ETV Bharat / state

ಸಾವು - ಬದುಕಿನ ಮಧ್ಯೆ ಹೋರಾಡುತ್ತಿದ್ದ ಹಸುವಿಗೆ ಸತತ 3 ಗಂಟೆ ಶಸ್ತ್ರ ಚಿಕಿತ್ಸೆ - ಹಸುವಿಗೆ ಸಿಜೇರಿಯನ್​

ಗರ್ಭ ಧರಿಸಿ ಕರುಹಾಕುವ ವೇಳೆ ಸಾವು - ಬದುಕಿನ ಮಧ್ಯ ಹೋರಾಡುತ್ತಿದ್ದ ಹಸುವನ್ನು ಪಶು ವೈದ್ಯರು ರಕ್ಷಿಸಿದ ಘಟನೆ ಹಾಸನದಲ್ಲಿ ನಡೆದಿದೆ.

operation for cow
ಹಸುವಿಗೆ ಶಸ್ತ್ರ ಚಿಕಿತ್ಸೆ
author img

By

Published : Jun 18, 2020, 7:58 AM IST

ಚನ್ನರಾಯಪಟ್ಟಣ(ಹಾಸನ): ಗರ್ಭದಲ್ಲೇ ಹಲವು ನ್ಯೂನತೆ ಹೊಂದಿದ್ದ ಕರುವನ್ನು ಸತತ 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯುವಲ್ಲಿ ಪಶು ವೈದ್ಯರು ಯಶಸ್ವಿಯಾಗಿದ್ದಾರೆ.

operation for cow
ಹಸುವಿಗೆ ಶಸ್ತ್ರ ಚಿಕಿತ್ಸೆ

ಕಾಚೇನಹಳ್ಳಿ ಗ್ರಾಮದ ಮಂಜುಳಮ್ಮ ಎಂಬುವರು ಸಾಕಿದ್ದ ಆರು ವರ್ಷದ ಹಸು ಗರ್ಭ ಧರಿಸಿದ್ದು, ಕರು ಹಾಕುವ ವೇಳೆ ಸಾವು-ಬದುಕಿನೊಂದಿಗೆ ಹೋರಾಡುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕುಂಭೇನಹಳ್ಳಿ ಪಶು ಚಿಕಿತ್ಸಾಲಯದ ವೈದ್ಯ ಡಾ.ಎಂ.ಆರ್.ಪ್ರವೀಣ್‌ಕುಮಾರ್, ಅಣತಿಯ ಪಶು ವೈದ್ಯಾಧಿಕಾರಿ ಡಾ.ಎಸ್.ಪಿ.ಮಂಜುನಾಥ್ ಮತ್ತು ಸಾತೇನಹಳ್ಳಿಯ ಡಾ.ಜೆ.ಕೆ.ಪ್ರಮೊದ್ ಹಸುವಿನ ಹೊಟ್ಟೆಯಲ್ಲಿ ಅಡ್ಡ ಸಿಲುಕಿದ್ದ ಕರುವನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.

ಆದರೆ, ಕರು ಹಸುವಿನ ಹೊಟ್ಟೆಯೊಳಗಡೆಯೇ ಸಾವನ್ನಪ್ಪಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.