ETV Bharat / state

ಯಾರ್​ ಹೇಳಿದ್ದು ನಾನು ಕಾಂಗ್ರೆಸ್​ಗೆ ಹೋಗ್ತೀನಿ ಅಂತ?: ಮಾಜಿ ಸಚಿವ ಎ.ಮಂಜು - ಕಾಂಗ್ರೆಸ್​ ಸೇರುವ ವಿಚಾರ

ರಾಜ್ಯದಲ್ಲಿ ನಮ್ಮದೆ ಸರ್ಕಾರ ಇರುವಾಗ ನಾನು ಯಾಕೆ ಕಾಂಗ್ರೆಸ್​ಗೆ ಹೋಗುತ್ತೇನೆ. ನನ್ನ ವಿರೋಧಿಗಳು ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.

Former Minister A Manju
ಮಾಜಿ ಸಚಿವ ಎ.ಮಂಜು
author img

By

Published : Jul 4, 2021, 3:55 PM IST

ಹಾಸನ: ಯಾರು ಕಾಂಗ್ರೆಸ್​​ಗೆ ಹೋಗ್ತಾರೆ ಅಂತ ಹೇಳಿದ್ದು?, ಇವೆಲ್ಲವೂ ಕೇವಲ ಊಹಾಪೋಹಗಳಷ್ಟೇ ಎಂದು ಮಾಜಿ ಸಚಿವ ಎ.ಮಂಜು ಹೇಳಿದರು.

ಮಾಜಿ ಸಚಿವ ಎ.ಮಂಜು ಸ್ಪಷ್ಟನೆ

ಅರಕಲಗೂಡು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದಲ್ಲಿದ್ದೇನೆ. ನನ್ನ ವಿರೋಧಿಗಳು ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿ ಹರಡುತ್ತಿದ್ದಾರೆ. 1999ರಲ್ಲಿ ನಾನು ಬಿಜೆಪಿಯಲ್ಲಿದ್ದಕೊಂಡು ಅರಕಲಗೂಡು ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ಜನತೆ ನನಗೆ ಮತ ಹಾಕಿ ಗೆಲ್ಲಿಸಿದ್ದರು. ಆಗ ಬಿಜೆಪಿಯಲ್ಲಿ ಮೋದಿ, ಅಮಿತ್​ ಶಾ ಇದ್ರಾ? ಎಂದರು.

ನಾನು ಕಾಂಗ್ರೆಸ್​ ಸೇರುತ್ತೇನೆಂದು ಯಾವುದೇ ಹೇಳಿಕೆ ನೀಡಿಲ್ಲ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಅರಕಲಗೂಡು ಕ್ಷೇತ್ರದಿಂದಲೇ ಎದುರಿಸುತ್ತೇನೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.