ETV Bharat / state

ಸವಿತಾ ಸಮಾಜದವರಿಗೆ ಸರ್ಕಾರ ಜೀವನ ಭದ್ರತೆ ಒದಗಿಸಲಿ.. ರವಿಕುಮಾರ್ ಒತ್ತಾಯ - ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್

ಹೆಚ್ಚು ಸುರಕ್ಷತಾ ಕ್ರಮ ಅನುಸರಿಸುತ್ತಿರುವ ವೈದ್ಯರು, ಸಹಾಯಕ ವೈದ್ಯರು, ಪೊಲೀಸರಿಗೆ ಕೊರೊನಾ ಅಂಟಿಕೊಂಡಿರುವ ಈ ವೇಳೆ ವ್ಯಕ್ತಿಗಳ ಸ್ಪರ್ಶ ಮಾಡದೆ ಕ್ಷೌರಿಕ ವೃತ್ತಿ ಮಾಡುವುದು ಅಸಾಧ್ಯದ ಕೆಲಸವಾಗಿದೆ. ನಮಗೆ ಜೀವ ವಿಮೆ, ಆರೋಗ್ಯ ವಿಮೆ ಘೋಷಿಸಿ ಕ್ಷೌರಿಕ ವೃತ್ತಿಯಲ್ಲಿರುವವರ ಜೀವನಕ್ಕೆ ಭದ್ರತೆ ಒದಗಿಸುವಂತೆ ಕೋರಿದರು..

Ravikumar
ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್
author img

By

Published : Jul 3, 2020, 8:47 PM IST

ಹಾಸನ : ಕೊರೊನಾ ವೈರಸ್​​ನ ಭೀತಿಯಲ್ಲಿ ಕ್ಷೌರಿಕ ವೃತ್ತಿ ಮಾಡುವುದೇ ಅಸಾಧ್ಯವಾಗಿರುವುದರಿಂದ ಸರ್ಕಾರ ನಮಗೆ ಜೀವನ ಭದ್ರತೆ ಒದಗಿಸಬೇಕು ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್ ತಿಳಿಸಿದರು.

ನಗರದಲ್ಲಿ ​ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್​ಡೌನ್​​ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದ ₹5 ಸಾವಿರ ಸಹಾಯ ಧನ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು 2020 ಜೂನ್ 30 ಕೊನೆ ದಿನವಾಗಿತ್ತು. ಆದರೆ, ಇದೀಗ ಜುಲೈ 10ರವರೆಗೂ ಅವಕಾಶ ನೀಡಿದ್ದು, ಕ್ಷೌರಿಕ ವೃತ್ತಿ ಮಾಡುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್
ನಂತರ ಮಾತು ಮುಂದುವರೆಸಿ, ಕ್ಷೌರಿಕ ವೃತ್ತಿದಾರರೆ ಸಹಿ ಮಾಡಿ ಅರ್ಜಿ ಸಲ್ಲಿಸಬೇಕು. ಸ್ವಯಂ ಘೋಷಿತ ಪತ್ರ, ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಒಬ್ಬ ಸದಸ್ಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದ ಅವರು, ಕ್ಷೌರಿಕ ವೃತ್ತಿಯಲ್ಲಿರುವ ಎಲ್ಲರಿಗೂ ಉದ್ಯೋಗದ ಪತ್ರ ನೀಡುವಂತೆ ಸಿಇಒ ಪರಮೇಶ್ ಸೂಚನೆ ನೀಡಿರುವುದಾಗಿ ಹೇಳಿದರು. ಅರ್ಜಿ ಸಲ್ಲಿಸಲು ಸಹಾಯಕ್ಕಾಗಿ ಎಂಜಿರಸ್ತೆ, ರವೀಂದ್ರ ನಗರದಲ್ಲಿರುವ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಜೊತೆಗೆ ಮೊಬೈಲ್ ಸಂಖ್ಯೆ 9964287775 ಹಾಗೂ 9535687945 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ​ಕ್ಷೌರಿಕರು ₹5 ಸಾವಿರ ಸಹಾಯಧನ ಪಡೆಯಲು ಬಿಪಿಎಲ್ ಕುಟುಂಬದ ಒಬ್ಬರಿಗೆ ಅವಕಾಶ ಕಲ್ಪಿಸಿದೆ. ಸೇವಾ ಸಿಂಧುವಿನಲ್ಲಿ​ ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಹೆಚ್ಚು ಸುರಕ್ಷತಾ ಕ್ರಮ ಅನುಸರಿಸುತ್ತಿರುವ ವೈದ್ಯರು, ಸಹಾಯಕ ವೈದ್ಯರು, ಪೊಲೀಸರಿಗೆ ಕೊರೊನಾ ಅಂಟಿಕೊಂಡಿರುವ ಈ ವೇಳೆ ವ್ಯಕ್ತಿಗಳ ಸ್ಪರ್ಶ ಮಾಡದೆ ಕ್ಷೌರಿಕ ವೃತ್ತಿ ಮಾಡುವುದು ಅಸಾಧ್ಯದ ಕೆಲಸವಾಗಿದೆ. ನಮಗೆ ಜೀವ ವಿಮೆ, ಆರೋಗ್ಯ ವಿಮೆ ಘೋಷಿಸಿ ಕ್ಷೌರಿಕ ವೃತ್ತಿಯಲ್ಲಿರುವವರ ಜೀವನಕ್ಕೆ ಭದ್ರತೆ ಒದಗಿಸುವಂತೆ ಕೋರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.