ETV Bharat / state

ಕಾಡಾನೆ ದಾಳಿ.. ಕೂದಲೆಳೆ ಅಂತರದಲ್ಲಿ ಪಾರಾದ ರೈತ.. - ಅರಣ್ಯ ಇಲಾಖೆ

ಕಾಫಿ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಡಾನೆಗಳು ಏಕಾಏಕಿ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರಾಗಿದ್ದಾರೆ.

ಕಾಡಾನೆ
author img

By

Published : Sep 1, 2019, 7:28 PM IST

ಹಾಸನ: ಕಾಫಿ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಡಾನೆಗಳು ಏಕಾಏಕಿ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರಾಗಿದ್ದಾರೆ.

ಕಾಡಾನೆ ದಾಳಿ..

ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮದ ಸುಬ್ರಮಣ್ಯ (50) ಕಾಡಾನೆಯಿಂದ ಪಾರಾದ ರೈತ. ಪ್ರತಿನಿತ್ಯದಂತೆ ಇಂದು ಕೂಡಾ ಕಾಫಿತೋಟಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ, 3 ಕಾಡಾನೆಗಳು ಸುಬ್ರಹ್ಮಣ್ಯರವರ ಮೇಲೆ ದಾಳಿ ಮಾಡಲು ಮುಂದಾಗಿವೆ. ಈ ವೇಳೆ ಸುಬ್ರಮಣ್ಯ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದು, ಕಾಡಾನೆಯನ್ನ ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Intro:ಕಾಡಾನೆ ದಾಳಿ ಕೂದಲೆಳೆಯಲ್ಲಿ ಪಾರಾದ ರೈತ.

ಹಾಸನ: ಕಾಫಿ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ್ದು, ಕೂದಲೆಳೆಯಲ್ಲಿ ಪಾರಾಗಿರೋ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಳ್ಳಿ ಗ್ರಾಮದ ಸುಬ್ರಮಣ್ಯ (50) ಕಾಡಾನೆ ದಾಳಿಯಿಂದ ಕೂದಲೆಳೆಯಲ್ಲಿ ಪಾರಾದ ರೈತ. ಪ್ರತಿನಿತ್ಯದಂತೆ ಇಂದು ಕೂಡಾ ಕಾಫಿತೋಟಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ, ಮೂರು ಕಾಡಾನೆಗಳಿದ್ದ ಹಿಂಡು ಸುಬ್ರಹ್ಮಣ್ಯರವರ ಮೇಲೆ ದಾಳಿ ಮಾಡಲು ಮುಂದಾದ ವೇಳೆ ಅದನ್ನ ಕಂಡು ಓಡಲು ಪ್ರಾರಂಭಿಸಿದಾಗ ಆಯಾತಪ್ಪಿ ಬಿದ್ದ ಪರಿಣಾಮ ಕೈ ಮತ್ತು ಕಾಲುಗಳಿಗೆ ಗಾಯವಾಗಿವೆ.

ಇನ್ನು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕಾಡಾನೆಯನ್ನ ಓಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಕಳೆದ ತಿಂಗಳು ಸುರಿದ ಭಾರಿ ಮತ್ತು ಪ್ರವಾಹದ ಹಿನ್ನಲೆಯಲ್ಲಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದ ಕಾರಣ ಕಾಡಿನಿಂದ ನಾಡಿನ ಕಡೆಗೆ ಬರಲು ಆನೆಗಳಿಗೆ ಸಾಧ್ಯವಾಗಿರಲಿಲ್ಲ. ಆದ್ರ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಮತ್ತೆ ಕಾಡಿನಿಂದ ನದಿಯನ್ನ ದಾಟಿ ನಾಡಿನ ಕಡೆಗೆ ಬರುತ್ತಿವೆ.

ದಿನದಿಂದ ದಿನಕ್ಕೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಬೆಳೆ ಹಾನಿ ಜೊತೆಗೆ ಪ್ರಾಣ ಹಾನಿಯಾಗುತ್ತಿರುವುದು ಕಾಣುತ್ತಿದೆ. ಸಾಕಷ್ಟು ಬಾರಿ ರೈತರು, ಸಂಘ ಸಂಸ್ಥೆಯವರು ಪ್ರತಿಭಟನೆ ನೆಡೆಸಿದರು ಪ್ರಯೋಜನವಾಗಿಲ್ಲ. ಕೂಡಲೇ ಪುಂಡಾನೆಗಳು ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಈ ಭಾಗದ ಜನ್ರ ಆಗ್ರಹ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.