ಹಾಸನ: ಬಿಸಿಲಿನ ತಾಪ ತಾಳಲಾರದೆ ಆನೆಯೊಂದು ಸಕಲೇಶಪುರ ತಾಲೂಕಿನ ಯಳಸೂರು ಸಮೀಪದ ಹೊಸ್ಕೆರೆ ಗ್ರಾಮದ ಹೇಮಾವತಿ ಹಿನ್ನೀರಿನಲ್ಲಿ ಕೆಲಹೊತ್ತು ಆಟವಾಡಿ ಮೈಮನ ತಂಪು ಮಾಡಿಕೊಂಡಿತು.
ಈ ಭಾಗದಲ್ಲಿ 60ಕ್ಕೂ ಅಧಿಕ ಆನೆಗಳು ಓಡಾಡುತ್ತಿವೆ. ಆನೆಗಳ ಸ್ಥಳಾಂತರಕ್ಕೆ ಆಗ್ರಹಿಸಲಾಗಿದೆ. ಕಳೆದ ಬಾರಿ ಬಜೆಟ್ನಲ್ಲಿ ಹೆಚ್. ಡಿ. ಕುಮಾರಸ್ವಾಮಿ ಅವರು ರೈಲ್ವೆ ಕಂಬಿ ಬೇಲಿ ನಿರ್ಮಾಣಕ್ಕೆ 100 ಕೋಟಿ ರೂ. ಮೀಸಲಿಟ್ಟಿದ್ದರು. ಈ ಬಾರಿಯ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಿದರೇ ವನ್ಯಜೀವಿ ಹಾಗೂ ಮಾನವ ಸಂಘರ್ಷ ಕಡಿಮೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು.