ETV Bharat / state

ಶಾಸಕ ಶಿವಲಿಂಗೇಗೌಡರ ವಿರುದ್ಧ ಹೆಚ್‌ಡಿಕೆ-ಹೆಚ್‌ಡಿಡಿ ಜುಗಲ್‌ಬಂದಿ ವಾಗ್ದಾಳಿ.. ಜೆಡಿಎಸ್‌ನ ಮತ್ತೊಂದು ವಿಕೆಟ್‌ ಪತನವೇ!?

ನಾನು ತೆಂಗಿಗೆ ಪರಿಹಾರ ವಿಚಾರವಾಗಿ ಧರಣಿ ಕೂರುತ್ತೇನೆ. ನೀವು ಬಂದು ನನ್ನನ್ನು ಸಮಧಾನ ಮಾಡುವ ರೀತಿ ಮಾಡಿ ಎಂದು ನನಗೆ ಹೇಳಿಕೊಟ್ಟಿದ್ದ. ನಾಟಕ ಮಾಡುವುದರಲ್ಲಿ ನಂ.1 ಅವರೊಬ್ಬರೇ ಎಂದು ದೇವೇಗೌಡರು ನಗು ನಗುತ್ತಲೇ ಶಿವಲಿಂಗೇಗೌಡರಿಗೆ ಟಾಂಗ್​ ನೀಡಿದರು..

Former CM H.D.Kumaraswamy
ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ
author img

By

Published : Apr 22, 2022, 1:12 PM IST

ಹಾಸನ : ನಿನ್ನೆ ನಡೆದ ಜಲಧಾರೆ ಸಮಾವೇಶಕ್ಕೆ ಜಿಲ್ಲೆಯ ಇಬ್ಬರು ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಎ.ಟಿ.ರಾಮಸ್ವಾಮಿ ಗೈರಾಗಿದ್ದರು. ಆದರೆ, ಶಿವಲಿಂಗೇಗೌಡರ ವಿರುದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಆರಂಭದಲ್ಲಿ ಮಾತನಾಡಿದ ಹೆಚ್‌ಡಿಕೆ, ಬೆನ್ನಿಗೆ ಚೂರಿ ಹಾಕೋ ರಾಜಕಾರಣ ಮಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಪಕ್ಷದಲ್ಲಿದ್ದುಕೊಂಡೇ ಕತ್ತು ಕೊಯ್ಯುವ ಕೆಲಸ ಮಾಡುತ್ತಿದ್ದಾರೆ. ಅಂತಹ ದ್ರೋಹವನ್ನು ದಯಮಾಡಿ ಮುಂದೆ ಮಾಡಬೇಡಿ.

ನಾನು ಮುಖ್ಯಮಂತ್ರಿಯಾಗಿದ್ದಾಗ ರೇವಣ್ಣ, ಬಾಲಕೃಷ್ಣ ಹಾಗೂ ಶಿವಲಿಂಗೇಗೌಡ ಕ್ಷೇತ್ರಕ್ಕೆ ಎಂಜಿನಿಯರಿಂಗ್ ಕಾಲೇಜ್ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಹೊಳೆನರಸೀಪುರಕ್ಕೆ ಹಾಗೂ ಅರಸೀಕೆರೆ ಹಿಂದುಳಿದ ಕ್ಷೇತ್ರ ಎಂದು ಕಾಲೇಜು ಮಂಜೂರು ಮಾಡಿಕೊಟ್ಟೆ ಎಂದರು.

ಇನ್ನು ತೆಂಗಿನ ನುಸಿಪೀಡೆ ರೋಗಕ್ಕೆ ಪರಿಹಾರ ನೀಡಬೇಕು ಎಂದು ಇದೇ ಶಿವಲಿಂಗೇಗೌಡ ಧರಣಿ ಕೂತರು. ಆಗ ಯಾವ ಪ್ರಧಾನಿಯೂ ಹಣ ಬಿಡುಗಡೆ ಮಾಡಲಿಲ್ಲ. 57 ಕೋಟಿ ರೂಪಾಯಿಗಳನ್ನು ಹಾಸನ ಜಿಲ್ಲೆಯ ರೈತರಿಗೆ ಕೊಟ್ಟಿದ್ದು ನನ್ನ ಸರ್ಕಾರ, ಅದನ್ನ ಅರ್ಥಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಈಗ ನನ್ನ ಗೆಲುವಿಗೆ ಕಾರಣ ಸಿದ್ದರಾಮಯ್ಯ, ಅವರು ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಯೋಜನೆಯನ್ನು ನಮಗೆ ಕೊಟ್ಟರು ಎಂದು ಹೊಗಳುತ್ತಿದ್ದಾರೆ ಎಂದು ಮಾತಿನಲ್ಲಿಯೇ ತಿವಿದರು.

ಮೈಕ್ ಹಿಡಿದು ಮಧ್ಯ ಮಾತನಾಡಿದ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ, ಈ ಜಿಲ್ಲೆಯಲ್ಲಿ ಡ್ರಾಮಾ ಮಾಡುವ ವ್ಯಕ್ತಿ ಯಾರಾದರೂ ಇದ್ದರೆ ಅದು ಶಿವಲಿಂಗೇಗೌಡ. ಇದೇ ಪುಣ್ಯಾತ್ಮ ಬಂದು ನಾನು ತೆಂಗಿನಮರಕ್ಕೆ ಪರಿಹಾರ ಬೇಕು ಅಂತಾ ಮರದ ಕೆಳಗೆ ಕುಳಿತು ಪ್ರತಿಭಟನೆ ಮಾಡುತ್ತೇವೆ. ಮೂರು ದಿನ ಬಿಟ್ಟು ನನ್ನನ್ನು ಮೇಲೆತ್ತುವ ರೀತಿ ನೀವು ಬಂದು ನನ್ನನ್ನು ಸಮಾಧಾನ ಮಾಡಿ, ಜೊತೆಗೆ ಮುಖ್ಯಮಂತ್ರಿ ಕುಮಾರಣ್ಣನಿಗೆ ಹೇಳಿ ಪರಿಹಾರ ಕೊಡಿಸಿ ಅಂತಾ ಹೇಳಿದ ಎಂದು ನಗು ನಗುತ್ತಲೇ ಶಿವಲಿಂಗೇಗೌಡರಿಗೆ ಟಾಂಗ್​ ನೀಡಿದರು.

ನಾನು ರಾಜ್ಯದ ಜನರ ಸಾಲ ಮನ್ನಾ ಮಾಡಿದೆ. ಆದರೆ, ಜನತೆಗೆ ನನ್ನ ಮೇಲೆ ಕರುಣೆ, ಪ್ರೀತಿ ಇಲ್ಲ ಇಂದು ಬೇಸರ ವ್ಯಕ್ತಪಡಿಸಿದರು. ಇನ್ನು ರಾಜ್ಯದಲ್ಲಿ ಮುಂದಿನ ಬಾರಿ 2023ಕ್ಕೆ ಸ್ವತಂತ್ರ್ಯವಾಗಿ ನಮ್ಮ ಪಕ್ಷಕ್ಕೆ ಅಧಿಕಾರ ಕೊಡಿ ನಮ್ಮ ಪಂಚತತ್ವ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ನಾನು ಶ್ರಮಿಸುತ್ತೇನೆ. ಹಾಗೇನಾದರೂ ನಾನು ಪೂರ್ಣಗೊಳಿಸದಿದ್ದರೆ ನನ್ನ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಇತ್ತೀಚಿನ ದಿನಗಳಲ್ಲಿ ಶಿವಲಿಂಗೇಗೌಡರು ಕಾಂಗ್ರೆಸ್ ಪಕ್ಷದವರೊಂದಿಗೆ ಒಡನಾಟ ಇಟ್ಟುಕೊಂಡಿದ್ದು, ಜೆಡಿಎಸ್ ಪಕ್ಷದಿಂದ ಮತ್ತೊಂದು ವಿಕೆಟ್ ಪತನ ಎಂಬುದನ್ನು ವೇದಿಕೆಯಲ್ಲಿ ಕುಮಾರಸ್ವಾಮಿ ಪರೋಕ್ಷವಾಗಿ ಹೇಳುವ ಮೂಲಕ ಶಿವಲಿಂಗೇಗೌಡ ವಿರುದ್ಧ ಕೆಂಡಾಮಂಡಲವಾದರು.

ಇದನ್ನೂ ಓದಿ: ಮತ ಭಿಕ್ಷೆಗಾಗಿ ಜೋಳಿಗೆ ಹಿಡಿದು ಹೊರಟಿದ್ದೇನೆ.. ಜನರು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ : ಸಿ.ಎಂ ಇಬ್ರಾಹಿಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.