ETV Bharat / state

ಹಾಸನ: ಗಾಂಜಾ ಸೇವನೆ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಚಾಕುವಿನಿಂದ ಹಲ್ಲೆ - ganja addict

ಫಾರುಕ್ ಮತ್ತು ಆತನ ಸ್ನೇಹಿತರು ಗಾಂಜಾ ಸೇವಿಸುತ್ತಿದ್ದ ವೇಳೆ ನವೀನ್​ ಎಂಬಾತ​ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಫಾರೂಕ್ ತನ್ನ ಬಳಿಯಿದ್ದ ಚಾಕುವಿನಿಂದ ಮುಖದ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಚಾಕುವಿನಿಂದ ಇರಿತ
ಚಾಕುವಿನಿಂದ ಇರಿತ
author img

By

Published : Apr 18, 2020, 2:34 PM IST

ಹಾಸನ: ಗಾಂಜಾ ಸೇವಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಗರದ ತಣ್ಣೀರು ಹಳ್ಳ-ವಿಜಯನಗರ ಸಮೀಪದ ಗುಡೇನಹಳ್ಳಿ ಕೊಪ್ಪಲು ಬಳಿ ನಡೆದಿದೆ.

ನವೀನ್ (34) ಎಂಬ ಆಟೋ ಚಾಲಕನಿಗೆ ಫಾರುಕ್ ಮತ್ತು ಆತನ ಸ್ನೇಹಿತರು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಫಾರುಕ್ ಮತ್ತು ಆತನ ಸ್ನೇಹಿತರು ಗಾಂಜಾ ಸೇವಿಸುತ್ತಿದ್ದ ವೇಳೆ ನವೀನ್​​ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಫಾರೂಕ್ ತನ್ನ ಬಳಿಯಿದ್ದ ಚಾಕುವಿನಿಂದ ಮುಖದ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಹಲ್ಲೆ ಕುರಿತು ನವೀನ್​​ ವಿವರಣೆ

ಪೊಲೀಸರು ಹೇಳಿದ್ದೇನು:

ಇನ್ನು ಪೊಲೀಸರು ನೀಡುವ ಮಾಹಿತಿಯ ಪ್ರಕಾರ ಈ ಹಿಂದೆಯೇ ನವೀನ್​​ ಹಾಗೂ ಫಾರೂಕ್​​​ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಲಾಟೆ ಮಾಡಿಕೊಂಡಿದ್ದರು. ನಂತರ ನವೀನ್ ತಂದೆಯನ್ನು ಸ್ಥಳಕ್ಕೆ ಬರುವಂತೆ ಮಾಡಿ ತಂದೆಯೆದುರು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳ ಶೋಧ ಕಾರ್ಯ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.