ETV Bharat / state

ಚುನಾವಣೆ ಆಯೋಗವು ಸರ್ಕಾರದ ಕೈಗೊಂಬೆಯಾಗಿ ಸಂಪೂರ್ಣ ವಿಫಲವಾಗಿದೆ:ಎಚ್‌.ಡಿ. ರೇವಣ್ಣ - ಮಾಜಿ ಸಚಿವ ಎಚ್‌.ಡಿ. ರೇವಣ್ಣ

ಆಡಳಿತ ಪಕ್ಷದ ಹಿಡಿತಕ್ಕೆ ಪುರಸಭೆ, ನಗರಸಭೆ ಸಿಗುತ್ತಿಲ್ಲ ಎಂಬ ಕಾರಣದಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯನ್ನು ಮುಂದೂಡಿಕೊಂಡು ಬರಲಾಗುತ್ತಿದೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ದೂರಿದರು.

H D Revanna
ಎಚ್‌.ಡಿ. ರೇವಣ್ಣ
author img

By

Published : Jun 19, 2020, 10:54 PM IST

ಹಾಸನ: ಕೊರೊನಾ ಕಾರಣದಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಲಾಗಿದೆ. ಕೊರೊನಾ ಸಮಸ್ಯೆ ಇರುವುದು ಮೂರು ತಿಂಗಳಿಂದ ಚುನಾವಣಾ ಆಯೋಗವು 6 ತಿಂಗಳು ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಮೀಸಲಾತಿ ನಿಗಧಿ ಮಾಡಬೇಕಿತ್ತು ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ದೂರಿದರು.

ಚುನಾವಣೆ ಆಯೋಗವು ಸರ್ಕಾರದ ಕೈಗೊಂಬೆಯಾಗಿ ಸಂಪೂರ್ಣ ವಿಫಲವಾಗಿದೆ:ಎಚ್‌.ಡಿ. ರೇವಣ್ಣ

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಚುನಾವಣೆ ಆಯೋಗವು ಸರ್ಕಾರದ ಕೈಗೊಂಬೆಯಾಗಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಚುನಾವಣೆ ಆಯೋಗಕ್ಕೆ ತನ್ನದೆ ಆದ ಗೌರವ ಇರುತ್ತದೆ. ಆ ಗೌರವವನ್ನು ಅದು ಉಳಿಸಿಕೊಂಡು ಹೋಗಲಿ ಎಂದು ಹೇಳಿದರು.

ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಇನ್ನೂ ಆಡಳಿತ ನಡೆಸಲು ಅವಕಾಶ ಕೊಟ್ಟಿಲ್ಲ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ವಿಚಾರ ನ್ಯಾಯಾಲಯದಲ್ಲಿದ್ದು, ಸರ್ಕಾರ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಒದಗಿಸಿ ತಡೆಯಾಜ್ಞೆ ತೆರವು ಮಾಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಅಡ್ವಕೇಟ್‌ ಜನರಲ್ ಅವರು ಯಾವುದೇ ಪಕ್ಷದ ಹಂಗಲ್ಲಿ ಇರಬಾದರು. ಪಬ್ಲಿಕ್‌ ಪ್ರಸೀಕ್ಯೂಟರ್‌ಗಳು ತಮ್ಮ ಕರ್ತವ್ಯ ಲೋಪ ಆಗದಂತೆ ಕಾರ್ಯ ನಿರ್ವಹಿಸಲಿ. ಒಂದು ವೇಳೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಒದಗಿಸಲು ಆಗದಿದ್ದರೆ ಚುನಾವಣೆ ರದ್ಧು ಮಾಡಲಿ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸದೇ ಇರುವುದು ಇದು ಒಂದು ಇತಿಹಾಸ ಎಂದರು.

ಆರ್‌ಡಿಪಿಆರ್ ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣೆ ಆಯೋಗಕ್ಕೆ ಅದರಪಾಡಿಗೆ ಅದು ಕೆಲಸ ಮಾಡಿಕೊಂಡು ಹೋಗುವ ಸ್ವಾತಂತ್ರ

ನೀಡಲಿ. ಮಲಗಿದ್ದ ಚುನಾವಣೆ ಆಯೋಗವನ್ನು ವಿರೋಧ ಪಕ್ಷದವರು ಒಂದು ಎಳಿಸಬೇಕಾಯಿತು. ಯಾರದ್ದೋ ಹಿತಕ್ಕೋಸ್ಕರ ಆಯೋಗಕ್ಕೆ ಧಕ್ಕೆ ಬರುವ‌ ಕೆಲಸ ಮಾಡಬಾರದು ಎಂದು ಹೇಳಿದರು.

ದೇವೇಗೌಡರು, ಜನತೆ ಹಾಗೂ ದೇವರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ‌ ಗೆಲ್ಲುತ್ತಿದ್ದೇನೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಲು ದೇವೇಗೌಡರೇ ಕಾರಣ. ಅವರು ರಾಜ್ಯಸಭೆ ಪ್ರವೇಶಿಸಲು‌ ಯಾರ‌ ಬಳಿಗೂ ಹೋಗಲಿಲ್ಲ. ಅವರು‌ ಯಾವತ್ತು‌ ಹಿಂದಿನ ‌ಬಾಗಿಲಿನಿಂದ ಬಂದು ರಾಜಕೀಯ ಮಾಡಿದವರಲ್ಲ. ಒಬ್ಬ ಸಜ್ಜನ ರಾಜಕಾರಣಿ ರಾಷ್ಟ್ರೀಯ ನಾಯಕರ ಒತ್ತಾಯದ ಮೇರೆಗೆ ಅವರು ರಾಜ್ಯಸಭೆ ಪ್ರವೇಶಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2.5 ಲಕ್ಷಕ್ಕಿಂತ ಮೇಲ್ಪಟ್ಟ ಯಾವುದೇ ಕಾಮಗಾರಿಗಳಿಗೆ ಅನುಮೋದನೆ ಸಿಗಬೇಕಾದರೆ ಮೂರು ಕಡೆ ಲಂಚ ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಹೇಳುತ್ತಾರೆ. ಬೆಂಗಳೂರಿನ ಮುಖ್ಯ ಎಂಜಿನಿಯರ್‌ ಬಳಿಗೆ ಕಡತ ಹೋಗಿ ಅನುಮೊದನೇ ಪಡೆಯಬೇಕಿದ್ದು, ಗುತ್ತಿಗೆದಾರರಿಗೆ ಸಾಕಾಗಿ ಹೋಗಿದೆ. ಇಂತಹ ಆಡಳಿತ ನಡೆಸಲು ಇವರಿಗೆ ನಾಚಿಕೆ ಆಗಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.