ಹಾಸನ: ರೋಗಿಗಳ ಜೀವವನ್ನು ಉಳಿಸುವ ರಕ್ತದಾನಕ್ಕಿಂತ ಶ್ರೇಷ್ಠ ಕಾರ್ಯ ಮತ್ತೊಂದಿಲ್ಲ ಎಂದು ಪಟ್ಟಣದ ವೈದ್ಯ ಡಾ. ನವೀನ್ ಚಂದ್ರಶೆಟ್ಟಿ ಹೇಳಿದ್ದಾರೆ.
ಪಟ್ಟಣದ ಪುರಭವನದಲ್ಲಿ ಅಯೋಧ್ಯೆ ಬಲಿದಾನ್ ದಿವಸ್ ಅಂಗವಾಗಿ ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಜೀವ ರಕ್ತನಿಧಿ ಹಾಸನ, ಸ್ಪರ್ಶ್ ಆಸ್ಪತ್ರೆ ಹಾಸನ ಇವರ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯ 6 ತಿಂಗಳಿಗೊಮ್ಮ ರಕ್ತದಾನ ಮಾಡಬೇಕು. ಇದರಿಂದ ದೇಹದಲ್ಲಿ ಹೊಸ ರಕ್ತದ ಕಣಗಳು ಉತ್ಪತ್ತಿಯಾಗಲು ಸಹಾಯವಾಗುತ್ತದೆ. ರಕ್ತದಾನದಿಂದ ದೇಹದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯ. ರಕ್ತದಾನಕ್ಕಿಂತ ಶ್ರೇಷ್ಠ ದಾನ ಯಾವುದು ಇಲ್ಲ ಎಂದರು.
ಅಗತ್ಯವಿರುವವರೆಗೆ ಸಂಘಟನೆಯು ಯಾವುದೇ ಸಂದರ್ಭದಲ್ಲಾದರೂ ಸಹ ರಕ್ತವನ್ನು ಒದಗಿಸಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಈ ಕಾರ್ಯವನ್ನು ಎಷ್ಟು ಶ್ಲಾಘಿಸಿದರೂ ಸಾಲದು. ರಕ್ತದಾನದ ಬಗ್ಗೆ ಯಾರು ಅಂಜುವುದು ಬೇಡ. ರಕ್ತದಾನವನ್ನು ಪ್ರತಿಯೊಬ್ಬರು ಮಾಡಲು ಮುಂದಾಗಬೇಕು ಎಂದರು.