ETV Bharat / state

ವಿಕಲಚೇತನರು ಸ್ವಾವಲಂಬಿ ಜೀವನ ನಡೆಸಲು ಆತ್ಮಸ್ಥೈರ್ಯ ತುಂಬಬೇಕು: ಆರ್.ಗಿರೀಶ್

ಹಾಸನ ನಗರದ ಸುತ್ತಮುತ್ತಲಿನ ವಿಕಲಚೇತನರು ಸ್ವಾವಲಂಬಿಯಾಗಿ ಜೀವನ ಮಾಡುವಂತೆ ಆತ್ಮಸ್ಥೈರ್ಯ ತುಂಬಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

Foot Distribution Camp
ಪೋಲಿಯೋ ಪೀಡಿತರಿಗೆ ಉಚಿತ ಕೃತಕ ಕಾಲು ವಿತರಿಸುವ ಶಿಬಿರ
author img

By

Published : Feb 28, 2020, 7:13 PM IST

ಹಾಸನ : ನಗರದ ಸುತ್ತಮುತ್ತಲಿನ ವಿಕಲಚೇತನರು ಸ್ವಾವಲಂಬಿಯಾಗಿ ಜೀವನ ಮಾಡುವಂತೆ ಆತ್ಮಸ್ಥೈರ್ಯ ತುಂಬಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

ಪೋಲಿಯೋ ಪೀಡಿತರಿಗೆ ಉಚಿತ ಕೃತಕ ಕಾಲು ವಿತರಿಸುವ ಶಿಬಿರ

ಹಿಮಾಲಯ ಫ್ರೆಶ್ ಸ್ಟಾರ್ಟ್ ಫೌಂಡೇಶನ್ ಮಿ.ಎಂ.ವಿ.ಎಸ್.ಎಸ್ ಮತ್ತು ರೋಟರಿ ಇಂಟರ್​ ನ್ಯಾಷನಲ್ ಸಹಯೋಗದೊಂದಿಗೆ ವಿಕಲಚೇತನರಿಗೆ ಮತ್ತು ಪೋಲಿಯೋ ಪೀಡಿತರಿಗೆ ಉಚಿತ ಕೃತಕ ಕಾಲು ವಿತರಿಸುವ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ವಿಕಲಚೇತನರು ಎಲ್ಲರಂತೆ ಸಹಜ ಜೀವನ ಮಾಡುವ ಹಾಗೆ ಸಶಕ್ತರನ್ನಾಗಿಸಲು ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ. ವಿಕಲಚೇತನರ ಸೇವೆಗೆ ಜಿಲ್ಲಾಡಳಿತ ಸದಾ ಸಹಕಾರ ನೀಡುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಬಿ.ಎ ಪರಮೇಶ್ ಮಾತನಾಡಿ, ವಿಕಲ ಚೇತನರಿಗೆ ಅಗತ್ಯವಾದ ಕೃತಕ ಕಾಲುಗಳನ್ನು ಜೋಡಿಸುವ ಮೂಲಕ ತಮ್ಮ ದೈಹಿಕ ಸವಾಲುಗಳನ್ನು ಮೆಟ್ಟಿನಿಲ್ಲಲು ಸಾಧ್ಯ. ಅವರು ಹೊಸದಾಗಿ ಜೀವನ ನಡೆಸಲು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಲು ಶಕ್ತರನ್ನಾಗಿ ಮಾಡಬೇಕು. ವಿಕಲಚೇತನರಿಗೆ ಕೃತಕ ಕಾಲು ಮತ್ತು ಮಂಗೈ ಜೋಡಣೆಯು ವರದಾನವಾಗಲಿದೆ. ಇದರ ಸಹಾಯದಿಂದ ಸಾಮಾನ್ಯ ಮನುಷ್ಯರಂತೆ ಬದುಕಲು ಸಹಾಯವಾಗಲಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.