ETV Bharat / state

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡ್ತಿದ್ದಾರೆ: ರೇವಣ್ಣ ಕಿಡಿ

author img

By

Published : Oct 9, 2019, 8:30 PM IST

ಆಯಾ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ತಡೆಹಿಡಿಯುವ ಮೂಲಕ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡ್ತಿದ್ದಾರೆ

ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಕಟ್ಟೆ ಕಿರು ಜಲಾಶಯ ಭರ್ತಿಯಾದ ಹಿನ್ನೆಲೆ ಇಂದು ತಮ್ಮ ಪತ್ನಿ ಹಾಗೂ ಜಿಲ್ಲಾ ಪಂಚಾಯತ್​ ಸದಸ್ಯೆ ಭವಾನಿ ರೇವಣ್ಣ ಹಾಗೂ ಪುತ್ರ ಲೋಕಸಭಾ ಸದಸ್ಯ ಪ್ರಜ್ವಲ್‍ರೊಂದಿಗೆ ಬಾಗಿನ ಅರ್ಪಿಸಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಮಾತನಾಡಿದರು.

ಅನರ್ಹ ಶಾಸಕರು ಮತ್ತು ಬಿಜೆಪಿಯಿಂದ ಚುನಾಯಿತರಾಗಿರುವ ಕ್ಷೇತ್ರಗಳು ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ನಡೆಸಿದ್ದಾರೆ. ಕಾವೇರಿ ನದಿಗೆ ಒಳಪಡುವ ಕೆಆರ್​ಎಸ್​​, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಕೋಟಿ ರೂ.ಗಳ ಕಾಮಗಾರಿಗಳನ್ನು ಸಿಎಂ ಯಡಿಯೂರಪ್ಪ ಬೇಕೆಂದೇ ತಡೆ ಹಿಡಿದಿದ್ದಾರೆ. ಇದಕ್ಕೆ ದೇವರಿಂದಲೇ ಅವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದರು. ಮೈಸೂರು, ಮಂಡ್ಯ, ಕಬಿನಿ ವ್ಯಾಪ್ತಿಯಲ್ಲಿನ 5150 ಕೋಟಿ ರೂ.ಗಳ ಕಾಮಗಾರಿ, ಹೇಮಾವತಿ ವಿಭಾಗದಲ್ಲಿನ 1650 ಕೋಟಿ ರೂ., ತುಮಕೂರು ವಲಯದ ಕಾವೇರಿ ನಿಗಮದ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿದ್ದ 500 ಕೋಟಿ ರೂ.ಗಳ ಕಾಮಗಾರಿಗೆ ಸರ್ಕಾರ ತಡೆ ನೀಡಿದೆ ಎಂದು ಆರೋಪಿಸಿದರು.

ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡ್ತಿದ್ದಾರೆ: ರೇವಣ್ಣ

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನ ನಿವಾರಿಸಲು ಸರ್ಕಾರದೊಂದಿಗೆ ಚರ್ಚಿಸುವೆ. ಮನುಷ್ಯ ಮತ್ತು ಆನೆ ಸಂಘರ್ಷ ಕೊನೆಗಾಣಿಸಲು ಆನೆ ಕಾರಿಡಾರ್ ಯೋಜನೆಗೆ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿ ನಡೆಸಿದ್ದಾಗಿದೆ. ಅರಣ್ಯ ಭೂಮಿ ಒತ್ತುವರಿ ನಡೆಸಿರುವುದು ಆನೆ ದಾಳಿಗೆ ಕಾರಣ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ ಎಂದ್ರು.

Intro:ಹಾಸನ: ಆಯಾ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ತಡೆಹಿಡಿಯುವ ಮೂಲಕ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಿರು ಜಲಾಶಯ ಚಾಕೇನಹಳ್ಳಿ ಕಟ್ಟೆತುಂಬಿ ಹರಿದಿದ್ದರ ಹಿನ್ನಲೆಯಲ್ಲಿ ಬುಧವಾರ ಪತ್ನಿ ಜಿಪಂ ಸದಸ್ಯೆ ಭವಾನಿ ಹಾಗೂ ಪುತ್ರ ಲೋಕಸಭಾ ಸದಸ್ಯ ಪ್ರಜ್ವಲ್‍ರೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು. ಅನರ್ಹ ಶಾಸಕರ ಮತ್ತು ಬಿಜೆಪಿ ಚುನಾಯಿತರಾಗಿರುವ ಕ್ಷೇತ್ರಗಳಿಗೆ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ನಡೆಸಿದ್ದಾರೆ. ಕಾವೇರಿ ಕೊಳ್ಳಕ್ಕೆ ಒಳಪಡುವ ಕೆಆರ್‍ಎಸ್, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಕೋಟಿ ರೂ. ಗಳ ಕಾಮಗಾರಿಗಳನ್ನು ಸಿಎಂ ಯಡಿಯೂರಪ್ಪ ಬೇಕೆಂದೇ ತಡೆ ಹಿಡಿದಿದ್ದಾರೆ. ಇದಕ್ಕೆ ದೇವರಿಂದಲೇ ಅವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದರು. ಮೈಸೂರು, ಮಂಡ್ಯ , ಕಬಿನಿ ವ್ಯಾಪ್ತಿಯಲ್ಲಿನ 5150 ಕೋಟಿ ರೂ ಗಳ ಕಾಮಗಾರಿ, ಹೇಮಾವತಿ ವಿಭಾಗದಲ್ಲಿನ 1650 ಕೋಟಿ ರೂ , ತುಮಕೂರು ವಲಯದ ಕಾವೇರಿ ನಿಗಮದ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿದ್ದ 500 ಕೋಟಿ ರೂಗಳ ಕಾಮಗಾರಿಗೆ ಸರ್ಕಾರ ತಡೆ ನೀಡಿಗೆ ಎಂದು ಆರೋಪಿಸಿದರು. ಬೈಟ್: ಎಚ್. ಡಿ. ರೇವಣ್ಣ, ಮಾಜಿ ಸಚಿವ. ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಮಾತನಾಡಿ, ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಿಸಲು ಸರ್ಕಾರದೊಂದಿಗೆ ಚರ್ಚಿಸುವೆ. ಮನುಷ್ಯ ಮತ್ತು ಆನೆ ಸಂಘರ್ಷ ಕೊನೆಗಾಣಿಸಲು ಆನೆಕಾರಿಡಾರ್ ಯೋಜನೆಗೆ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾಗಿದೆ. ಅಧಿಕಾರಿಗಳ ಸಭೆಯಲ್ಲಿ ಆನೆಗಳ ಸ್ಥಳಾಂತರ ಸೂಕ್ತವಲ್ಲ ಎಂದಿದ್ದಾರೆ. ಎಲ್ಲೆಂದರಲ್ಲಿ ಒಂಟಿಯಾಗಿ ಮನೆ ನಿರ್ಮಿಸಿಕೊಂಡಿರುವುದು. ಅರಣ್ಯ ಭೂಮಿ ಒತ್ತುವರಿ ನಡೆಸಿರುವುದು ಆನೆ ದಾಳಿಗೆ ಕಾರಣ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ ಎಂದ್ರು. ಬೈಟ್ : ಪ್ರಜ್ವಲ್ ರೇವಣ್ಣ, ಸಂಸದ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.