ಸಕಲೇಶಪುರ: ಕಾಫಿ ತೋಟಕ್ಕೆ ಬಂದಿದ್ದ ಆನೆಯೊಂದು ಸೋಲಾರ್ ವಿದ್ಯುತ್ ತಂತಿಯಿಂದ ರಕ್ಷಿಸಿಕೊಳ್ಳಲು ಪಕ್ಕದಲ್ಲಿದ್ದ ಮರವೊಂದನ್ನ ಸೋಲಾರ್ ತಂತಿಯ ಮೇಲೆ ಹಾಕಿ, ಅದರ ಮೇಲಿಂದ ಹತ್ತಿ ಹೊರಗೆ ಹೋಗಲು ಪ್ರಯತ್ನ ಪಟ್ಟಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಗರವಳ್ಳಿ ಗ್ರಾಮದ ಕಾಫಿತೋಟದಲ್ಲಿ ಕಂಡುಬಂದಿದೆ.
ಬುದ್ದಿವಂತ ಪ್ರಾಣಿಗಳಲ್ಲಿ ಆನೆಯೂ ಕೂಡ ಒಂದು. ತನ್ನ ಸಂಚಾರಕ್ಕೆ ಅಡ್ಡಿಯಾಗಿದ್ದ ಸೋಲಾರ್ ವಿದ್ಯುತ್ ಬೇಲಿಯನ್ನು ದಾಟಲು ಮರವನ್ನು ಉರುಳಿ, ವಿಫಲ ಯತ್ನ ನಡೆಸಿದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಗ್ರಾಮದ ಸಂತೋಷ್ ಎಂಬುವರ ಕಾಫಿ ತೋಟಕ್ಕೆ ನುಗ್ಗಿದ ಆನೆ, ಅಲ್ಲಿಂದ ಮುಂದೆ ಹೊರಟಿದೆ. ಆದರೆ ತೋಟದಿಂದ ಹೊರ ಬರಲು ಸೋಲಾರ್ ವಿದ್ಯುತ್ ಬೇಲಿ ಅಡ್ಡಿಯಾಗಿತ್ತು. ಕಾಡಾನೆ ಬೇಲಿ ದಾಟಲು, ವಿದ್ಯುತ್ ಬೇಲಿಯ ಸಮೀಪವೇ ಇದ್ದ ಮರವನ್ನು ಉರುಳಿಸಲು ಪ್ರಯತ್ನಿಸಿದೆ. ಈ ಮರಕ್ಕೆ ವಿದ್ಯುತ್ ಪ್ರವಹಿಸಿದ್ದರಿಂದ ಮರ ಬೀಳಿಸುವ ವಿಫಲ ಪ್ರಯತ್ನ ಬಿಟ್ಟು, ತೋಟದ ಮತ್ತೊಂದೆಡೆ ಇದ್ದ ಗೇಟನ್ನು ದ್ವಂಸಗೊಳಿಸಿ ಹೊರ ಬಂದಿದೆ. ಆನೆ ಮರ ಉರುಳಿಸಲು ಯತ್ನಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.