ಹಾಸನ: 1980ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ಉಳುವವನೇ ಭೂಮಿಯ ಒಡೆಯ ಕಾಯ್ದೆಯಡಿ ಜಿಲ್ಲೆಯ ಬಾಗೂರು ಹೋಬಳಿಯ ಬಿ. ಹೊನ್ನೇನಹಳ್ಳಿ ಗ್ರಾಮದ ರೈತ ಬೋರೇಗೌಡರಿಗೆ ಜಮೀನು ಬಂದಿದ್ದು, ಇದನ್ನು ಜಿಲ್ಲಾಧಿಕಾರಿಗಳು ಅವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಸಾರ್ವಜನಿಕ ಉಪಯೋಗಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ಬೋರೇಗೌಡರ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿ ಎಂದು ಜಿಲ್ಲಾಧಿಕಾರಿ ಗಿರೀಶ್ಗೆ ಒತ್ತಾಯ ಮಾಡಿದ್ದಾರೆ.
ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿಯ ಬಿ. ಹೊನ್ನೇನಹಳ್ಳಿ ಗ್ರಾಮದ ಬಡ ರೈತ ಬೋರೇಗೌಡನ ಕುಟುಂಬವನ್ನು ಒಕ್ಕಲೆಬ್ಬಿಸುವ ಕುತಂತ್ರದ ವಿರುದ್ಧ ಹಾಗೂ ಆಸ್ತಿ ಮತ್ತು ಅಸ್ತಿತ್ವದ ಉಳಿವಿಗಾಗಿ ರೈತ ಸಂಘ ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಉಳುವ ರೈತನನ್ನು ಜಮೀನಿಗೆ ಪ್ರವೇಶ ಮಾಡಬಾರದೆಂದು ಹೇಳಿದರೆ ಜೀವನ ಹೇಗೆ ನಡೆಸಲು ಸಾಧ್ಯ. ಇಂತಹ ಅವೈಜ್ಞಾನಿಕ ಆದೇಶ ರದ್ದು ಮಾಡುವಂತೆ ರೈತರು ತಮ್ಮ ಅಳಲು ತೋಡಿಕೊಂಡರು. ಕೂಡಲೇ ಸ್ಥಳ ಪರಿಶೀಲಿಸಿ ಪುನರ್ ಆದೇಶ ನೀಡಬೇಕೆಂದು ಮನವಿ ಮಾಡಿದರು.
.