ETV Bharat / state

ಮತ್ತೆ ಶಾಸಕ ಪ್ರೀತಮ್ ಗೌಡ ವಿರುದ್ಧ ಗುಡುಗಿದ ಹೆಚ್.ಡಿ.ರೇವಣ್ಣ - ಶಾಸಕ ಪ್ರೀತಮ್ ಗೌಡ ವಿರುದ್ಧ ಗುಡುಗಿದ ರೇವಣ್ಣ

ಇಂದು ನಗರದಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಶಾಸಕ ಪ್ರೀತಮ್ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Revanna
ಹೆಚ್.ಡಿ.ರೇವಣ್ಣ
author img

By

Published : Jan 2, 2021, 5:33 PM IST

ಹಾಸನ: ಆತ ಪ್ರಾಕ್ಟಿಕಲ್ ಗೊತ್ತಿಲ್ಲದ ಗಿರಾಕಿ. ಅವನಿಗೆ ಅಭಿವೃದ್ಧಿ ಎಂದರೆ ಏನು ಅಂತ ಗೊತ್ತಿದೆಯಾ ಎನ್ನುವ ಮೂಲಕ ಶಾಸಕ ಪ್ರೀತಮ್ ಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗುಡುಗಿದ್ದಾರೆ.

ಮಾಜಿ ಸಚಿವ ಹೆಚ್​.ಡಿ.ರೇವಣ್ಣ

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿರುವ ಚನ್ನಪಟ್ಟಣ ಅಭಿವೃದ್ಧಿ ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಳೆದ ಎರಡು ಅವಧಿಯಲ್ಲಿ ಅಧಿಕಾರ ಹಿಡಿದ ರಾಷ್ಟ್ರೀಯ ಪಕ್ಷಗಳು ದ್ವೇಷದಿಂದ ಕಾಮಗಾರಿಯನ್ನು ಮೊಟಕುಗೊಳಿಸಿವೆ ಎಂದರು ಆರೋಪಿಸಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿರುವ ಚನ್ನಪಟ್ಟಣ ಕೆರೆಯ ಅಭಿವೃದ್ಧಿಗೆ ಮೈತ್ರಿ ಸರ್ಕಾರದಲ್ಲಿ ಅನುಮೋದನೆ ಪಡೆದು 144 ಕೋಟಿ ವೆಚ್ಚದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಲಾಗಿತ್ತು. ಕೆರೆಯಂಗಳದಲ್ಲಿ ವಾಯು ವಿಹಾರ, ದೋಣಿ ವಿಹಾರ, ವಾಟರ್ ಪಾರ್ಕ್, ಮಕ್ಕಳ ಟ್ರೈನ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ರಾಜಸ್ಥಾನ ಮೂಲದ ರಾಯಲ್ ಶರ್ಮಾ ಎಂಬ ಕಂಪನಿಗೆ 88.5 ಕೋಟಿ ರೂ.ಗೆ ಟೆಂಡರ್ ನೀಡಿದ್ದು, ಪ್ರಾಕ್ಟಿಕಲ್ ಗೊತ್ತಿಲ್ಲದ ಗಿರಾಕಿಯ ಮಾತು ಕಟ್ಟಿಕೊಂಡು ಸರ್ಕಾರ ಕಾಮಗಾರಿಯನ್ನು ತಡೆ ಹಿಡಿದಿದೆ ಎನ್ನುವ ಮೂಲಕ ಪ್ರೀತಮ್ ಗೌಡ ಹೆಸರು ಪ್ರಸ್ತಾಪಿಸಿದೆ ವಾಗ್ದಾಳಿ ನಡೆಸಿದರು.

ಓದಿ: ಅಡುಗೆ ಸಹಾಯಕರ 3 ತಿಂಗಳ ಗೌರವ ಸಂಭಾವನೆ ಬಿಡುಗಡೆ ಮಾಡಿದ ಸರ್ಕಾರ

ಕಾಮಗಾರಿ ಮತ್ತು ಯೋಜನೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಮಂಜೂರು ಮಾಡುವಂತೆ ಸೂಚಿಸಿದ್ದಾರೆ. ಆದರೆ ಸ್ಥಳೀಯ ಶಾಸಕ ಕಾಮಗಾರಿಗೆ ಮೂಕರ್ಜಿ ಬರೆದು ಅಭಿವೃದ್ಧಿಯನ್ನು ತಡೆ ಹಿಡಿದಿದ್ದಾರೆ ಎಂದು ಆರೋಪ ಮಾಡಿದರು.

ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ನೀಡಿದ ಹಣವನ್ನು ಬೇರೆ ಪಾರ್ಕ್ ಮಾಡಲು ಬಳಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ನಾನು ಕೇಳುವುದು ಕೆರೆ ಅಭಿವೃದ್ಧಿ ಯಾನದಲ್ಲಿ ಯಾಕೆ ಬೇರೆ ಪಾರ್ಕ್ ಮಾಡುತ್ತಿದ್ದಾರೆ. ರಾಜಕೀಯ ದ್ವೇಷ ಮಾಡಲ್ಲ ಎಂದು ಸಿಎಂ ಹೇಳುತ್ತಾರೆ. ಆದರೆ ಇವರು ಮಾಡ್ತಿರೋದು ಏನು?, ಹಿಂದೆ ಮಾಡಿರುವ ಹಳೆಯ ಪ್ಲಾನ್​ ರೀತಿಯೇ ಅಭಿವೃದ್ಧಿ ಮಾಡಬೇಕು. ಇಲ್ಲವಾದರೆ ದೇವೇಗೌಡರು ಹೋರಾಟ ಮಾಡೋಣ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಬೃಹತ್ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.