ETV Bharat / state

ಹಾಸನ ಅಂದ್ರೆ ಬಿಜೆಪಿಯವರಿಗೆ ವಾಂತಿ, ಭೇದಿ ಶುರುವಾಗುತ್ತೆ: ಹೆಚ್​.ಡಿ.ರೇವಣ್ಣ

ಮಳೆಯಿಂದಾಗಿ ಜಿಲ್ಲೆಯಲ್ಲಿ ಒಂದೂವರೆ ಸಾವಿರ ಮನೆಗಳು ಧರೆಗುರುಳಿವೆ. ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕೆರೆಗಳು ಕೋಡಿ ಬಿದ್ದು ಜಮೀನುಗಳಿಗೆ ನೀರು ನುಗ್ಗಿದೆ. ಆದರೂ ಯಾವೊಬ್ಬ ಅಧಿಕಾರಿ ಬಂದು ಪರಿಶೀಲನೆ ನಡೆಸಿಲ್ಲ. ಕೂಡಲೇ ಸಂಬಂಧಪಟ್ಟವರು ಸರ್ವೇ ನಡೆಸಿ ರೈತರಿಗೆ ಪರಿಹಾರದ ಚೆಕ್ ನೀಡಬೇಕೆಂದು ಒತ್ತಾಯಿಸಿದರು.

Revanna
ಹೆಚ್​ಡಿ ರೇವಣ್ಣ
author img

By

Published : Nov 25, 2021, 8:20 PM IST

ಹಾಸನ: ನಮ್ಮ ಜಿಲ್ಲೆಯೆಂದರೆ ಬಿಜೆಪಿ ಸರ್ಕಾರಕ್ಕೆ ವಾಂತಿ, ಭೇದಿ ಎಲ್ಲಾ ಶುರುವಾಗುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.

ನಗರದ ಸಂಸದ ಪ್ರಜ್ವಲ್ ರೇವಣ್ಣನವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕನಿಷ್ಠ 1 ಲಕ್ಷದ 56 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ. ಆದರೆ ಇದುವರೆಗೂ ಒಂದು ಬಿಡಿಗಾಸು ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆಯಿಂದಾಗಿ ಜಿಲ್ಲೆಯಲ್ಲಿ ಒಂದೂವರೆ ಸಾವಿರ ಮನೆಗಳು ಧರೆಗುರುಳಿವೆ. ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕೆರೆಗಳು ಕೋಡಿ ಬಿದ್ದು ಜಮೀನುಗಳಿಗೆ ನೀರು ನುಗ್ಗಿದೆ. ಆದರೂ ಯಾವೊಬ್ಬ ಅಧಿಕಾರಿ ಬಂದು ಪರಿಶೀಲನೆ ನಡೆಸಿಲ್ಲ. ಕೂಡಲೇ ಸಂಬಂಧಪಟ್ಟವರು ಸರ್ವೇ ನಡೆಸಿ ರೈತರಿಗೆ ಪರಿಹಾರದ ಚೆಕ್ ನೀಡಬೇಕೆಂದು ಒತ್ತಾಯಿಸಿದರು.

ನಾನು ಹೇಳಿದ ಮೇಲೆ ಕಂದಾಯ ಮಂತ್ರಿಗಳು ಜಿಲ್ಲೆಗೆ ಬಂದಿರುವುದು ಸಂತೋಷ. ಕಂದಾಯ ಸಚಿವರು ಬಂದು ಹೋಗುವುದು ಮುಖ್ಯವಲ್ಲ. ಅವರ ಮಾತುಗಳೆಲ್ಲ ಕಾರ್ಯಗತವಾಗಬೇಕು ಎಂದರು.

ಈ ಬಾರಿ ಮತದಾರರು ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಜೆಡಿಎಸ್‌ಗೆ ಅವಕಾಶ ಕೊಡಬೇಕು. ಕಳೆದ ಬಾರಿ ತಪ್ಪು ಮಾಡಿದ್ದೇವೆ. ಆದರೆ ಈ ಬಾರಿ ಸರಿ ಮಾಡಿಕೊಳ್ಳಬೇಕೆಂದು ಸದಸ್ಯರು ತೀರ್ಮಾನ ಮಾಡಿದ್ದಾರೆ. ಪರಿಷತ್​​ ಚುನಾವಣೆಯಲ್ಲಿಜನತೆ ನಮಗೆ ಮತ ನೀಡುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ. ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಐದು ವರ್ಷ ಸಿಎಂ ಆಗಿ ಎಂದಿದ್ದರು. ಕುಮಾರಸ್ವಾಮಿಗೆ ಒಳ್ಳೆಯ ಹೆಸರು ಬರುತ್ತೆ ಎಂದು ಸರ್ಕಾರ ಬೀಳಿಸಿದ್ದಾರೆ. ಇದಲ್ಲದೆ ಹೆಚ್.ಡಿ.ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದರು. ಹತ್ತು ತಿಂಗಳಿಗೆ ಕೆಳಗೆ ಇಳಿಸಿದರು. ಕುಮಾರಸ್ವಾಮಿ ವಿರುದ್ಧ ಯಾವುದೋ ಬುಡುಬುಡಿಕೆ ಕೈಯಲ್ಲಿ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಗುಡುಗಿದರು.

ರಾಜ್ಯದಲ್ಲಿ ನಡೆದ ಎಸಿಬಿ ದಾಳಿ ವಿಚಾರವಾಗಿ ಮಾತನಾಡಿ, ನಾಮಕಾವಸ್ಥೆಗೆ ಈ ರೀತಿ ತನಿಖೆ ಮಾಡುವುದು ಬೇಡ. ಚುನಾವಣೆ ಬಂದಿದೆ ಎಂದು ರೇಡ್ ಮಾಡುವುದು ಬೇಡ. ಇದನ್ನು ಬಿಟ್ಟು ನಿಜವಾದ ಭ್ರಷ್ಟರ ಮೇಲೆ ದಾಳಿ ಮಾಡಬೇಕು ಎಂದು ತಾಕೀತು ಮಾಡಿದರು.ಇದೇ ವೇಳೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: TC ಕೇಳಿದಾಗ ಕೊಡದಿದ್ರೆ ಖಾಸಗಿ ಶಾಲೆಗಳಿಗೆ ಸಂಕಷ್ಟ ಖಚಿತ.. ಕಾನೂನು ಕ್ರಮಕ್ಕೆ ಶಿಕ್ಷಣ ಇಲಾಖೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.