ETV Bharat / state

ಜನರ ಸಮಸ್ಯೆ ಬಗೆಹರಿಸುವಲ್ಲಿ ದಮ್ಮು ತಾಕತ್ತು ತೋರಿಸಬೇಕು, ಡಾನ್ಸ್​ ಮಾಡೋದಲ್ಲ; ಹೆಚ್​ಡಿಕೆ ಕಿಡಿ - ಜನಸ್ಪಂದನ

ಬಿಜೆಪಿ ಸರ್ಕಾರದಲ್ಲಿ ನಡೆದಿರುವ ದೊಡ್ಡ ಹಗರಣವನ್ನು ಕಲಾಪದಲ್ಲಿ ಬಯಲು ಮಾಡುತ್ತೇನೆ. ಜನಸ್ಪಂದನ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡ್ತಿದ್ದಾರೆ. 40% ಕಮಿಷನ್ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Former Chief Minister HD Kumaraswamy
ಹೆಚ್​ಡಿಕೆ
author img

By

Published : Sep 14, 2022, 12:59 PM IST

ಹಾಸನ: ಈ ಸರ್ಕಾರದಲ್ಲಿ ನಡೆದಿರುವ ದೊಡ್ಡ ಹಗರಣವನ್ನು ಬಯಲಿಗೆ ತರಲಾಗುವುದು. ಶೇ.40ರಷ್ಟು ಪರ್ಸೆಂಟೇಜ್ ಕಮಿಷನ್ ವಿಚಾರವನ್ನೂ ಸದನದ ಕಲಾಪದಲ್ಲಿ ಇಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿಯವರಿಗೆ ಟಾಂಗ್​ ನೀಡಿದ ಹೆಚ್​ಡಿಕೆ: ನಗರದ ಹೆಚ್.ಪಿ. ಸ್ವರೂಪ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 2 ತಿಂಗಳಿನಲ್ಲಿ ರಾಜ್ಯದ 22 ಜಿಲ್ಲೆಗಳಲ್ಲಿ ಅತಿವೃಷ್ಟಿ ಉಂಟಾಗಿದೆ. ಇಂತಹ ಸಮಯದಲ್ಲಿ ಬಿಜೆಪಿ ಸರ್ಕಾರದ ಸಚಿವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಡಲಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಧಮ್ಮು ಮತ್ತು ತಾಕತ್ತು ತೋರಿಸಬೇಕೆ ಹೊರತು ವೇದಿಕೆಯ ಮೇಲೆ ಡ್ಯಾನ್ಸ್ ಮಾಡೋದಲ್ಲ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದರು.

ಕಲಾಪದಲ್ಲಿ ಹಗರಣ ಬಯಲು: ಜನಸ್ಪಂದನ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡ್ತಿದ್ದಾರೆ. 40% ಕಮಿಷನ್ ಬಗ್ಗೆ ಸದನದಲ್ಲಿ ಚರ್ಚಿಸುತ್ತೇನೆ. ದಾಖಲೆ ಸಂಗ್ರಹ ಮಾಡುವ ಸಮಯದಲ್ಲಿ ಸರ್ಕಾರದ ಒಬ್ಬ ಮಂತ್ರಿ ಅಕ್ರಮದ ದಾಖಲಾತಿ ಫೈಲ್ ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಂಡಿದ್ದಾನೆ. ಈ ಸರ್ಕಾರದಲ್ಲಿ ನಡೆದಿರುವ ದೊಡ್ಡ ಹಗರಣವನ್ನು ಕಲಾಪದಲ್ಲಿ ಬಯಲು ಮಾಡುತ್ತೇನೆ ಎಂದು ಹೆಚ್​ಡಿಕೆ ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಹಿಂದಿ ದಿವಸ್​ ಆಚರಣೆಗೆ ವಿರೋಧ: ಹಿಂದಿ ದಿವಸ್​ ಆಚರಣೆಗೆ ನನ್ನ ವಿರೋಧ ಇದೆ. ಆಯಾ ರಾಜ್ಯದಲ್ಲಿ ಆ ಭಾಷೆಗೆ ತನ್ನದೇ ಆದ ಗೌರವ ಇದೆ. ಜನರ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಣೆ ಮಾಡುತ್ತಾ, ಹೈಕಮಾಂಡ್ ಮನವೊಲಿಸಲು ಬಿಜೆಪಿಯವರು ಮುಂದಾಗಿದ್ದಾರೆ ಎಂದು ಹೆಚ್​ಡಿಕೆ ಕುಟುಕಿದರು.

ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿಚಾರ ವೈಯಕ್ತಿಕ. ಯಾರ ಬಗ್ಗೆಯೂ ಈಗ ಚರ್ಚೆ ಮಾಡುವುದಿಲ್ಲ. ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಇದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. 120 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚಿಸಿದ್ದೆನೆ. ಸುಮಾರು 20-30 ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇದ್ದು, ಅದರ ಬಗ್ಗೆ ಸಭೆ ಕರೆದು ಅಂತಿಮ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುತ್ತೇನೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಬಾರದು: ಕುಮಾರಸ್ವಾಮಿ ಆಗ್ರಹ

ರಾಷ್ಟ್ರೀಯ ಪಕ್ಷಗಳೂ ಸರ್ವೆ ಮಾಡಿಸಿದ್ದು, ನಾನು ಮಾಡಿರುವ ಸರ್ವೆ ರಿಪೋರ್ಟ್ ನೋಡಿ ನಂತರದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಬಿಡುಗಡೆ ಮಾಡುತ್ತೇನೆ. ಇನ್ನು ಹಾಸನ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಕುರಿತು ಮಾಜಿ ಸಚಿವ ಹೆಚ್ ಡಿ ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಮತ್ತು ನಾನು ಎಲ್ಲಾರು ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.