ಚನ್ನರಾಯಪಟ್ಟಣ: ಸುಡಹಳ್ಳಿಯಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಳ್ಳ ಮತದಾನದ ಮೂಲಕ ಜೆಡಿಎಸ್ ಹನ್ನೊಂದು ಸ್ಥಾನಗಳನ್ನು ಗೆದ್ದಿದೆ ಎಂದು ಎಂಎಲ್ಸಿ ಗೋಪಾಲಸ್ವಾಮಿ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ತಿರುವವರ ಹೆಸರಿನಲ್ಲೂ ಸಹ ಮತ ಹಾಕಿಸಿಕೊಂಡಿದ್ದಾರೆ. ಮಟ್ಟನವಿಲೆ ಸಿ.ಇ.ಓ ಇಲ್ಲಿಗೆ ಬಂದು ಐಡಿ ಕಾರ್ಡ್ ವಿತರಿಸಿ ಕಳ್ಳ ಮತಗಳನ್ನು ಹಾಕಿಸುತ್ತಿದ್ದಾನೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ ಎಂದಿದ್ದಾರೆ.