ETV Bharat / state

ಬಿಜೆಪಿ ಕಾರ್ಪೊರೇಟರ್ ಹಲ್ಲೆಗೆ ಹೊಸದೊಂದು ಟ್ವಿಸ್ಟ್... ರೇವಣ್ಣ ಹೇಳಿದ್ದೇನು ?

author img

By

Published : Dec 6, 2019, 5:44 AM IST

ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದ ಬೆಂಗಳೂರಿನ ಹಂಪಿನಗರದ ಬಿಜೆಪಿ ಕಾರ್ಪೊರೇಟರ್ ಆನಂದ್ ಹೊಸೂರು ಮತ್ತು ಅವರ ಸ್ನೇಹಿತರ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಹೊಸತೊಂದು ಟ್ವಿಸ್ಟ್ ಸಿಕ್ಕಿದೆ.

ಮಾಜಿ ಸಚಿವ ಹೆಚ್. ಡಿ. ರೇವ
ಮಾಜಿ ಸಚಿವ ಹೆಚ್. ಡಿ. ರೇವ

ಹಾಸನ: ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದ ಬೆಂಗಳೂರಿನ ಹಂಪಿನಗರದ ಬಿಜೆಪಿ ಕಾರ್ಪೊರೇಟರ್ ಆನಂದ್ ಹೊಸೂರು ಮತ್ತು ಅವರ ಸ್ನೇಹಿತರ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಹೊಸತೊಂದು ಟ್ವಿಸ್ಟ್ ಸಿಕ್ಕಿದೆ.

ಹಲ್ಲೆಗೊಳಗಾದ ಕಾರ್ಪೊರೇಟರ್ ಆನಂದ್ ಹೊಸೂರು ಮತ್ತು ಆತನ ಸ್ನೇಹಿತರು ನಂಬಿಹಳ್ಳಿ ಗ್ರಾಮದ ಮಹಿಳೆಯೊಬ್ಬರ ಮೇಲೆ ಮಾನಭಂಗ ಮಾಡಲು ಪ್ರಯತ್ನ ಪಟ್ಟಿದ್ದೇ, ಗಲಭೆಗೆ ಕಾರಣ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಗಂಭೀರ ಆರೋಪ ಮಾಡುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ನಮ್ಮ ಕಾರ್ಯಕರ್ತರು ಆನಂದ್ ಹೊಸೂರು ಮತ್ತು ಅವರ ಸ್ನೇಹಿತರಿಗೆ ಹಲ್ಲೆ ಮಾಡಲು ಬಲವಾದ ಕಾರಣವಿದೆ. ಹಲ್ಲೆಗೂ ಮುನ್ನ ಈ 6 ಮಂದಿ ಆರೋಪಿಗಳು ನಂಬಿಹಳ್ಳಿ ಗ್ರಾಮದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದು, ನಂತರ ಆಕೆ ಮೇಲೆ ಲೈಂಗಿಕ ದೌರ್ಜಕ್ಕೆ ಮುಂದಾಗಿದ್ದಾರೆ. ಆಗ ಬಿಡಿಸಲು ಬಂದ ಆಕೆಯ ಪತಿ ಶೇಖರ್ ಮೇಲೆಯೂ ಹಲ್ಲೆ ನಡೆಸಿದ್ದು, ಅವ್ಯಾಚ ಶಬ್ದಗಳಿಂದ ಜಾತಿನಿಂದನೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಸಚಿವ ಹೆಚ್. ಡಿ. ರೇವ

ಮಹಿಳೆಯ ಮೇಲಾಗಿರುವ ದೌರ್ಜನ್ಯ ಮತ್ತು ನನ್ನ ಮಗನ ಮೇಲೆ ಮಾಡಿರುವ ಸುಳ್ಳು ಆರೋಪ ಹಿನ್ನೆಲೆಯಲ್ಲಿ, ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ಐಜಿಪಿ ಹಾಗೂ ಎಸ್​ಪಿಯವರ ಒತ್ತಾಯದ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನು ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ಬಿಜೆಪಿಯವರು ಗಲಭೆ ಮತ್ತು ಅಕ್ರಮ ಕುರಿತು ಮನವಿ ಕೊಟ್ಟಿದ್ದು, ವಿನಾಕಾರಣ ನನ್ನ ಮಗ ಸೂರಜ್ ರೇವಣ್ಣ ಮೇಲೆ ಸುಳ್ಳು ಆರೋಪ ಮಾಡಿ ದೂರು ದಾಖಲು ಮಾಡಿದ್ದಾರೆ ಎಂದು ಹರಿಹಾಯ್ದರು.

ಎಫ್​ಐಆರ್ ಪ್ರತಿ
ಎಫ್​ಐಆರ್ ಪ್ರತಿ

ಈ ಪ್ರಕರಣಕ್ಕೆ ಮುಖ್ಯ ಕಾರಣ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ. ಚುನಾವಣಾ ಪ್ರಚಾರ ಮುಗಿದ ನಂತರ ಅವರು ಬೆಂಗಳೂರಿನ ಕಡೆ ಹೋಗದೆ, ಚುನಾವಣಾ ಕ್ಷೇತ್ರದ ಗಡಿಭಾಗದಲ್ಲಿ ಉಳಿದುಕೊಂಡು ಹಣ ಹಂಚಿಕೆಗೆ ಕುಮ್ಮಕ್ಕು ನೀಡಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಹರಿಹಾಯ್ದರು.

ಚುನಾವಣೆ ಏಜೆಂಟ್ ಕೂಡ ಬಿಜೆಪಿಯವರ ವಿರುದ್ದ ದೂರು ನೀಡಿದ್ದು, ನಾನು ಸಹ ಹೇಳಿಕೆ ಕೊಟ್ಟಿದ್ದೇನೆ. ಆದರೆ ಪೊಲೀಸ್ ಇಲಾಖೆ ಮಾತ್ರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಲಿಲ್ಲ. ಇನ್ನು ನಾಲ್ಕು ದಿನದ ಒಳಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು. ಈ ಕುರಿತು ನೊಂದ ಮಹಿಳೆಯು ಚೆನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

Intro:ಈಗಾಗಲೇ ವಿಡಿಯೋವನ್ನು ಸ್ಪ್ರಿಂಜರ್ ಮೋಹನ್ಕುಮಾರ್ ಕಳುಹಿಸಿದ್ದಾರೆ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದ ಬೆಂಗಳೂರ್ನ ಹಂಪಿನಗರದ ಬಿಜೆಪಿ ಕಾರ್ಪೊರೇಟರ್ ಆನಂದ್ ಹೊಸೂರು ಮತ್ತು ಅವರ ಸ್ನೇಹಿತರಗಳ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಹೊಸತೊಂದು ಟ್ವಿಸ್ಟ್ ಸಿಕ್ಕಿದೆ.

ಹಲ್ಲೆಗೊಳಗಾದ ಕಾರ್ಪೊರೇಟರ್ ಆನಂದ್ ಹೊಸೂರು ಮತ್ತು ಆತನ ಸ್ನೇಹಿತರು ನಂಬಿಹಳ್ಳಿ ಗ್ರಾಮದ ಪ್ರಭಾವತಿ ಎಂಬುವರ ಮೇಲೆ ಮಾನಭಂಗ ಮಾಡಲು ಪ್ರಯತ್ನ ಪಟ್ಟಿದ್ದೆ ಗಲಭೆಗೆ ಕಾರಣ ಅಂತ ಮಾಜಿ ಸಚಿವ ಎಚ್ ಡಿ ರೇವಣ್ಣ ಗಂಭೀರ ಆರೋಪ ಮಾಡುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಇಂದು 7:30ರಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಆನಂದ್ ಹೊಸೂರು ಮತ್ತು ಅವರ ಸ್ನೇಹಿತರಿಗೆ ಹಲ್ಲೆ ಮಾಡಲು ಬಲವಾದ ಕಾರಣವಿದೆ. ಹಲ್ಲೆಗೂ ಮುನ್ನ ಈ 6 ಮಂದಿ ಆರೋಪಿಗಳು ನಂಬಿಹಳ್ಳಿ ಗ್ರಾಮದ ಪ್ರಭಾವತಿ ಎಂಬವರ ಮೇಲೆ ಹಲ್ಲೆ ನಡೆಸಿದ್ದು, ನಂತರ ಆಕೆ ಮೇಲೆ ಮಾನಭಂಗಕ್ಕೆ ಪ್ರಯತ್ನಪಟ್ಟಾಗ ಬಿಡಿಸಲು ಬಂದ ಆಕೆಯ ಪತಿ ಶೇಖರ್ ಮೇಲೆ ಹಲ್ಲೆ ನಡೆಸಿದ್ದು, ಅವ್ಯಾಚ ಶಬ್ದಗಳಿಂದ ಜಾತಿನಿಂದನೆ ಮಾಡಿ ಅಮರ ಪತಿ ಶೇಖರ್ ಗೆ ಕಾಲಿನಿಂದ ಮತ್ತು ಕೈಯಿಂದ ಹೊಡೆದು ನೋವುಂಟು ಮಾಡಿ, ಅಲ್ಲಿಂದ ಪರಾರಿಯಾಗಿದ್ದಾರೆ ಅಂತ ರೇವಣ್ಣ ಗಂಭೀರ ಆರೋಪ ಮಾಡಿದರು.

ಮಹಿಳೆಯ ಮೇಲೆ ಆಗಿರುವ ದೌರ್ಜನ್ಯ ಮತ್ತು ನನ್ನ ಮಗನ ಮೇಲೆ ಮಾಡಿರುವ ಸುಳ್ಳು ಆರೋಪ ಹಿನ್ನೆಲೆಯಲ್ಲಿ ನಾಳೆ ಕಚೇರಿಯ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದರು ಮೈಸೂರಿನ ಐಜಿಪಿ ಹಾಗೂ ಎಸ್ಪಿ ಯವರ ಒತ್ತಾಯದ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಅಂತ ಸ್ಪಷ್ಟಪಡಿಸಿದರು.

ಇನ್ನೂ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ಬಿಜೆಪಿಯವರು ಗಲಭೆ ಮತ್ತು ಅಕ್ರಮ ಕುರಿತು ಮನವಿ ಕೊಟ್ಟಿದ್ದು ವಿನಾಕಾರಣ ನನ್ನ ಮಗ ಸೂರಜ್ ರೇವಣ್ಣ ಮೇಲೆ ಸುಳ್ಳು ಆರೋಪ ಮಾಡಿ ದೂರು ದಾಖಲು ಮಾಡಿದ್ದಾರೆ ಅಂತ ಅವರ ವಿರುದ್ಧವೇ ಹರಿಹಾಯ್ದರು.

ಇನ್ನು ಈ ಪ್ರಕರಣಕ್ಕೆ ಮುಖ್ಯಕಾರಣ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣಗೌಡ. ಚುನಾವಣಾ ಪ್ರಚಾರ ಮುಗಿದ ನಂತರ ಅವರು ಬೆಂಗಳೂರಿನ ಕಡೆ ಹೋಗದೆ, ಚುನಾವಣಾ ಕ್ಷೇತ್ರದ ಗಡಿಭಾಗದಲ್ಲಿ ಉಳಿದುಕೊಂಡು ಹಣ ಹಂಚಿಕೆಗೆ ಕುಮ್ಮಕ್ಕು ನೀಡಿದೆ ಇಷ್ಟಕ್ಕೆಲ್ಲ ಕಾರಣ ಅಂತ ಅವರ ವಿರುದ್ಧವೂ ಹರಿಹಾಯ್ದರು.

ಇನ್ನು ಚುನಾವಣೆ ಏಜೆಂಟ್ ಕೂಡ ಬಿಜೆಪಿ ಯವರ ವಿರುದ್ದ ದೂರು ನೀಡಿದ್ದು, ನಾನು ಸಹ ಹೇಳಿಕೆ ಕೊಟ್ಟಿದ್ದೇನೆ. ಆದರೆ ಪೊಲೀಸ್ ಇಲಾಖೆ ಮಾತ್ರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಲಿಲ್ಲ ಇನ್ನು ನಾಲ್ಕು ದಿನದ ಒಳಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ಇನ್ನು ಈ ಸಂಬಂಧ ನೊಂದ ಮಹಿಳೆಯ ಚೆನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದರು

*ಬೈಟ್: ಹೆಚ್. ಡಿ. ಎಚ್ ಡಿ ರೇವಣ್ಣ, ಸೂರಜ್ ರೇವಣ್ಣ ತಂದೆ*.

ಕೊಟ್ಟರೆ ಬಿಜೆಪಿ ಮತ್ತು ಜೆಡಿಎಸ್ ನಡುವಿನ ರಾಜಕೀಯ ವೈಷಮ್ಯ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಆದರೆ ಎರಡು ದಿನದ ಬಳಿಕ ನಂಬಿಹಳ್ಳಿ ಗ್ರಾಮದ ಶೇಖರ್ ನನ್ನ ಪತ್ನಿ ಪ್ರಭಾವತಿ ಮೇಲೆ ಮಾನಭಂಗಕ್ಕೆ ಬಿಜೆಪಿ ಕಾರ್ಪೋರೇಟರ್ ಮತ್ತು ಆತನ ಸ್ನೇಹಿತರು ಪ್ರಯತ್ನಪಟ್ಟರು ಅಂತ ದೂರು ನೀಡಿದ್ದು ಪ್ರಕರಣ ಮುಂದಿನ ದಿನಗಳಲ್ಲಿ ಯಾವ ಯಾವ ರೀತಿ ಬದಲಾಗುವುದೋ ಕಾಲವೇ ನಿರ್ಧರಿಸಬೇಕಿದೆ.

ಇನ್ನು ತುರ್ತು ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಬೇಲೂರು ಶಾಸಕ ಕೆ ಎಸ್ ಲಿಂಗೇಶ್ ಮತ್ತು ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.