ಹಾಸನ: ನ್ಯಾಯಾಲಯದ ಆದೇಶದಂತೆ ಅರಣ್ಯ ಪ್ರೇರಕರ ಕೆಲಸವನ್ನು ಕಾಯಂಗೊಳಿಸುವಂತೆ ಅರಣ್ಯ ಪ್ರೇರಕ ಡಿ. ಶಿವಪ್ಪಗೌಡ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಪ್ರೇರಕರ ಕೆಲಸವನ್ನು ಕಾಯಂ ಮಾಡಲು ನ್ಯಾಯಾಲಯದಲ್ಲಿ ಅದೇಶ ಕೊಟ್ಟರು ಅಧಿಕಾರಿಗಳು ಕಾಯಂ ಮಾಡಿಲ್ಲ. 1986-1987ರಲ್ಲಿ ಅರಣ್ಯ ಪ್ರೇರಕರನ್ನು ನೇಮಕಾತಿ ಮಾಡಿಕೊಂಡಿದ್ದು, ಡಿ.ಸಿ.ಎಫ್.ಓ ಅಧಿಕಾರಿಗಳಿಂದ ಅರಣ್ಯ ಪ್ರೇರಕರನ್ನು ಕಾಯಂ ಮಾಡಲು ಪ್ರಸ್ತಾವನೆ ಹಾಗೂ ಆರ್.ಎಫ್.ಓ ಮೇಲಾಧಿಕಾರಿಗಳಿಗೆ ಕಾಯಂಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.
ಕಾಯಂ ಮಾಡಲು ಸಂಬಂಧಪಟ್ಟ ಅಧಿಕಾರಿಗಳು 1994 ಡಿಸೆಂಬರ್‌ನಲ್ಲಿ ಅರಣ್ಯ ಮತ್ತು ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಕೊಠಡಿಯಲ್ಲಿ ಖಾಯಂ ಮಾಡಲು ಎಲ್ಲಾ ಅಧಿಕಾರಿಗಳು ಸೇರಿ ಪೂರ್ಣಕಾಲಿಕ ನೌಕರರೆಂದು ಪರಿಗಣಿಸಿ ರೂ 780 ಗೌರವ ಧನವನ್ನು ಕೊಡಲು ತೀರ್ಮಾನಿಸಿದರು.
ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳು ಪೂರ್ಣಕಾಲಿಕ ನೌಕರರೆಂದು ಅದೇಶ ಕೊಟ್ಟಿರುವುದು. 5 ಜನ ಅರಣ್ಯ ಪ್ರೇರಕರನ್ನು 1987ರಲ್ಲಿ ದಿನಗೂಲಿಯಾಗಿ ಖಾಯಂ ಅದೇಶ ಕೊಟ್ಟಿರುವುದು ಅರಣ್ಯ ಪ್ರೇರಕರೆಂದು ಹೆಚ್ಚಿನ ಪಂಚಾಯ್ತಿಯಲ್ಲಿ ಇಲಾಖೆ ಕೆಲಸ ಮುಂತಾದವುಗಳನ್ನು ಮಾಡಿಸಿಕೊಂಡಿರುವುದಾಗಿ ದೂರಿದರು.
ಕೃಷಿ ಅರಣ್ಯ ರೈತರಿಗೆ ಗಿಡಗಳನ್ನು ಕೊಟ್ಟು ಬದುಕಿರುವ ಗಿಡಗಳನ್ನು ಪರಿಶೀಲಿಸಿ ಅವರಿಗೆ 3 ವರ್ಷ ಪ್ರೋತ್ಸಾಹ ಧನ ಕೊಡುತ್ತೇವೆ. ಈ ಕೆಲಸ ಮಾಡಿದ ನಮಗೆ ಅಸೆಗಳನ್ನು ತೋರಿಸಿ ಮೋಸ ಮಾಡಿದ್ದಾರೆ. ಕರ್ನಾಟಕದಲ್ಲಿ ಜೀತ ಪದ್ಧತಿಗಿಂತ ಕಡೆಯದಾಗಿ ನೋಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅರಣ್ಯ ಪ್ರೇರಕರಿದ್ದಾರೆ. ಇದನ್ನೆಲ್ಲ ಗಮನಿಸಿ ನ್ಯಾಯಾಲಯದ ಮೊರೆ ಹೊಗಿದ್ದು, ಆಗ ಅಧಿಕಾರಿಗಳಿಂದ ವ್ಯಾಜ್ಯ ನಿರ್ವಾಣಾಧಿಕಾರಿಗಳನ್ನು ನೇಮಕ ಮಾಡಿದ್ದರು ಎಂದರು.
ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಅರಣ್ಯ ಪ್ರೇರಕರು ಖಾಯಂ ನೌಕರರು ಇವರಿಗೆ ಡಿ ನೌಕರಿಯನ್ನು ಕೊಡಬಹುದೆಂದು ನ್ಯಾಯಾಲಯಕ್ಕೆ ಪಟ್ಟಿಯನ್ನು ಕೊಟ್ಟ ನಂತರ ನ್ಯಾಯಾಲಯದಲ್ಲಿ ಡಿ ನೌಕರಿ ಕೊಡಲು ಅದೇಶಿಸಿತ್ತು. ಈಗ ನ್ಯಾಯಾಲಯಕ್ಕೆ ಬೆಲೆ ಕೊಡಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಕೆಲಸ ಮಾಡಿದವರಿಗೆ 1985 ರಿಂದ ಪೂರ್ಣಕಾಲಿಕ ಸಂಬಳ ಕೂಡಬೇಕು ಮತ್ತು ಇರತಕ್ಕೆ ಅಧಿಕಾರಿಗಳ ಮೇಲೆ 20 ದಿನದ ಒಳಗೆ ಕಾನೂನು ಕ್ರಮ ಕೈಗೊಳ್ಳಬೇಕು. ಆದರೇ ನಮಗೆ ಒಂದು ಸಂಬಳ ಬಿಟ್ಟರೆ ಕೃಷಿ ಅರಣ್ಯದ ಪ್ರೋತ್ಸಾಹ ಧನ ಬಂದಿರುವುದಿಲ್ಲ. ಹಿರಿಯ ಅಧಿಕಾರಿಗಳು ಮತ್ತು ಸಂಘಗಳ ಜೊತೆ ಸೇರಿ ಹಣ ಹಂಚಿಕೊಂಡಿರುವುದಾಗಿ ಆರೋಪಿಸಿದರು.
ಕೆಲಸ ಮಾಡಿದವರು ನಾವು ಹಣ ಪಡೆದವರು ಯಾರೋ? ನಮಗೆ ಸೇರಬೇಕಾದ ಹಣ 20 ದಿನದಲ್ಲಿ ನಮಗೆ ಸಿಗಬೇಕು. ಈ ಪತ್ರವನ್ನು ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಅರಣ್ಯ ಖಾತೆ ಸಚಿವರಿಗೆ ಮತ್ತು ಹಿಂಬರಹ ಕೊಟ್ಟ ಅಧಿಕಾರಿಗಳಿಗೆ ಮತ್ತು ರಾಜ್ಯಪಾಲರಿಗೆ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಸನ ಮತ್ತು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಗಳಿಗೂ ಕಳುಹಿಸಿ ನಮಗೆ ನ್ಯಾಯ ಕೊಡಲೆಬೇಕೆಂದು ವಿನಂತಿಸಿಕೊಂಡರು.