ETV Bharat / state

ಕೊನೆಗೂ 'ಕೈ' ಕೊಟ್ಟು ಕಮಲ ಮುಡಿದ ಮಾಜಿ ಸಚಿವ ಎ.ಮಂಜು! - ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಎ ಮಂಜು ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್​ ಪಕ್ಷದಲ್ಲಿದ್ದ ಮಾಜಿ ಸಚಿವ ಎ. ಮಂಜು ಬಿಜೆಪಿಗೆ ನಿನ್ನೆ ರಾತ್ರಿ ಸೇರ್ಪಡೆಗೊಂಡಿದ್ದಾರೆ.

ಮಾಜಿ ಸಚಿವ ಎ.ಮಂಜು
author img

By

Published : Mar 18, 2019, 9:09 AM IST

ಹಾಸನ: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿವೆ. ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಕಣಕ್ಕಿಳಿದಿದ್ದು, ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಇವರಿಗೆ ಸವಾಲೊಡ್ಡಲು ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ಕೈ ಪಾಳಯವನ್ನ ತೊರೆದು ಬಿಜೆಪಿಗೆ ಸೇರುವ ಮೂಲಕ ಬಹುದಿನದಿಂದ ನಡೆಯುತ್ತಿದ್ದ ಗುಸು ಗುಸು ಮಾತುಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಹಲವಾರು ಮಂದಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದು, ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕಾಂಗ್ರೆಸ್​​​ನ ಎ.ಮಂಜು. ಹಾಸನದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್​​​ಗೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ಕಮಲ ಪಾಳೆಯಕ್ಕೆ ಮತ್ತೊಂದು ಆನೆ ಬಲ ಬಂದಂತಾಗಿದೆ.
ಹಾಸನದಲ್ಲಿ ಮೈತ್ರಿ ಮಾಡಿಕೊಂಡರೆ ದೇವೇಗೌಡರಿಗೆ ಮಾತ್ರ ಬೆಂಬಲ ನೀಡುತ್ತೇನೆ. ಆದ್ರೆ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ಕೊಟ್ಟರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಈ ಹಿಂದೆಯೇ ಎ.ಮಂಜು ಹೇಳಿದ್ರು.

ಮಾಜಿ ಸಚಿವ ಎ.ಮಂಜು

ಈಗ ಅದರಂತೆ ಕಾಂಗ್ರೆಸ್‌ಗೆ ಕೈ ಕೊಟ್ಟು ಕೇಸರಿ ಪಕ್ಷದ ಬಾವುಟ ಹಿಡಿದು ಬಿಜೆಪಿಗೆ ಸೇರ್ಪಡೆಯಾದ್ರು. ಹಾಸನ ಶಾಸಕ ಪ್ರೀತಂಗೌಡ ಬಿಜೆಪಿ ಧ್ವಜ ನೀಡಿ ಮಂಜು ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜು, ಬಿಜೆಪಿ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಇನ್ನು ಹಾಸನದಲ್ಲಿ ಕಮಲ ಅರಳಿಸುವುದಕ್ಕೆ ಒತ್ತು ನೀಡುತ್ತೇನೆ ಎಂದ್ರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಇದೇ ರೀತಿ ಮುಂದುವರಿದರೆ ಕಾಂಗ್ರೆಸ್​​ಗೆ ಮಾರಕವಾಗಲಿದೆ. ಬಿಜೆಪಿಗೆ ಲಾಭವಾಗಲಿದೆ ಎಂದು ಮಂಜು ಭವಿಷ್ಯ ನುಡಿದ್ರು.

ಹೌದು, ಮಾಜಿ ಸಚಿವ ಎ.ಮಂಜು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರು. ಹಿಂದೆ ಲೋಕಸಭಾ ಚುನಾವಣೆಯಲ್ಲಿಯೂ ದೇವೇಗೌಡರ ಎದುರು ಸ್ಪರ್ಧೆ ಮಾಡಿ ಸರಿ ಸುಮಾರು 1.6 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ರು. ಈಗ ಬಿಜೆಪಿಗೆ ಬಂದಿರುವ ಕಾರಣ ಜಿಲ್ಲೆಯಲ್ಲಿ ಕಾಂಗ್ರೆಸ್ ಅತಂತ್ರವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.ಬಿಜೆಪಿ ಸೇರುವ ಕುರಿತು ಮಂಜು ರಾಜ್ಯ ಬಿಜೆಪಿ ನಾಯಕರ ಜೊತೆ ಮೂರು ಸುತ್ತಿನ ಮಾತುಕತೆ ನಡೆಸಿದ್ದರು.

ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡ ವಿರುದ್ಧ ಸ್ಪರ್ಧಿಸಿದ್ದ ಮಂಜು, ಗೌಡರ ಗೆಲುವಿನ ಅಂತರವನ್ನು 1.6 ಲಕ್ಷ ಮತಗಳಿಗೆ ಇಳಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅವರು, ಮರಳಿ ರಾಜಕೀಯ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಹೊಂದಿದ್ದು, ಮಂಜು ತಮ್ಮ ಮಾತೃ ಪಕ್ಷ ಬಿಜೆಪಿ ಅಭ್ಯರ್ಥಿಯಾದರೆ ಅನುಕೂಲ ಆಗಬಹುದು ಎಂಬುದು ನಾಯಕರ ಲೆಕ್ಕಾಚಾರ. 1999 ರಲ್ಲಿ ಮೊದಲ ಬಾರಿಗೆ ಅವರು ಬಿಜೆಪಿಯಿಂದಲೇ ಶಾಸನಸಭೆ ಪ್ರವೇಶಿಸಿದ್ದರು. ನಂತರ ಎಸ್.ಎಂ.ಕೃಷ್ಣ ಅವರು ಮಂಜು ಅವರನ್ನು ಕಾಂಗ್ರೆಸ್‍ಗೆ ಸೆಳೆದಿದ್ದರು. ಅವರು ಪಕ್ಷ ತ್ಯಜಿಸಿದ ಬಳಿಕ ಅರಕಲಗೂಡು ಕ್ಷೇತ್ರದಲ್ಲಿ ಬಿಜೆಪಿ ಬಲ ಕುಂದಿತ್ತು. ಸದ್ಯ ಎ.ಮಂಜು ಪಕ್ಷಕ್ಕೆ ಮರಳಿರುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.

ಈ ಲೋಕಸಭಾ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಹಾಸನ ಜಿಲ್ಲೆಯ ಹೊಳೆನರಸೀಪುರ, ಸಕಲೇಶಪುರ, ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ, ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಜ್ವಲ್ ರೇವಣ್ಣ ಎಂಜಿನಿಯರ್ ಪದವೀಧರ. ತಾತ ಹೆಚ್.ಡಿ.ದೇವೇಗೌಡ, ತಂದೆ ಹೆಚ್.ಡಿ. ರೇವಣ್ಣ ಅವರ ಜೊತೆ ಕ್ಷೇತ್ರದ್ಯಾಂತ ಓಡಾಡಿ ಕಾರ್ಯಕರ್ತರ ಜೊತೆ ಒಡನಾಟ ಇಟ್ಟು ಕೊಂಡಿದ್ದಾರೆ. ಈ ಬಾರಿ ಗೌಡರು ತಮ್ಮ ಮೊಮ್ಮಗನನ್ನು ರಾಜಕೀಯ ಅಖಾಡಕ್ಕೆ ತರಲು ಲೋಕಸಭಾ ಚುನಾವಣೆಯನ್ನು ವೇದಿಕೆ ಮಾಡಿಕೊಂಡಿದ್ದು, ಪ್ರಜ್ವಲ್ ಗೆಲುವು ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದರೂ ಜಿಲ್ಲೆಯಲ್ಲಿ ಜೆಡಿಎಸ್ ಎಲ್ಲಾ ಹಂತದಲ್ಲಿಯೂ ಮೇಲುಗೈ ಸಾಧಿಸಿರುವುದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿದೆ. ಇನ್ನು ಕುಟುಂಬ ರಾಜಕಾರಣದ ಮೂಲಕವೇ ಹೆಸರಾಗಿದ್ದ ಗೌಡರ ಕುಟುಂಬ ಈ ಬಾರಿ ತಮ್ಮ ಮೂರನೇ ತಲೆಮಾರನ್ನೂ ರಾಜಕೀಯ ಅಖಾಡಕ್ಕೆ ಕರೆತರುತ್ತಿರೋದೇ ಅವರಿಗೆ ಮುಳುವಾಗಲಿದೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಇತ್ತ ಜೆಡಿಎಸ್‍ಗೆ ಪ್ರಬಲ ಪೈಪೋಟಿ ನೀಡಬಲ್ಲ ಎ.ಮಂಜು ಬಿಜೆಪಿ ಸೇರಿದ್ದು, ಅವರೊಂದಿಗೆ ಬೆಂಬಲಿಗರು ಪಕ್ಷಾಂತರ ಮಾಡಲು ನಿರ್ಧರಿಸಿದ್ದಾರೆ. ಉಳಿದವರು ಅನಿವಾರ್ಯವಾಗಿ ಮೈತ್ರಿ ಅಭ್ಯರ್ಥಿ ಬೆಂಬಲಿಸಲು ನಿರ್ಧಾರ ಕೈಗೊಂಡರೆ ಫಲಿತಾಂಶ ಬದಲಾಗಬಹುದು ಎಂದು ವಿಶ್ಲೇಷಿಸಲಾಗಿದೆ.

Intro:ಹಾಸನ: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿದೆ. ಈಗಾ ಗಲೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಕಣಕ್ಕಿಳಿದಿದ್ದು, ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಇವರಿಗೆ ಸವಾಲೊಡ್ಡಲು ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ಕೈ ಪಾಳಯವನ್ನ ತೊರೆದು ಬಿಜೆಪಿಗೆ ಸೇರುವ ಮೂಲಕ ಬಹುದಿನದಿಂದ ನಡೆಯುತ್ತಿದ್ದ ಗುಸು-ಗುಸು ಮಾತುಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ.   
 
ರಾಜ್ಯದಲ್ಲಿ ಈಗಾಗಲೇ ಹಲವಾರು ಮಂದಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದು, ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ  ಕಾಂಗ್ರೆಸ್‌ ನ ಎ. ಮಂಜು. ಹಾಸನದಲ್ಲಿ ಇಂದು ಸಂಜೆ ಬಿಜೆಪಿಗೆ ಸೇರ್ಪಡೆಗೊಳ್ಳುವ ಬಿಜೆಪಿಗೆ ಸೇರುವ ಮೂಲಕ ಕಾಂಗ್ರೇಸ್ ಗೆ ಗುಡ್ ಬೈ ಹೇಳಿದ್ದಾರೆ. ಹೀಗಾಗಿ ಕಮಲ ಪಾಳೆಯಕ್ಕೆ ಮತ್ತೊಂದು ಆನೆ ಬಲ ಬಂದಂತಾಗಿದೆ.
 
ಹಾಸನದಲ್ಲಿ ಮೈತ್ರಿ ಮಾಡಿಕೊಂಡರೆ ದೇವೇಗೌಡರಿಗೆ ಮಾತ್ರ ಬೆಂಬಲ ನೀಡುತ್ತೇನೆ. ಆದ್ರೆ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಟಿಕೆಟ್‌ ಕೊಟ್ಟರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದ ಎ. ಮಂಜು ಅದರಂತೆ ಕಾಂಗ್ರೆಸ್‌ಗೆ ಕೈ ಕೊಟ್ಟು ಕೇಸರಿ ಪಕ್ಷದ ಬಾವುಟ ಹಿಡಿದು ಬಿಜೆಪಿಗೆ ಸೇರ್ಪಡೆಯಾದ್ರು. ಹಾಸನ ಶಾಸಕ ಪ್ರೀತಂಗೌಡ ಬಿಜೆಪಿ ಧ್ವಜ ನೀಡಿ ಮಂಜು ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
 
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜು, ಬಿಜೆಪಿ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಇನ್ನು ಹಾಸನದಲ್ಲಿ ಕಮಲ ಅರಳಿಸುವುದಕ್ಕೆ ಒತ್ತು ನೀಡುತ್ತೇನೆ ಎಂದ್ರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಇದೇ ರೀತಿ ಮುಂದುವರಿದರೆ ಅವುಗಳಿಗೆ ಕಾಂಗ್ರೇಸ್ ಗೆ ಮಾರಕವಾಗಲಿದೆ. ಬಿಜೆಪಿಗೆ ಲಾಭವಾಗಲಿದೆ ಎಂದು ಮಂಜು ಭವಿಷ್ಯ ನುಡಿದ್ರು.
 
ಹೌದು ಮಾಜಿ ಸಚಿವ ಎ.ಮಂಜು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರಲ್ಲಿ ಒಬ್ಬರು. ಹಿಂದೆ ಲೋಕಸಭಾ ಚುನಾವಣೆಯಲ್ಲಿಯೂ ದೇವೇಗೌಡರ ಎದುರು ಸ್ಪರ್ಧೆ ಮಾಡಿ ಸರಿ ಸುಮಾರು 1.6ಲಕ್ಷ  ಮತಗಳ ಅಂತರದಿಂದ ಪರಾಭವಗೊಂಡಿದ್ರು. ಈಗ ಬಿಜೆಪಿಗೆ ಬಂದಿರುವ ಕಾರಣ ಜಿಲ್ಲೆಯಲ್ಲಿ ಕಾಂಗ್ರೆಸ್ ಅತಂತ್ರವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
 
ಬಿಜೆಪಿ ಸೇರುವ ಕುರಿತು ಮಂಜು ಅವರು ರಾಜ್ಯ ಬಿಜೆಪಿ ನಾಯಕರ ಜೊತೆ ಮೂರು ಸುತ್ತಿನ ಮಾತುಕತೆ ನಡೆಸಿದ್ದು, ಇಂದು ಕೂಡಾ ಶ್ರವಣಬೆಳಗೊಳ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡರ ಮನೆಗೆ ಭೇಟಿ ನೀಡಿ ಅವರೊಂದಿಗೂ ಚರ್ಚೆ ನಡೆಸಿದ ಕೆಲವೇ ಹೊತ್ತಿನಲ್ಲಿ ಹಾಸನಕ್ಕೆ ತೆರಳಿ ಹಾಸನದ ಸ್ಥಳೀಯ ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಸರಳವಾಗಿ ಬಿಜೆಪಿ ಸೇರ್ಪಡೆಗೊಂಡ್ರು.
 
ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡ ವಿರುದ್ಧ ಸ್ಪರ್ಧಿಸಿದ್ದ ಮಂಜು, ಗೌಡರ ಗೆಲುವಿನ ಅಂತರವನ್ನು 1.6ಲಕ್ಷ ಮತಗಳಿಗೆ ಇಳಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅವರು, ಮರಳಿ ರಾಜಕೀಯ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಹೊಂದಿದ್ದು, ಮಂಜು ಅವರು ತಮ್ಮ ಮಾತೃಪಕ್ಷ ಬಿಜೆಪಿ ಅಭ್ಯರ್ಥಿಯಾದರೆ ಅನುಕೂಲ ಆಗಬಹುದು ಎಂಬುದು ನಾಯಕರ ಲೆಕ್ಕಾಚಾರ. 1999 ರಲ್ಲಿ ಮೊದಲ ಬಾರಿಗೆ ಅವರು ಬಿಜೆಪಿಯಿಂದಲೇ ಶಾಸನಸಭೆ ಪ್ರವೇಶಿಸಿದ್ದರು. ನಂತರ ಎಸ್.ಎಂ.ಕೃಷ್ಣ ಅವರು ಮಂಜು ಅವರನ್ನು ಕಾಂಗ್ರೆಸ್‍ಗೆ ಸೆಳೆದಿದ್ದರು. ಅವರು ಪಕ್ಷ ತ್ಯಜಿಸಿದ ಬಳಿಕ ಅರಕಲಗೂಡು ಕ್ಷೇತ್ರದಲ್ಲಿ ಬಿಜೆಪಿ ಬಲ ಕುಂದಿತ್ತು. ಸದ್ಯ ಎ.ಮಂಜು ಪಕ್ಷಕ್ಕೆ ಮರಳಿರುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.
 
ಈ ಲೋಕಸಭಾ ವ್ಯಾಪ್ತಿಗೆ 8 ವಿಧಾನ ಸಭಾ ಕ್ಷೇತ್ರಗಳು ಬರಲಿದ್ದು, ಹಾಸನ ಜಿಲ್ಲೆಯ ಹೊಳೆನರಸೀಪುರ, ಸಕಲೇಶಪುರ, ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ, ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
 
ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಜ್ವಲ್ ರೇವಣ್ಣ ಎಂಜಿನಿಯರ್ ಪದವೀಧರ. ತಾತ ಎಚ್.ಡಿ.ದೇವೇಗೌಡ, ತಂದೆ ಎಚ್.ಡಿ. ರೇವಣ್ಣ ಅವರ ಜೊತೆ ಕ್ಷೇತ್ರದ್ಯಾಂತ ಓಡಾಡಿ ಕಾರ್ಯಕರ್ತರ ಜೊತೆ ಒಡನಾಟ ಇಟ್ಟು ಕೊಂಡಿದ್ದಾರೆ. ಈ ಬಾರಿ ಗೌಡರು ತಮ್ಮ ಮೊಮ್ಮಗನನ್ನು ರಾಜಕೀಯ ಅಖಾಡಕ್ಕೆ ತರಲು ಲೋಕಸಭಾ ಚುನಾವಣೆಯನ್ನು ವೇದಿಕೆ ಮಾಡಿಕೊಂಡಿದ್ದು, ಪ್ರಜ್ವಲ್ ಗೆಲುವು ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
 
ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದರೂ ಜಿಲ್ಲೆಯಲ್ಲಿ ಜೆಡಿಎಸ್ ಎಲ್ಲಾ ಹಂತದಲ್ಲಿಯೂ ಮೇಲುಗೈ ಸಾಧಿಸಿರುವುದು ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿದೆ. ಇನ್ನೂ ಕುಟುಂಬ ರಾಜಕಾರಣದ ಮೂಲಕವೇ ಹೆಸರಾಗಿದ್ದ ಗೌಡರ ಕುಟುಂಬ ಈ ಬಾರಿ ತಮ್ಮ ಮೂರನೇ ತಲೆಮಾರನ್ನೂ ರಾಜಕೀಯ ಅಖಾಡಕ್ಕೆ ಕರೆತರುತ್ತಿರೋದೇ ಅವರಿಗೆ ಮುಳುವಾಗಲಿದೆಯೇ ಎಂಬ ಚರ್ಚೆ ಗ್ರಾಸವಾಗಿದ್ದು, ಇತ್ತ ಜೆಡಿಎಸ್‍ಗೆ ಪ್ರಬಲ ಪೈಪೋಟಿ ನೀಡಬಲ್ಲ ಎ. ಮಂಜು ಬಿಜೆಪಿ ಸೇರಿದ್ದು ಅವರೊಂದಿಗೆ ಬೆಂಬಲಿಗರು ಪಕ್ಷಾಂತರ ಮಾಡಲು ನಿರ್ಧರಿಸಿದ್ದಾರೆ. ಉಳಿದವರು ಅನಿವಾರ್ಯವಾಗಿ ಮೈತ್ರಿ ಅಭ್ಯರ್ಥಿ ಬೆಂಬಲಿಸಲು ನಿರ್ಧಾರ ಕೈಗೊಂಡರೆ ಫಲಿತಾಂಶ ಬದಲಾಗಬಹುದು ಎಂದು ವಿಶ್ಲೇಷಿಸಲಾಗಿದೆ.  

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.