ETV Bharat / state

ಹಾಸನ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡದಿದ್ದರೆ ಹೋರಾಟ: ಎಚ್.ಡಿ.ರೇವಣ್ಣ - ಹಾಸನ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡದಿದ್ದರೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಹೋರಾಟ: ಹೆಚ್.ಡಿ. ರೇವಣ್ಣ

ಬಿಜೆಪಿಯರು ಕೊರೊನಾ ನಡುವೆಯೂ ನಿಗಮ ಮಂಡಳಿ ನೇಮಕ ಮತ್ತು ಸಂಪುಟ ವಿಸ್ತರಣೆಗೆ ಮುಂದಾಗಿರುವ ವಿಚಾರವಾಗಿ ಮಾತನಾಡಿ, ಸರ್ಕಾರ ಉಳಿಸಿಕೊಂಡು ಇರುವಷ್ಟು ದಿನ ಮಜಾ ಮಾಡಬೇಕು ಅನ್ನೋದೆ ಬಿಜೆಪಿಯವರ ಉದ್ದೇಶವಾಗಿದೆ. ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು.

H D Revanna
ಹೆಚ್.ಡಿ. ರೇವಣ್ಣ
author img

By

Published : Jul 30, 2020, 6:19 PM IST

Updated : Jul 30, 2020, 9:26 PM IST

ಹಾಸನ: ಭೂ-ಸುಧಾರಣಾ ಕಾಯಿದೆ ತಿದ್ದುಪಡಿ ಹಿಂಪಡೆಯದಿದ್ದರೆ ಮತ್ತು ಇನ್ನೊಂದು ವಾರದಲ್ಲಿ ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೆ ಮುಂದಾಗದಿದ್ದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಹೋರಾಟಕ್ಕೆ ಇಳಿಯಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದರು.

ಹಾಸನ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡದಿದ್ದರೆ ಹೋರಾಟ; ಎಚ್.ಡಿ. ರೇವಣ್ಣ

ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೆಸರಲ್ಲಿ ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಗಳು ಬೋಗಸ್ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಜನರ ಹಕ್ಕನ್ನು ಎಂದು ಕಿತ್ತುಕೊಳ್ಳಲು ಮುಂದಾಗಬೇಡಿ. ಭೂ ಸುಧಾರಣಾ ಕಾಯ್ದೆ ವಿರುದ್ದವಾಗಿ ಸಿಎಂ ವಿರುದ್ಧ ಜನತೆ ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.

ಡಿ.ಕೆ. ಶಿವಕುಮಾರ್‌ರವರು ಜೆಡಿಎಸ್ ಪಕ್ಷವನ್ನು ನಿರ್ಣಾಮ ಮಾಡುತ್ತಾರೆಂದು ಬಿಜೆಪಿ ಮುಖಂಡ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ರೇವಣ್ಣನವರು, ಯಾರು ಯಾರನ್ನು ನಿರ್ನಾಮ ಮಾಡುತ್ತಾರೆಂದು ಮುಂದೆ ಕಾದು ನೋಡೋಣ, ಜನ ತೀರ್ಮಾನ ಮಾಡುತ್ತಾರೆ ಎಂದರು.

ಬಿಜೆಪಿಯರು ಕೊರೊನಾ ನಡುವೆಯೂ ನಿಗಮ ಮಂಡಳಿ ನೇಮಕ ಮತ್ತು ಸಂಪುಟ ವಿಸ್ತರಣೆಗೆ ಮುಂದಾಗಿರುವ ವಿಚಾರವಾಗಿ ಮಾತನಾಡಿ, ಸರ್ಕಾರ ಉಳಿಸಿಕೊಂಡು ಇರುವಷ್ಟು ದಿನ ಮಜಾ ಮಾಡಬೇಕು ಅನ್ನೋದೆ ಬಿಜೆಪಿಯವರ ಉದ್ದೇಶವಾಗಿದೆ. ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದರು.

ಸಕಲೇಶಪುರ ತಾಲ್ಲೂಕಿನ ಹೆತ್ತೂರು ಪದವಿ ಕಾಲೇಜನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದ್ದಾರೆ. ಈ ಕಾಲೇಜಿಗೆ ಶಿಕ್ಷಕರನ್ನೇ ಇನ್ನೂ ನೇಮಕ ಮಾಡಿರುವುದಿಲ್ಲ. ಬೇಲೂರಿನ ರಣಘಟ್ಟ ಯೋಜನೆಗೆ ಹಣ ನೀಡದೆ ತಡೆ ಹಿಡಿದಿದ್ದಾರೆ. ಇನ್ನು ಹಾಸನ ಜಿಲ್ಲೆಯ ಎಲ್ಲ ಕಾಮಗಾರಿಗಳನ್ನ ತಡೆ ಹಿಡಿದಿದ್ದಾರೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನೂ ಬೇಕಂತಲೆ ತಡೆ ಹಿಡಿದಿದ್ದಾರೆ. ಮುಖ್ಯಮಂತ್ರಿಗಳು ಹಿಂದೆಯೆ ನಾನು ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದರು. ಆದರೆ ಈಗ ಮಾಡುತ್ತಿರುವುದು ಏನು ಎಂದು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿಗಳಿಗೆ ಒಂದು ವಾರ ಗಡುವು ನೀಡುತ್ತೇವೆ. ನಮ್ಮ ಹಾಸನ ಜಿಲ್ಲೆಯ ಕೆಲಸ ಮಾಡದಿದ್ದರೆ ಸರ್ಕಾರದ ವಿರುದ್ಧ ಜೆಡಿಎಸ್‌ನಿಂದ ಹೋರಾಟ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರಿಂದ ಹೋರಾಟ ಮಾಡುವುದಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿದರು.

Last Updated : Jul 30, 2020, 9:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.