ETV Bharat / state

ಹಾಸನ: ಕೊರೊನಾ ವಾರಿಯರ್​ಗಳಿಗೆ ಸನ್ಮಾನ ಸಮಾರಂಭ - ಕೊರೊನಾ ವಾರಿಯರ್ಸ್

ಮದ್ದಿಲ್ಲದ ಕರೊನಾ ಕಾಯಿಲೆಗೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಪರಸ್ಪರ ಅಂತರ ಕಾಪಾಡಿಕೊಂಡು ಪರಿಹಾರ ಮಾರ್ಗಗಳನ್ನು ಪಾಲಿಸಬೇಕು ಎಂದು ವಿನಂತಿಸಿದರು.

felicitation
felicitation
author img

By

Published : Jun 30, 2020, 4:54 PM IST

ಅರಕಲಗೂಡು (ಹಾಸನ): ಶರವೇಗದಲ್ಲಿ ಹಬ್ಬುತ್ತಿರುವ ಮಹಾಮಾರಿ ಕರೊನಾ ಸೋಂಕು ತಡೆಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು, ಮುಖ್ಯವಾಗಿ ಕರೊನಾ ವಾರಿಯರ್​ಗಳು ಮತ್ತಷ್ಟು ಜಾಗೃತರಾಗಬೇಕು ಎಂದು ಮಾಜಿ ಸಚಿವ ಎ. ಮಂಜು ಮನವಿ ಮಾಡಿದರು.

ಸನ್ಮಾನ ಸಮಾರಂಭ

ತಾಲೂಕಿನ ಬರಗೂರಿನಲ್ಲಿ ಎ. ಮಂಜು ಅಭಿಮಾನಿ ಬಳಗದ ವತಿಯಿಂದ ದೊಡ್ಡಮಗ್ಗೆ ಹೋಬಳಿ ಕರೊನಾ ವಾರಿಯರ್​ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಮಹಾಮಾರಿ ಕರೊನಾ ಸೋಂಕು ಇದೀಗ ಅಮಾಯಕರ ಬದುಕನ್ನು ಕತ್ತಲೆಯ ಕೂಪಕ್ಕೆ ದೂಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಾಗಾಗಿ ಕರೊನಾ ವಾರಿಯರ್​ಗಳು ಹೆಚ್ಚು ಜಾಗೃತರಾಗಿ ಸಮುದಾಯಕ್ಕೆ ಸೋಂಕು ತಗುಲದಂತೆ ನಿಗಾ ವಹಿಸಿ ಕರ್ತವ್ಯ ನಿರ್ವಹಿಸುವುದು ಅತ್ಯವಶ್ಯಕ ಎಂದರು.

felicitation
ಸನ್ಮಾನ ಸಮಾರಂಭ

ಎಲ್ಲಕ್ಕಿಂತ ಮುಖ್ಯವಾಗಿ ಮದ್ದಿಲ್ಲದ ಕರೊನಾ ಕಾಯಿಲೆಗೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಪರಸ್ಪರ ಅಂತರ ಕಾಪಾಡಿಕೊಂಡು ಪರಿಹಾರ ಮಾರ್ಗಗಳನ್ನು ಪಾಲಿಸಬೇಕು ಎಂದು ವಿನಂತಿಸಿದರು.

ಕೋವಿಡ್ - 19 ಯೋಧರಾಗಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಕರೊನಾ ಸೇನಾನಿಗಳು ಹೊರಗಿನಿಂದ ಬರುವವರ ಬಗ್ಗೆಯೂ ಸದಾ ನಿಗಾ ಇಡಬೇಕು. ಸಾರ್ವಜನಿಕರೂ ಹೆಚ್ಚು ಸಹಕಾರ ನೀಡಬೇಕು. ಇದರಿಂದ ಸೋಂಕು ತಕ್ಕಮಟ್ಟಿಗೆ ಹಳ್ಳಿಗಳಿಗೆ ವ್ಯಾಪಿಸುವುದನ್ನು ತಡೆಯಲು ನೆರವಾಗಲಿದೆ. ಕುಟುಂಬದವರ ರಕ್ಷಣೆಯನ್ನು ಲೆಕ್ಕಿಸದೆ ಕರೊನಾ ವಿರುದ್ದ ಹೋರಾಡುತ್ತಿರುವ ವಾರಿಯರ್​ಗಳನ್ನು ಸನ್ಮಾನಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದರು.

felicitation
ಸನ್ಮಾನ ಸಮಾರಂಭ

ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಹಲವಾರು ಕರೊನಾ ಸೇನಾನಿಗಳಿಗೆ ಹೂಮಳೆಗರೆದು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮಂಜುನಾಥ್, ದೊಡ್ಡಮಗ್ಗೆ ಕ್ಷೇತ್ರದ ಜಿಪಂ ಸದಸ್ಯ ರವಿ, ತಾಪಂ ಸದಸ್ಯ ಪುಟ್ಟರಾಜು, ಮುಖಂಡರಾದ ಎ.ಎಂ. ರಘು, ನಾಗರಾಜು, ರಂಗನಾಥ್,‌ಅಶೋಕ್, ಮುತ್ತಿಗೆ ರಮೇಶ್, ಈಶ್ವರ್, ಉದೇಶ್, ಕೆ.ಆರ್. ಹೊಯ್ಸಳ ಮುಂತಾದವರು ಹಾಜರಿದ್ದು ಸಹಕರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.