ಹಾಸನ: ಕಳೆದ 10 ವರ್ಷಗಳ ಹಿಂದೆ ನಾಲೆಗಾಗಿ ಕಳೆದುಕೊಂಡಿದ್ದ ಜಮೀನಿಗೆ ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಂದಾಗ ಡಿಸಿ ಅಕ್ರಂಪಾಷ ಕಚೇರಿಯಿಂದ ಎದ್ದು ಬಂದು ಸ್ಪಂದಿಸಿ ಮಾನವೀಯತೆ ತೋರಿದ ಘಟನೆ ಹಾಸನದಲ್ಲಿ ನಡೆಯಿತು.
ಅರಕಲಗೂಡು ತಾಲೂಕು ಮಾದಿಹಳ್ಳಿಯ ಬಸಪ್ಪಾಜಿ ತನ್ನ ಎರಡು ಕಾಲಿನ ಸ್ವಾಧೀನ ಕಳೆದುಕೊಂಡು ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ, ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಬಲಮೇಲ್ದಂಡೆ ನಾಲೆಗೆಂದು 16ಗುಂಟೆ ಜಮೀನನ್ನ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಕಳೆದ ಹತ್ತು ವರ್ಷದಿಂದ ಪರಿಹಾರಕ್ಕಾಗಿ ಸಾಕಷ್ಟು ಬಾರಿ ಭೂಸ್ವಾಧೀನ ಕಚೇರಿಗೆ ತಿರುಗಿದ್ರು ಯಾವುದೇ ಪ್ರಯೋಜನವಾಗಿಲ್ಲವಂತೆ.
12 ವರ್ಷದಿಂದ ಕಾಲಿಲ್ಲದಿದ್ರು ಶ್ರಮಪಟ್ಟು ಅಲ್ಲಿದ್ದ ಪರಿಹಾರಕ್ಕಾಗಿ ಕೈಯಲ್ಲಿ ಒಂದು ಪೈಲ್ ಹಿಡಿದು ಅಲೆದಾಡುತ್ತಿರುವ ಇವರು ಇಂದು ಹಾಸನ ಜಿಲ್ಲಾಧಿಕಾರಿಗಳ ಕಚೇರಿಯ ಬಾಗಿಲ ಬಳಿ ಬಂದು ಡಿಸಿ ಬರುವಿಕೆಗೆ ಕಾದು ಕುಳಿತಿದ್ರು. ಆದ್ರೆ ಕಚೇರಿಯಲ್ಲಿದ್ದ ಡಿಸಿ ಅಕ್ರಂ ಪಾಷರವರಿಗೆ ವಿಚಾರ ತಿಳಿಯುತ್ತಿದ್ದಂತೆ ಕಚೇರಿಯಿಂದ ಎದ್ದು ಬಂದು ಆತನ ಸಮಸ್ಯೆ ಆಲಿಸಿದ್ದಾರೆ.
ಚಂದ್ರಶೆಟ್ಟಿ ಎಂಬ ಅಧಿಕಾರಿ ನನ್ನ ಪೈಲ್ ಪರಿಶೀಲಿಸಿ, ಪರಿಹಾರದ ಮಾತನಾಡಿದ್ರೆ, ಸುಳ್ಳು ಮಾಹಿತಿ ನೀಡ್ತಾರೆ. ಅಲ್ಲದೇ, ನೀವು ಪದೇ ಪದೇ ಬರುವುದು ಬೇಡ ನಾನೇ ತಲುಪಿಸುತ್ತೇನೆ ಎಂದು ಹೇಳಿದ ಮಾತುಗಳಿಗೆ ವರ್ಷಗಳೇ ಕಳೆದವು. ಇನ್ನು ಹಿಂದಿನ ಎಡಿಸಿ ಕೂಡಾ ಚಂದ್ರಶೆಟ್ಟಿಯವರಿಗೆ ಆದೇಶ ಮಾಡಿದ್ದರೂ. ನನ್ನ ಬಗ್ಗೆ ಯಾರು ಗಮನಹರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಮಸ್ಯೆಯನ್ನು ಕೂಡಲೇ ಪರಿಹರಿಸುವುದಾಗಿ ಭರವಸೆ ನೀಡಿದ್ದಲ್ಲದೇ ಅಂಗವಿಕಲನ ಬಗ್ಗೆ ಕಾಳಜಿ ತೋರಿ ಕಚೇರಿಯಿಂದ ಎದ್ದು ಬಂದು ಆತನ ಮನವಿಗೆ ಸ್ಪಂದಿಸಿದರು.