ETV Bharat / state

ಹಳೆಯ ದ್ವೇಷಕ್ಕೆ ಬಣವೆಗೆ ಬೆಂಕಿ... ಸುಟ್ಟು ಕರಕಲಾದ 2.5 ಲಕ್ಷ ರೂ. ಮೌಲ್ಯದ ಹುಲ್ಲು! - ಹಾಸನದಲ್ಲಿ ಬಣವೆಗೆ ಬೆಂಕಿ

ಹಳೆ ವೈಷಮ್ಯಕ್ಕೆ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿರುವ ಘಟನೆ ಹಾಸನದಲ್ಲಿ ನಡೆದಿದ್ದು, ಸುಮಾರು 2.5 ಲಕ್ಷ ರೂ. ಮೌಲ್ಯದ ಹುಲ್ಲು ಸುಟ್ಟು ಹೋಗಿದೆ.

Fire for fodder in Hassan
Fire for fodder in Hassan
author img

By

Published : Mar 27, 2021, 1:41 AM IST

ಹಾಸನ: ದುಷ್ಕರ್ಮಿಗಳು ಹುಲ್ಲಿನ ಬಣವೆಗೆ ಬೆಂಕಿ ಹಾಕಿದ ಪರಿಣಾಮ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಪಡುವನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು ಇಪ್ಪತ್ತು ಲಾರಿಯಷ್ಟಿದ್ದ ಹುಲ್ಲಿನ ಬಣವೆಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದರಿಂದ ಸಂಪೂರ್ಣವಾಗಿ ಸುಟ್ಟುಹೋಗಿದೆ.

ಹಳೆಯ ದ್ವೇಷಕ್ಕೆ ಬಣವೆಗೆ ಬೆಂಕಿ

ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದರು. ಆದರೆ ಆಗಲೇ ಬೆಂಕಿಯ ಕೆನ್ನಾಲಿಯಿಂದಾಗಿ ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದರಿಂದ ಸುಮಾರು 2.5 ಲಕ್ಷ ಮೌಲ್ಯದ ಹುಲ್ಲಿನ ಬಣವೆ, 15ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗಾಹುತಿಯಾಗಿವೆ.

ದುಷ್ಕೃತ್ಯಕ್ಕೆ ನಮ್ಮ ಗ್ರಾಮದವರೆ ಕಾರಣ ಎಂದು ಹೇಳಲಾಗಿದ್ದು, ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲವರು ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದರು. ಹೀಗಾಗಿ ಹುಲ್ಲಿನ ಬಣವೆಗೆ ಬೆಂಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೃತ್ಯ, ಇದಕ್ಕಾಗಿ ಪೊಲೀಸರು ತಂಡ ರಚನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.