಲ್ಲ ಅನ್ನೋದೇ ಬೇಸರದ ಸಂಗತಿ. ಕಣ್ಮರೆಯಾಗಿರೋ ಗುತ್ತಿಗೆದಾರ: ಹಾಸನ-ದುದ್ದ ತಿಪಟೂರು-ಚಿಕ್ಕನಾಯಕನಹಳ್ಳಿ ರಸ್ತೆ 80ಕಿ.ಮೀ.ಇದ್ದು, ಇದನ್ನ 238ಕೋಟಿ ರೂ.ವೆಚ್ಚಕ್ಕೆ ಬಿಎಸ್ವೈ 2010ರಲ್ಲಿ ಬೆಂಗಳೂರಿನ ಅಭಿಜಿತ್ ಕನ್ಸ್ಟ್ರಕ್ಷನ್ ಕಂಪನಿಗೆ ಬಿಲ್ಡ್ ಓನ್ ಆಪರೇಟರ್ ಅಂಡ್ ಟ್ರಾನ್ಸ್ವರ್ (ಬಿಓಓಟಿ) ಮಾಡಬೇಕೆಂಬ ನಿಯಮದೊಂದಿಗೆ ನೀಡಿದ್ರು. ಈ ಕಾಮಗಾರಿಯನ್ನು ಕಳೆದ 8 ವರ್ಷಗಳ ಹಿಂದೆ ಅಭಿಜೀತ್ ಗ್ರೂಪ್ ಆಫ್ ಕಂಪನಿ ರಸ್ತೆ ನಿರ್ಮಾಣ ಮಾಡುವುದಾಗಿ ಒಪ್ಪಿ ಕಾಮಗಾರಿಯನ್ನ ಪ್ರಾರಂಭಿಸಿತ್ತು. 2012ರಲ್ಲಿ ಕಾಮಗಾರಿಯನ್ನ ಪ್ರಾರಂಭಿಸಿದ ಕಂಪನಿ ಇದುವರೆವಿಗೂ ಪೂರ್ಣಗೊಳಿಸಿಲ್ಲ. ಕಾಮಗಾರಿ ಮಾತ್ರ ಶೇ.50ರಷ್ಟು ಆಗಿಲ್ಲ. ಈ ಬಗ್ಗೆ ಅಭಿಜಿತ್ ಗ್ರೂಪ್ ಆಫ್ ಕಂಪನಿಯನ್ನ ಕೇಳಿದ್ರೆ ಹಣದ ಸಮಸ್ಯೆ ಇದೆ ಎಂಬ ಕಾರಣವನ್ನ ಸರ್ಕಾರಕ್ಕೆ ನೀಡಿದೆಯಂತೆ. ರಾಜಕೀಯ ಪ್ರತಿಷ್ಠೆಯಿಂದ ಬಳುಕಾಡುತ್ತಾ ಸಾಗುವ ವಾಹನಗಳು: ಎರಡು ದಶಕಗಳಿಂದ ಗುಂಡಿ ಬಿದ್ದು, ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿತ್ತು. ಹಾಸನ-ಅರಸೀಕೆರೆ-ಟಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ವಿಧಾನಸಭಾ ಶಾಸಕರುಗಳಿಗೆ ಒಳಪಡುವ ಈ ದುದ್ದ ರಸ್ತೆ ಕಾಮಗಾರಿ ಒಂದು ರೀತಿಯಲ್ಲಿ ರಾಜಕೀಯ ಪ್ರತಿಷ್ಠೆಯಾಗಿರುವುದೇ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬೀಳಲು ಕಾರಣ. ಈ ರಸ್ತೆಯಲ್ಲಿ ಸಂಚಾರಿಸುವ ವಾಹನಗಳಿಗೆ ಆಯಸ್ಸು ಕಡಿಮೆಯಾಗಿ ಗುಜರಿಗೆ ಹಾಕುವ ಪರಿಸ್ಥಿತಿ ಬರುತ್ತಿವೆ. ಕಳೆದ ತಿಂಗಳಿನಿಂದ ಮಳೆಯಬ್ಬರ ಜೋರಾಗಿರುವುದರಿಂದ ದ್ವಿಚಕ್ರವಾಹನದಲ್ಲಿ ಓಡಾಡುವವರಂತು ಕೆಸರುಗದ್ದೆಯಂತಾಗಿರೋ ರಸ್ತೆಯಲ್ಲಿಯೇ ಮನೆಗೆ ಹೋಗುವ ಪರಿಸ್ಥಿತಿ ಇದೆ. ಬಸ್ಸು, ಲಾರಿ, ಟೆಂಪೋ, ಆಟೋಗಳು ರಸ್ತೆಯಲ್ಲಿ ಬಳುಕುತ್ತಲೇ ಬರುತ್ತವೆ. ಬಳುಕುವ ರೀತಿಯನ್ನ ನೋಡಿದ್ರೆ, ಎಲ್ಲಿ ಬಿದ್ದುಬಿಡುತ್ತೋ ಎಂಬ ಭಯ ಪ್ರಯಾಣಿಕರಿಗೆ. ಕಾರಣ ಪ್ರತಿ 2 ಮೀಟರ್ಗೆ ಗುಂಡಿಯಿದ್ದಿದ್ದರಿಂದ ವಾಹನ ಸವಾರರ ಪಾಡು ಹೇಳತೀರದಾಗಿದೆ. ಕೈಕಾಲು ಮುರಿದುಕೊಂಡು ಸೋಂಟನೋವಿನಿಂದ ನರಕಯಾತನೇ ಅನುಭವಿಸುತ್ತಿರುವವವರು ಅದೇಷ್ಟೋ ಮಂದಿ ಇಂದಿಗೂ ಇದ್ದಾರೆ. ಕಳೆದ 10 ವರ್ಷಗಳಲ್ಲಿ ಆಗಿರುವ ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಉದಾಹರಣೆಗಳು ಇವೆ. ಗಣಿಗಾರಿಕೆ ಸ್ಥಗಿತದಿಂದ ಹಿಂದೆ ಸರಿದ ಗುತ್ತಿಗೆದಾರ: ಅಂತೂ ಇಂತು ಯಮನ ರಸ್ತೆಯಂತೆ ಬಿಂಬಿತವಾಗಿರೋ ಈ ರಸ್ತೆಯನ್ನ ದುರಸ್ಥಿ ಮಾಡಬೇಕೆಂಬ ಓತ್ತಾಯಿಸಿದ್ದ ಪ್ರಗತಿಪರ ಸಂಘಟನೆಗಳ ಕೆಲ ಮುಖಂಡರು ಕಾಲವಾದ್ರು ರಸ್ತೆ ಮಾತ್ರ ದುರಸ್ಥಿಯಾಗದಿರುವುದು ನಿಜಕ್ಕೂ ಬೇಸರದ ಸಂಗತಿ. ಆದ್ರೆ ರಸ್ತೆ ನಿರ್ಮಾಣ ಮಾಡಲು ಜಲ್ಲಿಯ ಅವಶ್ಯಕತೆ ಇರುವುದರಿಂದ ಗಣಿಗಾರಿಕೆಗೆ ವಿರುದ್ದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ರು. ಹೀಗಾಗಿ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದ್ರಿಂದ ಈ ರಸ್ತೆಯಲ್ಲಿ ಓಡಾಡುತ್ತಿದ್ದ ಗಣಿ-ಲಾರಿಗಳ ಸಂಖ್ಯೆ ಕಡಿಮೆಯಾಯ್ತು. ಇದರಿಂದ ನಷ್ಟವಾಗುವ ಭೀತಿಯಿಂದ ಅಭಿಜಿತ್ ಕಂಪನಿ ರಸ್ತೆ ನಿರ್ಮಾಣಕ್ಕೆ ಹಿಂದೆಟು ಹಾಕಿತು. ಹಾಗಾಗಿ ಕಳೆದ 5 ವರ್ಷಗಳಿಂದಲೂ ಮತ್ತೆ ರಸ್ತೆ ಕಾಮಗಾರಿ ಕುಟುಂತ್ತ ಸಾಗಿದೆ. ನೋಡಿದ್ರಲ್ಲಾ...ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗೇ ರಾಜಕೀಯ ಪ್ರತಿಷ್ಠೆ ಮತ್ತು ಕೆಲ ಸಾರ್ವಜನಿಕರ ವಿರೋಧದಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದು, ಅದಷ್ಟು ಬೇಗ ರಸ್ತೆ ರಸ್ತೆ ಕಾಮಗಾರಿ ಪೂರ್ಣಗೊಂಡು ಸುಗಮ ಸಂಚಾರಕ್ಕೆ ಅನುಕೂಲಕರವಾಗಲಿ ಎಂಬುದು ನಮ್ಮ ಈಟಿವಿ ಭಾರತದ ಆಶಯ.... • ಸುನೀಲ್ ಕುಂಭೇನಹಳ್ಳಿ, ಈಟಿವಿ ಭಾರತ, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.