ಹಾಸನ: ಸಮಾಜಕ್ಕೆ ತೀರ್ಥಂಕರರ ಕೊಡುಗೆ ಅಪಾರವಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವು ಶಾಂತಿಯಿಂದ ಮುಂದೆ ಸಾಗೋಣ. ದೇಶದ ಕಲ್ಯಾಣಕ್ಕಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಶಿಸಿದರು.
ಭಗವಾನ್ 1008 ಶ್ರೀ ಪಾರ್ಶ್ವನಾಥಸ್ವಾಮಿ ತೀರ್ಥಂಕರರ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಂದರ್ಭದಲ್ಲಿ ತನ್ನನ್ನು ಪ್ರಧಾನಿಯನ್ನಾಗಿ ಮಾಡಿದ ಹುಟ್ಟೂರಿನ ಜನತೆಯನ್ನು ನೆನೆಯಲು ಮರೆಯಲಿಲ್ಲ. 'ನನ್ನನ್ನು ಪ್ರಧಾನಿಯನ್ನಾಗಿ ಕೊಟ್ಟ ಹಾಸನ ಜಿಲ್ಲೆಯ ಯಾರನ್ನೂ ನಾನು ಮರೆಯುವಂತಿಲ್ಲ' ಎಂದು ಅವರು ಭಾವುಕರಾದರು.
'ನಾನು ಮೊದಲಿನ ರೀತಿ ಈಗ ಓಡಾಡಲು ಆಗುವುದಿಲ್ಲ. ನನ್ನ ಅಧಿಕಾರವಧಿಯಲ್ಲಿ ಸಮಾಜ ಗಮನ ಸೆಳೆಯುವ ಕೆಲಸ ಮಾಡಿದ್ದೇನೆ. ಅದಕ್ಕೆ ನೀವು ಅವಕಾಶ ನೀಡಿದ್ದೀರಿ' ಎಂದು ಹೇಳಿದರು. '5 ದಿನದ ಪಂಚಕಲ್ಯಾಣ ಮಹೋತ್ಸವದ ಕಾರ್ಯಕ್ರಮದ ನಡುವೆ ಬರುವುದಾಗಿ ಹೇಳಿದ್ದೆ. ಅದರಂತೆ, ಇಂದು ಪಾಲ್ಗೊಂಡು ಆಶೀರ್ವಾದ ಪಡೆದಿದ್ದೇನೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿಗೆ ಕಪಿಲ್ ದೇವ್ ಭೇಟಿ.. ಸೆಲ್ಫಿ, ಫೋಟೋಗೆ ಮುಗಿಬಿದ್ದ ಅಭಿಮಾನಿಗಳು