ETV Bharat / state

ಹಾಸನದಲ್ಲಿ ಯುವಕನಿಗೆ ಥಳಿಸಿ ಪುಂಡಾಟಿಕೆ

ಹಾಸನ ನಗರದ ಹೃದಯ ಭಾಗದ ಸಿಟಿ ಬಸ್​ ನಿಲ್ದಾಣದ ಬಳಿ ಗುಂಪೊಂದು ಯುವಕನಿಗೆ ಥಳಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

group-assault-on-a-boy-in-hassan
ಹಾಸನ ಯುವಕನ ಮೇಲೆ ಹಲ್ಲೆ
author img

By

Published : Jul 18, 2020, 4:46 PM IST

ಹಾಸನ: ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಗುಂಪೊಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದ್ದು, ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜುಲೈ 17ರ ಸಂಜೆ ಸುಮಾರು 5.45 ರ ಸಮಯದಲ್ಲಿ ನಾಲ್ಕೈದು ಯುವಕರ ತಂಡವೊಂದು ಸಿಟಿ ಬಸ್ ನಿಲ್ದಾಣದ ಸಂಕೀರ್ಣದಲ್ಲಿರುವ ಬ್ಯೂಟಿ ಪಾರ್ಲರ್ ಬಳಿ ಯುವಕನಿಗೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಸನದಲ್ಲಿ ಯುವಕನಿಗೆ ಥಳಿಸಿ ಪುಂಡಾಟಿಕೆ

ಯುವಕರು ಯಾರು, ಯಾವ ಕಾರಣಕ್ಕೆ ಗಲಾಟೆಯಾಗಿದೆ ಎನ್ನುವ ಕುರಿತು ತಿಳಿದು ಬಂದಿಲ್ಲ. ಕೊರೊನಾ ಭೀತಿಯ ಮಧ್ಯೆ ಜನ ಸಂಚಾರ ಇರುವ ಸ್ಥಳದಲ್ಲಿ ಯುವಕರು ಸಾಮಾಜಿಕ ಅಂತರ ಮರೆತು ಪುಂಡಾಟಿಕೆ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೆ ಮೊನ್ನೆಯಷ್ಟೆ ರಿಂಗ್ ರಸ್ತೆಯಲ್ಲಿ ಯುವಕರ ಮಧ್ಯೆ ಗುಂಪು ಘರ್ಷಣೆ ನಡೆದು ಓರ್ವ ಯುವಕ ಮೃತಪಟ್ಟಿದ್ದ. ಇಂಥ ಘಟನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಜನನಿಬಿಡ ಪ್ರದೇಶದಲ್ಲಿ ಪೊಲೀಸರ ನಿಯೋಜನೆಗೆ ಹೆಚ್ಚು ಒತ್ತು ನೀಡಿ, ಸಾರ್ವಜನಿಕರ ನಿರ್ಭಯ ಸಂಚಾರಕ್ಕೆ ನೆರವಾಗುವಂತೆ ಪೊಲೀಸ್ ಇಲಾಖೆಗೆ ಜನತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.