ETV Bharat / state

ಮತಾಂತರ ಮತ್ತು ಗೋ ಹತ್ಯೆ ಕಾನೂನು ಇನ್ನಷ್ಟು ಕಠಿಣ ಆಗಬೇಕಿದೆ: ಪೇಜಾವರ ಶ್ರೀ - ETV Bharath Kannada news

ಮತಾಂತರ ಮತ್ತು ಗೋಹತ್ಯೆ ನಿಷೇಧ ಕಾನೂನು ಜಾರಿ ಆದರೂ ಪ್ರಕರಣಗಳು ನಡೆಯುತ್ತಿವೆ- ಕಠಿಣ ಕಾನೂನಿಗೆ ಪೇಝಾವರ ರ್ಶರೀಗಳ ಒತ್ತಾಯ- ಸಿದ್ದೇಶ್ವರ ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ

Enforce strict laws on conversion and cow slaughter said pejawar sri
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ
author img

By

Published : Jan 2, 2023, 10:07 PM IST

ಮತಾಂತರ ಮತ್ತು ಗೋ ಹತ್ಯೆ ಕಾನೂನು ಇನ್ನೂ ಕಠಿಣ ಆಗಬೇಕಿದೆ

ಹಾಸನ: ಜನರ ಬೇಡಿಕೆಯಂತೆ ಸರ್ಕಾರವು ಮತಾಂತರ ಮತ್ತು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದ್ದರೂ ಮತ್ತೆ ಮರುಕಳಿಸುತ್ತಿವೆ. ಜಾರಿಗೆ ತರಲಾಗಿರುವ ಕಾನೂನುಗಳನ್ನು ಸರ್ಕಾರವು ವಿಶೇಷ ಗಮನಹರಿಸಿ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಒತ್ತಾಯಿಸಿದರು.

​ನಗರದದಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರಗಳು ಕಾಲಕಾಲಕ್ಕೆ ಜನರ ಬೇಡಿಕೆಗಳಿಗೆ ಅನುಗುಣವಾಗಿ ಸಮಾಜದ ಸ್ಥಿತಿಗತಿಗಳ ಪೂರಕವಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿವೆ. ಆದರೆ ಕೊನೆಗೆ ಕಣ್ಣೊರೆಸುವ ತಂತ್ರ ಆಗುತ್ತಿದೆ. ಕಾನೂನನ್ನು ಯಥಾವತ್ತಾಗಿ ಪರಿಪೂರ್ಣವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದಿದ್ದಾರೆ.

ಕಾನೂನು ಇನ್ನಷ್ಟೂ ಕಠಿಣ ಆಗಬೇಕು: ಪ್ರಸ್ತುತದಲ್ಲಿ ಮತಾಂತರದ ವಿರುದ್ಧ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಅಲ್ಲಲ್ಲಿ ಇನ್ನೂ ಕೂಡ ಮತಾಂತರ ಪ್ರಕರಣಗಳು ನಡೆಯುವುದನ್ನು ಕಾಣುತ್ತಿದ್ದೇವೆ. ಇದರಿಂದ ಕುಟುಂಬಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದ್ದು, ವೈಮನಸ್ಸು ಮತ್ತು ಪ್ರಾಣ ಹಾನಿಯಾಗುತ್ತಿದೆ. ಹಾಗಾಗಿ ಜಾರಿಗೆ ತರಲಾಗಿರುವ ಕಾನೂನನ್ನು ಇನ್ನಷ್ಟು ಗಟ್ಟಿಗೊಳಿಸುವತ್ತ, ವಿಶೇಷವಾದ ಪ್ರಯತ್ನ ಮಾಡಬೇಕೆಂದು ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಗೋಹತ್ಯೆ ನಿಷೇಧ ಜಾರಿಗೆ ತಂದರೂ ಅದು ಎಗ್ಗಿಲ್ಲದೇ ನಡೆಯುತ್ತಿದೆ. ಗೋವುಗಳನ್ನೇ ನಂಬಿಕೊಂಡು, ಅದರಿಂದ ಸಿಗುವ ಹಾಲನ್ನು ಮಾರಾಟ ಮಾಡಿ ಅದೆಷ್ಟೋ ಬಡ ಜನರು ಬದುಕನ್ನು ಸಾಗಿಸುತ್ತಿದ್ದಾರೆ. ಆದರೇ ಬದುಕಿಗೆ ಆಧಾರವಾಗಿರುವ ಗೋವುಗಳನ್ನೇ ಹತ್ಯೆ ಮಾಡುತ್ತಿದ್ದಾರೆ ಎಂದರೇ ನಿಜಕ್ಕೂ ಅದು ನೋವಿನ ಸಂಗತಿ. ಸರ್ಕಾರ ವಿಶೇಷ ಗಮನ ಕೊಡಬೇಕು. ಪೊಲೀಸ್ ಇಲಾಖೆ ಕೂಡ ಸೂಕ್ತ ಕ್ರಮ ಜರುಗಿಸಿದಾಗ ಮಾತ್ರ ಈ ಮತಾಂತರ ಹಾವಳಿ ಹಾಗೂ ಗೋಹತ್ಯೆ ಹಾವಳಿಯನ್ನು ತಡೆಯಲು ಸಾಧ್ಯ. ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸುವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿದ್ದೇಶ್ವರ ಶ್ರೀಗಳು ಶೀಘ್ರ ಚೇತರಿಸಿಕೊಳ್ಳಲಿ: ​ವಿಜಯಪುರದ ಸಿದ್ದೇಶ್ವರ ಶ್ರೀಗಳು ತೀವ್ರವಾದ ಅನಾರೋಗ್ಯದಲ್ಲಿ ಇದ್ದಾರೆ ಎಂಬ ಬಗ್ಗೆ ತಿಳಿದು ಬಂದಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ. ಅವರಿಂದ ಪ್ರೇರಿತರಾಗಿರುವ ಸಮಾಜದವರು ಸರಿದಾರಿಯಲ್ಲಿ ಸಾಗುತ್ತಿದ್ದಾರೆ. ಅವರಿಗೆ ಇನ್ನಷ್ಟು ಮಾರ್ಗದರ್ಶನ ಮಾಡುವ ಶಕ್ತಿ ಸಾಮರ್ಥ್ಯವನ್ನು ದೇವರು ನೀಡಲೆಂದು ಪ್ರಾರ್ಥನೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದು ಉತ್ತಮ: ಪೇಜಾವರ ಶ್ರೀ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.