ETV Bharat / state

ಹೆಸರಿಗಷ್ಟೇ ಪ್ಲಾಸ್ಟಿಕ್​ ನಿಷೇಧ... ಎಗ್ಗಿಲ್ಲದೇ ಸಾಗಿದೆ ಬಳಕೆ... ಹೆಚ್ಚುತ್ತಿದೆ ತ್ಯಾಜ್ಯ

ನಗರದ ಸುತ್ತಮುತ್ತ ಕಸದ ರಾಶಿಗಳು ಎದ್ದುಕಾಣುತ್ತಿವೆ. ಸಾರ್ವಜನಿಕರು ರಸ್ತೆಯ ಬದಿಯಲ್ಲಿ, ಪ್ರಮುಖ ಸ್ಥಳದಲ್ಲಿ ಮನೆಯ ಹಾಗೂ ಹೋಟೆಲ್ ತ್ಯಾಜ್ಯ ಬಿಸಾಡುತ್ತಿರುವುದರಿಂದ ನಿತ್ಯ ಟನ್ ಗಟ್ಟಲೇ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ಪ್ಲಾಸ್ಟಿಕ್ ನೀಷೆದದ ನಡುವೆಯೂ ಹಾಸನದಲ್ಲಿ ಬಳಕೆ
author img

By

Published : Jun 13, 2019, 9:53 AM IST

ಹಾಸನ : ಪ್ಲಾಸ್ಟಿಕ್ ಬ್ಯಾನ್ ಮಾಡಿದ್ರೂ ಕೂಡ ಮಾರಾಟ ಮಾತ್ರ ಹಾಸನ ನಗರದಲ್ಲಿ ನಿಂತಿಲ್ಲ. ಇದರಿಂದ ನಿತ್ಯ ತ್ಯಾಜ್ಯ ಹೆಚ್ಚಾಗುತ್ತಿದ್ದು, ನಗರದ ಸಂತೆಪೇಟೆ ಬಿಳಿ ರಾಶಿ ರಾಶಿ ಕಸ ಸಂಗ್ರಹವಾಗುತ್ತಿದೆ. ಎರಡು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ.

ನಗರದ ಸುತ್ತಮುತ್ತ ಕಸದ ರಾಶಿಗಳು ಎದ್ದುಕಾಣುತ್ತಿವೆ. ಸಾರ್ವಜನಿಕರು ರಸ್ತೆ ಬದಿಯಲ್ಲಿ, ಪ್ರಮುಖ ಸ್ಥಳದಲ್ಲಿ ಮನೆ ಹಾಗೂ ಹೋಟೆಲ್​ ತ್ಯಾಜ್ಯ ಬಿಸಾಡುತ್ತಿರುವುದರಿಂದ ನಿತ್ಯ ಟನ್ ಗಟ್ಟಲೇ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ನಗರಸಭೆ ಕೂಡಾ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದರಿಂದ ನಗರವಾಸಿಗಳು ರಾತ್ರಿವೇಳೆ ಮನೆಯ ಸಮೀಪದ ರಸ್ತೆ ಬದಿಯಲ್ಲಿಯೇ ಸುರಿಯುತ್ತಿರುವುದು ನೈರ್ಮಲ್ಯ ಹಾಳು ಮಾಡುತ್ತಿದೆ.

ಇದರಿಂದ ರಸ್ತೆಗಳಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗ್ತಿದೆ. ನಗರದ ಒಳಗೆ ಅಷ್ಟೇನೂ ಕಸದ ಸಮಸ್ಯೆ ಇಲ್ಲದಿದ್ದರೂ ನಗರದ ಹೊರವಲಯದಲ್ಲಿ, ರಸ್ತೆಗಳ ಪಕ್ಕದಲ್ಲಿ, ಕಸದ ಸಮಸ್ಯೆ ತೀವ್ರವಾಗಿದ್ದು, ಜೊತೆಗೆ ಈಗ ಮಳೆಗಾಲ ಕೂಡ ಶುರುವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಹೀಗೆ ಎಲ್ಲೆಂದರಲ್ಲಿ ಕಸ ಸುರಿಯುವವರ ಬಗ್ಗೆ ನಿಗಾವಹಿಸಲು ಪಾಲಿಕೆ ಈಗಾಗಲೇ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಮುಂದಾಗಿದ್ದು, ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸೋಕೆ ನಗರಸಭೆ ಮುಂದಾಗಿದೆ.

ಪ್ಲಾಸ್ಟಿಕ್ ನೀಷೆದದ ನಡುವೆಯೂ ಹಾಸನದಲ್ಲಿ ಬಳಕೆ

ಪ್ಲಾಸ್ಟಿಕ್ ನಿಷೇಧದ ನಡುವೆಯೂ ಬಳಕೆ

ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಮಾಲಿನ್ಯ ಮತ್ತು ಕಸದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಪರಿಸರದಲ್ಲಿ ಕೊಳೆಯದೇ ಹಾಗೆ ಉಳಿಯುವುದರಿಂದ ಅದರಿಂದಾಗುವ ದುಷ್ಪರಿಣಾಮಗಳೇ ಹೆಚ್ಚು. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡಬೇಕೆಂದು ನ್ಯಾಯಾಲಯದ ಆದೇಶವಿದ್ರೂ ನಗರದ ಪ್ರಮುಖ ಅಂಗಡಿಗಳಲ್ಲಿ ಎಗ್ಗಿಲ್ಲದೇ ಪ್ಲಾಸ್ಟಿಕ್ ಮಾರಾಟವಾಗುತ್ತಿದೆ.

ಈ ಬಗ್ಗೆ ಪಾಲಿಕೆ ಆರೋಗ್ಯ ಅಧಿಕಾರಿಗಳನ್ನು ಕೇಳಿದ್ರೆ. ನಾವು ಅಕ್ರಮವಾಗಿ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕ್ರಮಕೈಗೊಂಡಿದ್ದು, ಸುಮಾರು ಐದು ಲಕ್ಷ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದರು.

ನಗರದಲ್ಲಿ ನಿತ್ಯ 62 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಸುಮಾರು 12 ವಾಹನಗಳ ಮೂಲಕ ಕಸ ಸಂಗ್ರಹಣೆ ಮಾಡಿ ಬೇರೆಡೆ ಕಸ ಡಂಪ್ ಮಾಡಲಾಗುತ್ತಿದೆ. ಹಾಸನ ನಗರವನ್ನು ಕಸಮುಕ್ತ ನಗರವನ್ನಾಗಿಸಲು ಹಲವಾರು ಕಾರ್ಯಕ್ರಮಗಳನ್ನು ತಂದಿದ್ದು, ಹಾಸನದ ಜನತೆ ಪಾಲಿಕೆಯ ಜೊತೆ ಕೈ ಜೋಡಿಸಿದ್ರೆ ಕಸಮುಕ್ತ ನಗರವನ್ನಾಗಿ ಮಾಡ್ತೀವಿ ಅಂತಾರೆ ನಗರಸಭೆ ಅಧಿಕಾರಿ ರೂಪಾ ಪಿ. ಶೆಟ್ಟಿ.

Intro:ಹಾಸನ: ಪ್ಲಾಸ್ಟಿಕ್ ಬ್ಯಾನ್ ಮಾಡಿದ್ರೂ ಕೂಡ ಮಾರಾಟ ಮಾತ್ರ ಹಾಸನ ನಗರದಲ್ಲಿ ನಿಂತಿಲ್ಲ. ಇದರಿಂದ ಪ್ರತಿನಿತ್ಯ ತ್ಯಾಜ್ಯ ಹೆಚ್ಚಾಗುತ್ತಿದ್ದು ಹಾಸನದ ಸಂತೆಪೇಟೆ ಬಿಳಿ ರಾಶಿ ರಾಶಿ ಕಸ ಸಂಗ್ರಹವಾಗುತ್ತಿದೆ. ಎರಡು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ. ಹಾಗಿದ್ರೆ ಏನಿದು ಸ್ಟೋರಿ ಅಂತೀರಾ ನೀವೇ ನೋಡಿ

ಕಣ್ಣು ಹಾಯಿಸಿದಷ್ಟು ರಾಶಿ ರಾಶಿ ಕಸ.. ಪ್ರತಿನಿತ್ಯ ಸಂಗ್ರಹವಾಗುತ್ತದೆ ರಾಶಿಗಟ್ಚಲೆ ಪ್ಲಾಸ್ಟಿಕ್ ತ್ಯಾಜ್ಯ.

ಹೌದು, ಹಾಸನ ನಗರದ ಸುತ್ತಮುತ್ತ ಕಸದ ರಾಶಿಗಳು ಎದ್ದುಕಾಣುತ್ತಿವೆ, ನಗರದ ಸಾರ್ವಜನಿಕರು ರಸ್ತೆಯ ಬದಿಯಲ್ಲಿ, ಪ್ರಮುಖ ಸ್ಥಳದಲ್ಲಿ ಮನೆಯ ಹಾಗೂ ಹೋಟೇಲ್ ತ್ಯಾಜ್ಯವನ್ನ ಬಿಸಾಡುತ್ತಿರುವುದರಿಂದ ಪ್ರತಿನಿತ್ಯ ಟನ್ ಗಟ್ಟಲೇ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ನಗರಸಭೆ ಕೂಡಾ ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ನಗರ ವಾಸಿಗಳು ರಾತ್ರಿವೇಳೆ ಮನೆಯ ಸಮೀಪದ ರಸ್ತೆ ಬದಿಯಲ್ಲಿಯೇ ಸುರಿಯುತ್ತಿರುವುದು ಅಲ್ಲಿನ ನೈರ್ಮಲ್ಯವನ್ನ ಹಾಳು ಮಾಡುತ್ತಿದೆ. ಇದರಿಂದ ರಸ್ತೆಗಳಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗ್ತಿದೆ.

ನಗರದ ಒಳಗೆ ಅಷ್ಟೇನೂ ಕಸದ ಸಮಸ್ಯೆ ಇಲ್ಲದೆ ಇದ್ದರೂ ನಗರದ ಹೊರವಲಯದಲ್ಲಿ, ರಸ್ತೆಗಳ ಪಕ್ಕದಲ್ಲಿ, ಕಸದ ಸಮಸ್ಯೆ ತೀವ್ರವಾಗಿದ್ದು ಜೊತೆಗೆ ಈಗ ಮಳೆಗಾಲ ಕೂಡ ಶುರುವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯು ಸೃಷ್ಟಿಯಾಗಿದೆ. ಹೀಗೆ ಎಲ್ಲೆಂದರಲ್ಲಿ ಕಸ ಸುರಿಯುವವರ ಬಗ್ಗೆ ನಿಗಾವಹಿಸಲು ಪಾಲಿಕೆ ಈಗಾಗಲೇ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಮುಂದಾಗಿದ್ದು, ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸೋಕೆ ನಗರಸಭೆ ಮುಂದಾಗಿದೆ.

ಬೈಟ್: ಆದಿಶ್, ಆರೋಗ್ಯ ಅಧಿಕಾರಿ.

ಕಸದ ಮೂಲ ಸಮಸ್ಯೆ ಪ್ಲಾಸ್ಟಿಕ್ :
ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಮಾಲಿನ್ಯ ಮತ್ತು ಕಸದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ಲಾಸ್ಟಿಕ್‌ ನೂರಾರು ವರ್ಷಗಳ ಕಾಲ ಪರಿಸರದಲ್ಲಿ ಕೊಳೆಯದೇ ಹಾಗೆ ಉಳಿಯುವುದರಿಂದ ಅದರಿಂದಾಗುವ ದುಷ್ಪರಿಣಾಮಗಳೇ ಹೆಚ್ಚು. ಗಡಿ ಪ್ಲಾಸ್ಟಿಕ್ ಬೆಳಕಿನ ಸಂಪೂರ್ಣ ನಿಷೇಧ ಮಾಡಬೇಕೆಂದು ನ್ಯಾಯಾಲಯದ ಆದೇಶವಿದ್ರು ಕೂಡಾ ನಗರದ ಪ್ರಮುಖ ಅಂಗಡಿಗಳಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್ ಮಾರಾಟವಾಗುತ್ತಿದೆ.

ನಾವು ಈಗ ಪ್ಲಾಸ್ಟಿಕ್‌ ರಹಿತವಾದ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ ಹಾಲಿನ ಪಾಕೆಟ್‌ಗಳು, ಕುಡಿಯುವ ನೀರಿನ ಬಾಟಲಿಗಳು, ಪೀಠೋಪಕರಣಗಳು,ಹೀಗೆ ಪ್ಲಾಸ್ಟಿಕ್‌ ನಮ್ಮ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದ್ದು ಒಂದು ಕಡೆ ಮಾಲಿನ್ಯಕ್ಕೆ ಕಾರಣವಾದ್ರೆ, ಮತ್ತೊಂದುಕಡೆ. ವನ್ಯ ಮೃಗಗಳ ಪ್ರಾಣಕ್ಕೆ ಸಂಚಕಾರ ತಂದೊಂಡ್ಡುತ್ತಿದೆ. ಅಲ್ಲದೇ ಅಂತರ್ಜಲ ಕೂಡಾ ಕಲುಷಿತಗೊಳ್ಳುತ್ತದೆ.

ಈ ಬಗ್ಗೆ ಪಾಲಿಕೆ ಆರೋಗ್ಯ ಅಧಿಕಾರಿಗಳನ್ನು ಕೇಳಿದ್ರೆ ನಾವು ಅಕ್ರಮವಾಗಿ ಪ್ಲಾಸ್ಟಿಕ್ ಬಳಸುವವರ ವಿರುದ್ಧ ಕ್ರಮಕೈಗೊಂಡಿದ್ದು ಸುಮಾರು ಐದು ಲಕ್ಷ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ನಗರದಲ್ಲಿ ಪ್ರತಿನಿತ್ಯ 62ಟನ್ ಕಸ ಉತ್ಪಾದನೆಯಾಗುತ್ತಿದ್ದು ಸುಮಾರು 12 ವಾಹನಗಳ ಮೂಲಕ ಕಸ ಸಂಗ್ರಹಣೆ ಮಾಡಿ , ನಗರದಿಂದ ಸುಮಾರು 9 ಕಿಲೋಮೀಟರ್ ದೂರದಲ್ಲಿರುವ ಅಗಿಲೆ ಎಂಬಲ್ಲಿ ಕಸವನ್ನು ಡಂಪ್ ಮಾಡಲಾಗುತ್ತಿದೆ.

ಬೈಟ್: ರೂಪ ಪಿ. ಶೆಟ್ಟಿ, ನಗರಸಭೆ ಅಧಿಕಾರಿ

ಒಟ್ಟಾರೆ ಹಾಸನ ನಗರಪಾಲಿಕೆ ನಗರವನ್ನು ಕಸಮುಕ್ತ ನಗರವನ್ನಾಗಿಸಲು ಹಲವಾರು ಕಾರ್ಯಕ್ರಮಗಳನ್ನು ತಂದಿದ್ದು, ಹಾಸನದ ಜನತೆ ಪಾಲಿಕೆಯ ಜೊತೆ ಕೈ ಜೋಡಿಸಿದ್ರೆ ನಗರವನ್ನು ಕಸಮುಕ್ತ ನಗರವನ್ನ ಕಸ ಮುಕ್ತ ಮಾಡ್ತೀವಿ ಅಂತಾರೆ.... ಹಾಸನ ಜನತೆ ಇದಕ್ಕೆ ಸ್ಪಂದಿಸುತ್ತಾರೆ ಕಾದುನೋಡಬೇಕಿದೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.