ಹಾಸನ: ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿದ್ದಾರೆ. ಹಾಸನ ಜಿಲ್ಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ನಗರದ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸೋಲಿಗೆ ನಮ್ಮ ಕೆಲವು ನಿರ್ಧಾರಗಳು ಕಾರಣವಾಗಿವೆ. ನನಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಯಡಿಯೂರಪ್ಪ ಬಿಟ್ಟರೆ ಪಕ್ಷದಲ್ಲಿ ನಾನೇ ಗರಿಷ್ಠ ಲಾಭವನ್ನು ಪಡೆದವನು. ನಾನು ಮತ್ತೆ ಅಧ್ಯಕ್ಷನಾಗುವ ಆಸೆಯಿಲ್ಲ. ಈ ಹಿಂದೆ ಸಿಎಂ ಆಗಿದ್ದೆ, ಕೇಂದ್ರ ಸಚಿವನಾಗಿದ್ದೆ, ಪಕ್ಷದ ಅಧ್ಯಕ್ಷ ಆಗಿದ್ದೆ ಇನ್ನೇನು ಬೇಕಿಲ್ಲ ನನಗೆ. ಸ್ವಂತ ಶಕ್ತಿಯಿಂದ ಬಿಜೆಪಿ ಕಟ್ಟುತ್ತೇವೆ. ಯಾರನ್ನೂ ಸೆಳೆಯೋದಿಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕಾರಣದಕಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.
ಬಳಿಕ ರಾಜ್ಯಾಧ್ಯಕ್ಷರ ನೇಮಕ ವಿಳಂಬ ಬಗ್ಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆ ಇರುವುದರಿಂದ ನಾಯಕರು ತುಂಬಾ ಒತ್ತಡದಲ್ಲಿದ್ದಾರೆ. ನಾನೂ ಕೂಡ ಚುನಾವಣಾ ರಾಜಕಾರಣದಿಂದ ದೂರ ಇರಲು ನಿರ್ಧರಿಸಿದ್ದು, ಹೀಗಾಗಿ ಸಮಯದ ಕೊರತೆಯಿಂದ ರಾಜ್ಯಾಧ್ಯಕ್ಷರ ನೇಮಕ ಆಗ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಮಾತನಾಡಿ, ಜೆಡಿಎಸ್ ಎನ್.ಡಿ.ಎ ಜತೆ ಸೇರಿದ್ದಕ್ಕೆ ನಮ್ಮ ವಿರೋಧವಿಲ್ಲ. ಇದು ಇಡೀ ದೇಶದ ದೃಷ್ಟಿಯಿಂದ ತೀರ್ಮಾನ ಆಗಿರುತ್ತೆ. ನಾನು ನಮ್ಮ ನಾಯಕರಿಗೆ ಹೇಳಿದ್ದೆ, ನಾವು ಮೊನ್ನೆ ಮೊನ್ನೆ ಕತ್ತಿ-ಗುರಾಣಿ ಹಿಡಿದು ಅವರ ವಿರುದ್ದ ಹೋರಾಟ ಮಾಡಿ, ಅವರೊಟ್ಡಿಗೆ ಕೆಲಸ ಮಾಡಲು ಈಗ ದಿಡೀರ್ ಎಂದು ಅಪ್ಪಿಕೊಳ್ಳಿ ಎಂದರೆ ಹೇಗೆ? ಎಂದು ನನ್ನ ಅಭಿಪ್ರಾಯವನ್ನು ನೇರವಾಗಿ ಹೇಳಿದ್ದೇನೆ. ಜೊತೆಗೆ ಈ ವಿಚಾರದಲ್ಲಿ ನಮ್ಮ ರಾಷ್ಟ್ರೀಯ ನಾಯಕರನ್ನ ಭೇಟಿಯಾಗಿ ಹೇಳುತ್ತೇನೆ ಎಂದರು.
ಉಳಿದಂತೆ ಬಿಜೆಪಿ ಜೆಡಿಎಸ್ ಮೈತ್ರಿ ಸಕ್ಸಸ್ ಸರಿಯಾಗಿ ಆದರೆ ಖಂಡಿತಾ 28ಕ್ಕೆ 28 ಸ್ಥಾನ ನಾವು ಗೆಲ್ಲುತ್ತೇವೆ. ರಾಷ್ಟ್ರೀಯ ಮಟ್ಟದಲ್ಲಿ I.N.D.I.Aಗೆ ಒಬ್ಬೇ ಒಬ್ಬ ನಾಯಕ ಇಲ್ಲ. ಆದರೆ ನಮಗೆ ಜಗತ್ತೇ ಇಷ್ಟಪಡೋ ನಾಯಕ ಇದ್ದಾರೆ. ನಾವು ಮಾಡಿದ ಅಭಿವೃದ್ಧಿ ಕೆಲಸ ಮುಂದಿಟ್ಡು ಚುನಾವಣೆ ಎದುರಿಸುತ್ತೇವೆ. ಐಎನ್ಡಿಐಎ ನಮ್ಮ ಹತ್ತಿರ ಬರೋಕು ಸಾದ್ಯವಿಲ್ಲ. ಸರಿಯಾದ ಸೂತ್ರ ಮಾಡಿದ್ರೆ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲೋದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಹಣಕ್ಕಾಗಿ ಪ್ರಶ್ನೆ ಕೇಸ್: ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ್ ಆದೇಶಿಸಿದೆ.. ಬಿಜೆಪಿ