ETV Bharat / state

ಸಕಲೇಶಪುರದಲ್ಲಿ ಕಾಡಾನೆ ದಾಳಿ... ಜೀವದ ಹಂಗು ತೊರೆದು ಬೆಳೆ ರಕ್ಷಣೆಗೆ ನಿಂತ ರೈತರು! - sakleshapura hassan latest news

ಸಕಲೇಶಪುರ ತಾಲೂಕಿನ ಜಾನೆಕೆರೆ, ಕೊಣ್ಣೂರು, ಇಬ್ಬಡಿ, ಸತ್ತಿಗಾಲ್, ಕುದುರಂಗಿ, ಸುಳ್ಳಕ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು, ರೈತರು ಪ್ರಾಣದ ಹಂಗು ತೊರೆದು ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ.

Forest Elephants attack on Paddy crops in Sakleshpur
ಸಕಲೇಶಪುರದಲ್ಲಿ ಕಾಡಾನೆ ದಾಳಿ... ಪ್ರಾಣದ ಹಂಗು ತೊರೆದು ಬೆಳೆ ರಕ್ಷಣೆಗೆ ಮುಂದಾದ ರೈತರು!
author img

By

Published : Jan 8, 2020, 10:17 AM IST

ಹಾಸನ: ಸಕಲೇಶಪುರ ತಾಲೂಕಿನಲ್ಲಿ ಭತ್ತದ ಬೆಳೆ ಕಟಾವು ನಡೆಯುತ್ತಿರುವ ಸ್ಥಳಕ್ಕೆ ಕಾಡಾನೆಗಳು ದಾಂಗುಡಿ ಇಟ್ಟಿದ್ದು, ರೈತರು ಪ್ರಾಣದ ಹಂಗು ತೊರೆದು ಬೆಳೆ ರಕ್ಷಣೆಗೆ ನಿಂತಿದ್ದಾರೆ.

ಸಕಲೇಶಪುರದಲ್ಲಿ ಕಾಡಾನೆ ದಾಳಿ... ಪ್ರಾಣದ ಹಂಗು ತೊರೆದು ಬೆಳೆ ರಕ್ಷಣೆಗೆ ಮುಂದಾದ ರೈತರು!

ಸಕಲೇಶಪುರ ತಾಲೂಕಿನ ಜಾನೆಕೆರೆ, ಕೊಣ್ಣೂರು, ಇಬ್ಬಡಿ, ಸತ್ತಿಗಾಲ್, ಕುದುರಂಗಿ, ಸುಳ್ಳಕ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ರಾತ್ರಿ ವೇಳೆಯಲ್ಲಿ ತೋಟದಲ್ಲಿ ನಿಲ್ಲುವ ಕಾಡಾನೆಗಳು ಕತ್ತಲಾಗುತ್ತಿದ್ದಂತೆ ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು, ಕಟಾವು ಹಂತಕ್ಕೆ ಬಂದಿರುವ ಬೆಳೆಗಳನ್ನು ನಾಶ ಮಾಡುತ್ತಿವೆ.

ಕಾಡಾನೆಗಳ ಹಿಂಡಿನಲ್ಲಿ ನಾಲ್ಕೈದು ಮರಿಗಳಿದ್ದು, ಗದ್ದೆಗಳಲ್ಲಿ ತುಂಟಾಟವಾಡುತ್ತಿವೆ. ಕಾಡಾನೆಗಳಿಂದ ಬೆಳೆ ರಕ್ಷಣೆ ಮಾಡಲು ಐದಾರು ರೈತರು ಒಟ್ಟುಗೂಡಿ ಆನೆಗಳು ತಮ್ಮ ಗದ್ದೆಗಳಿಗೆ ಬಂದು ಬೆಳೆ ಹಾನಿ ಮಾಡದಂತೆ ರಾತ್ರಿ ಕಾವಲು ಕಾಯುತ್ತಿದ್ದಾರೆ. ದೊಡ್ಡದಾಗಿ ಬೆಂಕಿ ಹೊತ್ತಿಸಿ, ಜೋರಾಗಿ ಕೂಗುತ್ತ, ಡೋಲು, ಟಿನ್ನು ಇತ್ಯಾದಿಗಳಿಂದ ಸದ್ದು ಮಾಡುತ್ತ ಬೆಳೆ ಕಾಯುವಂತಾಗಿದೆ. ಕಾಡಾನೆಗಳ ಹಾವಳಿಯಿಂದ ರೈತರು ಹೈರಾಣಾಗಿದ್ದು, ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

Intro:ಹಾಸನ : ಸಕಲೇಶಪುರ ತಾಲ್ಲೂಕಿನಲ್ಲಿ ಭತ್ತದ ಬೆಳೆ ಕಟಾವು ನಡೆಯುತ್ತಿದ್ದು, ರೈತರು ಪ್ರಾಣದ ಹಂಗು ತೊರೆದು ಬೆಳೆ ರಕ್ಷಣೆಗೆ ನಿಂತಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಜಾನೆಕೆರೆ, ಕೊಣ್ಣೂರು, ಇಬ್ಬಡಿ, ಸತ್ತಿಗಾಲ್, ಕುದುರಂಗಿ, ಸುಳ್ಳಕ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳು ಬಿಡು ಬಿಟ್ಟಿವೆ. ರಾತ್ರಿ ವೇಳೆಯಲ್ಲಿ ತೋಟದಲ್ಲಿ ನಿಲ್ಲುವ ಕಾಡಾನೆಗಳು ಕತ್ತಲಾಗುತ್ತಿದ್ದಂತೆ ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು, ಕಟಾವು ಹಂತಕ್ಕೆ ಬಂದಿದ್ದ ಬೆಳೆ ನಾಶ ಮಾಡುತ್ತಿವೆ.
ಕಾಡಾನೆಗಳ ಹಿಂಡಿನಲ್ಲಿ ನಾಲ್ಕೈದು ಮರಿಗಳಿದ್ದು, ಗದ್ದೆಗಳಲ್ಲಿ ತುಂಟಾಟ ಮಾಡುತ್ತಿವೆ. ಕಾಡಾನೆಗಳಿಂದ ಬೆಳೆ ರಕ್ಷಣೆ ಮಾಡಲು ಐದಾರು ರೈತರು ಒಟ್ಟುಗೂಡಿ ಆನೆಗಳು ತಮ್ಮ ಗದ್ದೆಗಳಿಗೆ ಬಂದು ಬೆಳೆ ಹಾನಿ ಮಾಡದಂತೆ ರಾತ್ರಿ ಕಾವಲು ಕಾಯುತ್ತಿದ್ದಾರೆ. ದೊಡ್ಡದಾಗಿ ಬೆಂಕಿ ಹೊತ್ತಿಸಿ, ಜೋರಾಗಿ ಕೂಗುತ್ತ, ಡೋಲು, ಟಿಣ್ಣು ಇತ್ಯಾದಿಗಳಿಂದ ಸದ್ದು ಮಾಡುತ್ತ ಬೆಳೆ ಕಾಯುವಂತಾಗಿದೆ.
ಕಾಡಾನೆಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದು, ಈ ಸಮಸ್ಯೆಯಿಂದ ರೈತರು ಹೈರಾಣಾಗಿದ್ದಾರೆ.
ಕಾಡಾನೆ ಸಮಸ್ಯೆಗೆ ಶಾಸ್ವತ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದು, ಈ ಭಾಗದ ಜನರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Body:೦Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.