ETV Bharat / state

ಅಮೆರಿಕ, ಭಾರತದ ಪಿಎಂಗಳು ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ : ಮಾಜಿ ಸಿಎಂ ಕಿಡಿ

author img

By

Published : Jan 6, 2020, 7:35 PM IST

ನಾನು 14 ತಿಂಗಳಲ್ಲಿ ಮಾಡಿದ ಕೆಲಸಗಳ ಮೇಲೆ ಕೇಂದ್ರ ರಾಜ್ಯಕ್ಕೆ ರ್ಯಾಂಕಿಂಗ್ ನೀಡಿದೆ. ಅದನ್ನ ನಾವು ಮಾಡಿದ್ದೇವೆ ಎಂದು ಬೀಗುತ್ತಿದ್ದಾರೆ. ಅವರು ಮಾಡಿದ ಕೆಲಸಕ್ಕೆ ಆರ್ಥಿಕ ಇಲಾಖೆ ರ್ಯಾಂಕಿಂಗ್ ಕೊಟ್ಟಿಲ್ಲ. ನನ್ನ ಅವಧಿಯ ಕೆಲಸಕ್ಕೆ ಅವರು ರ್ಯಾಕಿಂಗ್​ ಕೊಟ್ಟಿರುವುದು. ಅದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಬಿಜೆಪಿಗೆ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ  ,H Kumaraswamy spoke against BJP
ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ಹಾಸನ: ಅಮೆರಿಕ ಹಾಗೂ ನಮ್ಮ ದೇಶದ ಪ್ರಧಾನಿಗಳು ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ ಅಲ್ಲಿಯೂ ನಾಗರಿಕರನ್ನು ಅವರ ಭಾವನೆಯನ್ನು ಬೇರೆ ಕಡೆ ಸೆಳೆಯಲು ಪ್ರಯತ್ನ ಪಡುತ್ತಿದ್ದಾರೆ. ಇಲ್ಲಿ ಮೋದಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಹಲವು ಯೋಜನೆಗಳನ್ನು ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿಯೇ ಅಷ್ಟೇ ಅಲ್ಲದೆ ರಾಷ್ಟ್ರದಲ್ಲಿಯೂ ಆತಂಕ ಸೃಷ್ಟಿಮಾಡುವ ಸನ್ನಿವೇಶವಿದೆ. ಕಾರಣ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆ ಕೂಡ ಇದೆ. ನಮ್ಮ ದೇಶದಲ್ಲಿ ಎರಡನೇ ಬಾರಿಗೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದಿದೆ. ಅದನ್ನು ಸರಿಪಡಿಸಲು ಮುಂದಾಗದೆ ಜನರನ್ನು ದಿಕ್ಕು ತಪ್ಪಿಸುವ ಕಾರ್ಯಕ್ಕೆ ಕೇಂದ್ರ ಕೈ ಹಾಕಿದೆ ಎಂದು ಆರೋಪ ಮಾಡಿದರು.

ನೆರೆ ಪೀಡಿತ ಪ್ರದೇಶಕ್ಕೆ ಕೇಂದ್ರ ಇನ್ನೂ ಕೂಡ ಸರಿಯಾದ ಹಣವನ್ನು ಪಾವತಿಸಿಲ್ಲ. ಬೆಳೆವಿಮೆ ಹಣವನ್ನು ಕೂಡ ಪಾವತಿಸಿಲ್ಲ. ಹೀಗಿರುವಾಗ, ಸರ್ಕಾರ ಅದರ ಬಗ್ಗೆ ಗಮನಹರಿಸದೇ ವೈಯಕ್ತಿಕ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಾ ಅದರ ಬಗ್ಗೆಯೇ ಚಿಂತನೆ ಮಾಡ್ತಿದ್ದಾರೆ ಎಂದು ಟೀಕಿಸಿದರು.

ನನ್ನ ಕಾಲದಲ್ಲಿಯೇ ನರೇಗಾಕ್ಕೆ 1,200 ಕೋಟಿ ಹಣವನ್ನ ಕೇಂದ್ರ ಕೊಡಬೇಕಿತ್ತು, ಇನ್ನೂ ಕೊಟ್ಟಿಲ್ಲ, ಜೊತೆಗೆ ಇಲ್ಲಿಯವರೆಗೆ 2,900 ಕೋಟಿ ಬರಬೇಕಿದೆ. ಮೊದಲು ಅದನ್ನು ಬಿಡುಗಡೆ ಮಾಡಿ ರೈತರ ಸಂಕಷ್ಟವನ್ನು ಪಾರು ಮಾಡಲಿ. ನನ್ನ ಅಧಿಕಾರವಧಿಯಲ್ಲಿ ಸರ್ಕಾರವನ್ನು ನಾಚಿಕೆ ಸರ್ಕಾರ ಎಂದು ಟೀಕಿಸಿದ್ದಲ್ಲದೆ, ಸರ್ಕಾರ ಟೇಕಾಫ್ ಆಗಿಲ್ಲ ಅಂತ ಟೀಕಾ ಪ್ರಹಾರ ಮಾಡಿದ್ದರು. ಅವರ ಸರ್ಕಾರ ಟೇಕಾಫ್ ಆಗಿದೆಯಾ ಎಂಬುದೇ ಅನುಮಾನವಾಗಿದೆ ಎಂದರು.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ಕಳೆದ ಬಾರಿ ಸಿದ್ದರಾಮಯ್ಯನವರು ಮುಂದಿನದ್ದು ನಮ್ಮದೇ ಸರ್ಕಾರ ಎಂದ್ರು. ಅವರು 78ಕ್ಕೆ ಇಳಿದ್ರು. ಹಾಗಾಗಿ ಅಧಿಕಾರ ಶಾಶ್ವತವಲ್ಲ. ನಾವು ಮಾಡಿದ ಕೆಲಸ ಮಾತ್ರ ಶಾಶ್ವತ ಅದನ್ನು ಉಳಿಸಿಕೊಂಡು ಹೋಗಿ ಅಂತ ಸಲಹೆ ನೀಡಿದ ಅವರು, ಏಸು ಪ್ರತಿಮೆ ಬಗ್ಗೆ ನಾನು ರಾಜಕೀಯ ಬೆರಸಲ್ಲ. ನಮ್ಮಲ್ಲಿ ವಿವಿಧತೆಯಲ್ಲಿ ಏಕತೆ ಎನ್ನುವ ರಾಷ್ಟ್ರ. ಅಲ್ಲಿ ಸಾಕಷ್ಟು ಕ್ರಿಶ್ಚಿಯನ್ ಇದ್ದಾರೆ. ಅಲ್ಲಿ ಡಿಕೆಶಿ ಶಾಸಕನಿದ್ದ ಕಾರಣ ಓಕೆ ಎಂದಿದ್ದಾರೆ. ಸಂವಿಧಾನದಲ್ಲಿ ಕಾನೂನು ಬದ್ಧವಾಗಿ ಯಾವ ಪ್ರತಿಮೆಯನ್ನಾದ್ರು ಮಾಡಬಹುದು. ಆದ್ರೆ ಗೊಂದಲವಿದ್ರೆ ಕೈಹಾಕುವುದು ಬೇಡ ಎನ್ನುವುದು ನನ್ನ ಅಭಿಪ್ರಾಯ ಎಂದರು.

Intro:ಹಾಸನ: ದೇಶದಲ್ಲಿಯೇ ಅಷ್ಟೇ ಅಲ್ಲದೆ ರಾಷ್ಟ್ರದಲ್ಲಿಯೂ ಆತಂಕ ಸೃಷ್ಟಿಮಾಡುವ ಸನ್ನಿವೇಶವಿದೆ ಕಾರಣ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆ ಇದೆ ಅಂತ ನಮ್ಮ ದೇಶದಲ್ಲಿಯೂ ಎರಡನೇ ಬಾರಿಗೆ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದಿದೆ ಅದನ್ನು ಸರಿಪಡಿಸಲು ಮುಂದಾಗದೆ ಜನರನ್ನು ದಿಕ್ಕು ತಪ್ಪಿಸುವ ಕಾರ್ಯಕ್ಕೆ ಕೇಂದ್ರ ಕೈಹಾಕಿದೆ ಅಂತ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು

ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಮೆರಿಕ ಮತ್ತು ನಮ್ಮ ದೇಶದ ಪ್ರಧಾನಿಗಳು ಒಂದೇ ದೋಣಿಯಲ್ಲಿ ಸಾಗುತ್ತಿದ್ದಾರೆ ಅಲ್ಲಿಯೂ ನಾಗರಿಕರನ್ನು ಅವರ ಭಾವನೆಯನ್ನು ಬೇರೆ ಕಡೆ ಸೆಳೆಯಲು ಪ್ರಯತ್ನ ಪಡುತ್ತಿದ್ದಾರೆ ಇಲ್ಲಿ ಮೋದಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಹಲವು ಯೋಜನೆಗಳನ್ನು ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಕೇಂದ್ರದ ಹೊಸ ಯೋಜನೆ ನಡವಳಿಕೆಗಳಿಂದ ದೇಶದಲ್ಲಿ ಹೂಡಿಕೆ ಮಾಡುವುದಕ್ಕೂ ಬರಲು ಇತರ ದೇಶದ ಅವರಷ್ಟೇ ಅಲ್ಲದೆ ನಮ್ಮ ದೇಶದವರು ಕೂಡ ಹಿಂದೇಟು ಹಾಕುತ್ತಿದ್ದಾರೆ ಆದರೆ ದೇಶ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ ಎಂದ ಅವರು ರಾಷ್ಟ್ರದಲ್ಲಿ ದೊಡ್ಡ ದೊಡ್ಡ ಪ್ರತಿಭಟನೆಗಳು ನಡೆದಿದ್ದರೂ ಯಾವುದೇ ಅತಾಚುರ್ಯ ನಡೆದಿಲ್ಲ ಆದರೆ ಮಂಗಳೂರಿನಲ್ಲಿ ಮಾತ್ರ ಚೆನ್ನ ಗಲಭೆಯಲ್ಲಿ ಕಲ್ಲುತೂರಾಟ ಮೂಲಕ ದೇಶವೇ ಹೊತ್ತಿ ಉರಿಯಿತು ಅಂತಹ ಕಾರ್ಯ ಆಗಬಾರದಿತ್ತು ಅದನ್ನು ತಡೆಯುವಂತಹ ಪ್ರಯತ್ನಕ್ಕೆ ಸರ್ಕಾರ ಮುಂದಾಗಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.

ಇನ್ನು ಇಸಿಎಂಪಿ ಆರ್ ಕಾಯ್ದೆ ನಾ ಆರು ತಿಂಗಳು ಮುಂದೂಡಿದರೆ ಉತ್ತಮ ಕಾರಣ ನೆರೆ ಪೀಡಿತ ಪ್ರದೇಶಕ್ಕೆ ಕೇಂದ್ರ ಇನ್ನು ಸರಿಯಾದ ಹಣವನ್ನು ಪಾವತಿಸಿಲ್ಲ ಬೆಳೆವಿಮೆ ಹಣವನ್ನು ಕೂಡ ಪಾವತಿಸಿಲ್ಲ ಹೀಗಿರುವಾಗ, ಸರ್ಕಾರ ಅದ್ರ ಬಗ್ಗೆ ಗಮನಹರಿಸದೇ ವೈಯಕ್ತಿಕ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಾ ಅದರ ಬಗ್ಗೆ ಚಿಂತನೆ ಮಾಡ್ತಿದ್ದಾರೆ ಎಂದು ಟೀಕಿಸಿದರು.

ನನ್ನ ಕಾಲದಲ್ಲಿಯೇ ನರೇಗಾಕ್ಕೆ 1200 ಕೋಟಿ ಹಣವನ್ನ ಕೇಂದ್ರ ಕೊಡಬೇಕಿತ್ತು. ಇನ್ನು ಕೊಟ್ಟಿಲ್ಲ ಜೊತೆಗೆ ಇಲ್ಲಿಯವರೆಗೆ 2900 ಕೋಟಿ ಬರಬೇಕಿದೆ ಮೊದಲು ಅದನ್ನು ಬಿಡುಗಡೆ ಮಾಡಿ ರೈತರ ಸಂಕಷ್ಟವನ್ನು ಪಾರು ಮಾಡಲಿ. ನನ್ನ ಅಧಿಕಾರವಧಿಯಲ್ಲಿ ಸರಕಾರವನ್ನು ಸೀಟು ನಾಚಿಕೆ ಸರ್ಕಾರ ಎಂದು ಟೀಕಿಸಿದ್ದಲ್ಲದೆ ಸರ್ಕಾರ ಟೇಕಾಫ್ ಆಗಿಲ್ಲ ಅಂತ ಟೀಕಾಪ್ರಹಾರ ಮಾಡಿದವರ ಇಂದಿನ ಸರ್ಕಾರ ಟೇಕಾಫ್ ಆಗಿದ್ಯಾ ಎಂಬುದೇ ಅನುಮಾನವಾಗಿದೆ. ಇನ್ನು ಬಿಎಸ್ ವೈ ಯಡಿಯೂರಪ್ಪನವರು 2020 21ರ ಬಜೆಟ್ ಮಂಡಿಸಬೇಕು ಆದರೆ ಅಧಿಕಾರಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ ಯಾವ ರೀತಿ ಬಜೆಟ್ ಮಂಡನೆಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು ಅಂತ ಅಂತ ಸರ್ಕಾರ ಇದಾಗಿದೆ ಎಂದ್ರು.

ಇನ್ನು ದೇಶದ ಮತ್ತು ರಾಜ್ಯದ ಪರಿಸ್ಥಿತಿ ಎತ್ತ ಸಾಗಿದೆ. ನೀರಾವರಿ ಸಮಸ್ಯೆಯಿಂದ ಹಿಡಿದು ಎಲ್ಲವನ್ನು ಯುನೆಸ್ಕೋ ಕೇಳಿರುವ ಮಾಹಿತಿಗೆ ನಮ್ಮ ರಾಜ್ಯದವರೇ ಆದ ಗೋಪಾಲಗೌಡರು ಸುದೀರ್ಘ 250ಕ್ಕೂ ಹೆಚ್ಚು ಪುಟಗಳ ಮಾಹಿತಿಯನ್ನು ನೀಡಿರುವುದನ್ನು ನಾನು ಓದಿದ್ದೇನೆ ಸಮಯ ಬಂದಾಗ ನಾನು ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಎಂದರು.

ಇನ್ನು ಅಸ್ಸಾಂನಲ್ಲಿ 3.4 ಕೋಟಿ ಜನಸಂಖ್ಯೆ ಇದ್ದು, 19ಲಕ್ಷ ಅಕ್ರಮ ವಲಸಿಗರಿಗೆ ಪುನರ್ವಸತಿ ಕಲ್ಪಿಸಬೇಕಾದರೆ ಅವರಿಗೆ 15600 ಕೋಟಿ ಹಣ ಬೇಕಾಗುತ್ತೆ. ಇನ್ನು ದೇಶದಲ್ಲಿ ಏಳೂವರೆ ಕೋಟಿ ಜನಸಂಖ್ಯೆ ಅಕ್ರಮ ವಲಸಿಗರಿದ್ದು, ಅವರೆಲ್ಲಾ ಇವತ್ತು ಸುಪ್ರಿಂ ಮೊರೆ ಹೊದ್ರೆ ಸುಪ್ರೀಂ ತೀರ್ಪು ಬರುವುದರೊಳಗೇ ಅವರಿರಲಿ ಅವರ ತಲೆಮಾರುಗಳು ಉರುಳಿದ್ರು, ಸಮಸ್ಯೆ ಬಗೆಹರಿಯುವುದಿಲ್ಲ.

ಮೋದಿ ಹಣದ ಬಗ್ಗೆ ವಾಟ್ಸಾಪ್ಲನಲ್ಲಿ ಚರ್ಚೆ ಮಾಡ್ತಿದ್ದಾರೆ. ಹಾಗಿದ್ರೆ ನಾನು ಸಾಲ ಮನ್ನ ಮಾಡಿಲ್ವಾ. . . ? ತೆಂಗು ಬೆಳೆಗಾರರಿಗೆ ನನ್ನ ಅವದಿಯಲ್ಲಿ 118ಕೋಟಿ ಬಿಡುಗಡೆ ಮಾಡಿದ್ದು, 54 ಕೋಟಿ ಹಾಸನಕ್ಕೆ ನೀಡಿದ್ದೇನೆ. ರಣಘಟ್ಟದ ಬಗ್ಗೆ ಈಗ ಬಂದಿರೋ ಮುಖ್ಯಮಂತ್ರಿ ಆಗ ಎಲ್ಲಿದ್ರು ಎಂದು ಪ್ರಶ್ನೆ ಮಾಡಿದ ಅವರು ನನ್ನ ಅವಧಿಯಲ್ಲಿ ಬಿಡುಗಡೆ ಮಾಡಿರುವ ಹಣವನ್ನು ಮತ್ತು ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದು ಅದನ್ನು ಮುಂದುವರಿಸಿಕೊಂಡು ಹೋದರೆ ಅದೇ ಅಭಿವೃದ್ಧಿ ಕೆಲಸವಾಗುತ್ತದೆ ಮೊದಲು ಅದನ್ನು ಮಾಡುವ ಮೂಲಕ ತಮ್ಮ ಹೆಸರನ್ನು ಉಳಿಸಿಕೊಳ್ಳಿ ಅಧಿಕಾರ ಇವತ್ತು ಇರುತ್ತೆ ನಾಳೆ ಹೋಗುತ್ತೆ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿ ಎಂದ್ರು.

ನಾನು 14 ತಿಂಗಳಲ್ಲಿ ಮಾಡಿದ ಕೆಲಸಗಳ ಮೇಲೆ ಕೇಂದ್ರ ರಾಜ್ಯಕ್ಕೆ ರ್ಯಾಂಕಿಂಗ್ ನೀಡಿದೆ. ಅದನ್ನ ನಾವು ಮಾಡಿದ್ದೇವೆ ಬೀಗುತ್ತಿದ್ದಾರೆ. ಅವರು ಮಾಡಿದ ಕೆಲಸಕ್ಕೆ ಆರ್ಥಿಕ ಇಲಾಖೆ ರ್ಯಾಂಕಿಂಗ್ ಕೊಟ್ಟಿಲ್ಲ ನನ್ನ ಅವಧಿಯ ಕೆಲಸಕ್ಕೆ ಕೊಟ್ಟಿರುವುದು ಅದನ್ನು ಗಮನದಲ್ಲಿಟ್ಟುಕೊಳ್ಳಿ ತಿರುಗೇಟು ನೀಡಿದರು.

ಮಂಗಳೂರು ಗಲಭೆಗೆ ನಾನೇ ಮೊದಲು ಹೋಗಿದ್ದು, ಅಲ್ಲಿನ ಸಂತ್ರಸ್ತರನ್ನು ಮಾತನಾಡಿಸಿದಾಗ ಗೋಲಿಬಾರ್ ಪ್ರಕರಣ ಮತ್ತು ಎಲ್ಲಾ ವಿಚಾರಗಳು ಹೊರಗೆ ಬಂದಿದ್ದು ಸರ್ಕಾರ ಬೀಳಿಸಲು ನಾನು ಮೈಬಿದ್ದು ಹೋಗುವುದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಸದ್ಯ ಜನರಿಗೆ ಸರ್ಕಾರ ಬೇಡ ಅನಿಸಿದಾಗ ನಾವು ಅವರೊಂದಿಗೆ ಕೈಜೋಡಿಸಿ ಪ್ರತಿಭಟನೆ ಮಾಡುತ್ತೇವೆ.

ನಾನು ಯಾವ ತಪ್ಪನ್ನೂ ಮಾಡಿಲ್ಲ ಹಾಗೇನಾದರೂ ಮಾಡಿದ್ದರೆ ನಾನು ಮುಂದಿನ ದಿನಗಳಲ್ಲಿ ನಮ್ಮ ಶಾಸಕರನ್ನು ಕಾರ್ಯಕರ್ತರನ್ನು ಸಂಕ್ರಾಂತಿ ಬಳಿಕ ಸಭೆ ಕರೆದು ತಪ್ಪುಗಳ ಬಗ್ಗೆ ಪರಾಮರ್ಶೆ ಮತ್ತು ಚರ್ಚೆಗಳನ್ನು ಮಾಡಿ ಸರಿಪಡಿಸಿಕೊಳ್ಳುವಂತೆ ನಿಟ್ಟಿನಲ್ಲಿ ಚಿಂತನೆ ಮಾಡುತ್ತೇವೆ. ನಾನೇನು ತಪ್ಪು ಮಾಡಿಲ್ಲ. 5ವರ್ಷ ಆಳ್ವಿಕೆ ನಡೆಸಿದ ಸರ್ಕಾರಕ್ಕಿಂತ ಹೆಚ್ಚು ರಾಜ್ಯಕ್ಕೆ ಕೊಡುಗೆ ನೀಡಿದ್ದೇನೆ ಎಂಬ ಆತ್ಮ ತೃಪ್ತಿ ನನಗಿದೆ. ನನಗೆ ಇತರೆ ಭಾಷೆಗಳಿಗಿಂತ ಕನ್ನಡ ಭಾಷೆಯಲ್ಲಿ ಮಾತನಾಡುವುದಕ್ಕೆ ಸ್ಪಷ್ಟವಾಗಿ ಬರುತ್ತೆ ಯಾವುದೇ ವಿಚಾರವನ್ನು ಮಾತನಾಡಬೇಕಾದರೆ ಕನ್ನಡದಲ್ಲಿ ಮಾತನಾಡಲು ನಾನು ಪ್ರಾರಂಭಿಸಿದರೆ ಎಲ್ಲರಿಗಿಂತಲೂ ಹೆಚ್ಚು ಚರ್ಚೆ ಮಾಡುವ ತಾಕತ್ತು ನನಗಿದೆ ಎಂದ ಅವರು
ವಾಮಮಾರ್ಗದಲ್ಲಿ ಅಧಿಕಾರ ಹಿಡಿದ್ದಿದ್ದೀರಾ. ಅದನ್ನ ನಿಭಾಯಿಸಿಕೊಂಡು ಹೋಗಿ ಜೊತೆಗೆ ತಮ್ಮ ಸರ್ಕಾರ ಹಣವನ್ನ ಹೇಗೆ ಲೂಟಿಯ ಮಾಡುತ್ತಿದೆ ಎಂಬುದು ಬೀದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ ಎಂದ್ರು.

ಕಳೆದ ಬಾರಿ ಸಿದ್ದರಾಮಯ್ಯನವರು ಮುಂದಿನದ್ದು ನಮ್ಮದೇ ಸರ್ಕಾರ ಎಂದ್ರು. ಅವರು 78ಕ್ಕೆ ಇಳಿದ್ರು. ಹಾಗಾಗಿ ಅಧಿಕಾರ ಶಾಶ್ವತವಲ್ಲ. ನಾವು ಮಾಡಿದ ಕೆಲಸ ಮಾತ್ರ ಶಾಶ್ವತ ಅದನ್ನು ಉಳಿಸಿಕೊಂಡು ಹೋಗಿ ಅಂತ ಸಲಹೆ ನೀಡಿದರು.

ಏಸು ಪ್ರತಿಮೆ ಬಗ್ಗೆ ನಾನು ರಾಜಕೀಯ ಬೆರಸಲ್ಲ. ನಮ್ಮಲ್ಲಿ ವಿವಿಧತೆಯಲ್ಲಿ ಏಕತೆ ಎನ್ನುವ ರಾಷ್ಟ್ರು. ಅಲ್ಲಿ ಸಾಕಷ್ಟು ಕ್ರಿಶ್ಚಿಯನ್ ಇದ್ದಾರೆ. ಅಲ್ಲಿ ಡಿಕೆಶಿ ಶಾಸಕನಿದ್ದ ಕಾರಣ ಓಕೆ ಎಂದಿದ್ದಾರೆ. ಸಂವಿಧಾನದಲ್ಲಿ ಕಾನೂನು ಬದ್ದವಾಗಿ ಯಾವ ಪ್ರತಿಮೆಯನ್ನಾದ್ರು ಮಾಡಬಹುದು. ಆದ್ರೆ ಗೊಂದಲವಿದ್ರೆ ಕೈಹಾಕುವುದು ಬೇಡ ಎನ್ನುವುದು ನನ್ನ ಅಭಿಪ್ರಾಯ.

ಪೌರತ್ವ ಕಾಯ್ದೆ ಸದ್ಯ ಅವಶ್ಯಕತೆಯಿರಲಿಲ್ಲ. ವಾಜಪೇಯಿಯವರ ಕಾಲದಲ್ಲಿಯೇ ಪ್ರಸ್ತಾಪವಾಗಿತ್ತು.
130ಕೋಟಿ ಕುಟುಂಬವೂ ಹೊಸದಾಗಿ ಪ್ರಮಾಣ ಪತ್ರ ಮಾಡಿಸಬೇಕು. ಅದೇ ಇದ್ರ ಉದ್ದೇಶ. ಭಾರತ್ ಬಂದ್ ಗೆ ಯಾರು ನನ್ನ ಜೊತೆ ಯಾರು ಮಾತನಾಡಿಲ್ಲ ಎಂದ್ರು.

ಬೈಟ್ : ಹೆಚ್. ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Body:7203289

Conclusion:welcome
ETV Bharat Logo

Copyright © 2024 Ushodaya Enterprises Pvt. Ltd., All Rights Reserved.