ETV Bharat / state

ಬದುಕಿರುವ ಮಗುವನ್ನು ಮೃತಪಟ್ಟಿದೆ ಎಂದ ವೈದ್ಯರು : ಆಸ್ಪತ್ರೆಯ ವಿರುದ್ದ ಪೋಷಕರ ಆಕ್ರೋಶ

ಉಸಿರಾಡುತ್ತಿದ್ದ ಮಗುವನ್ನು ಸಾವನ್ನಪ್ಪಿದೆ ಎಂದು ವೈದ್ಯರು ಯಡವಟ್ಟು ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಸುಳ್ಳು ಹೇಳಿದ ವೈದ್ಯರ ವಿರುದ್ದ ಮಗುವಿನ ಪೋಷಕರು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದ ಮಣಿ ಆಸ್ಪತ್ರೆ
author img

By

Published : Sep 1, 2019, 11:45 PM IST

ಹಾಸನ: ಉಸಿರಾಡುತ್ತಿದ್ದ ಮಗುವನ್ನು ಮೃತಪಟ್ಟಿದೆ ಎಂದ ವೈದ್ಯರು, ಪೋಷಕರಿಗೆ ಒಪ್ಪಿಸಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪದ ಹಳಿಯೂರಿನ ಲೋಕೇಶ್-ಸರಿತಾ ದಂಪತಿಯ ಮೂರು ತಿಂಗಳ ಮಗು ಆರವ್‌ನನ್ನು ಹುಷಾರಿಲ್ಲದ ಕಾರಣ ಮೂರು ದಿನಗಳ ಹಿಂದೆ ಹಾಸನದ ಮಣಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗೆ ಸರಿಯಾಗಿ ಮಗು ಸ್ಪಂದಿಸುತ್ತಿರಲಿಲ್ಲ, ಆದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿದ ವೈದ್ಯರು, ಮಗುವನ್ನು ಪೋಷಕರ ಕೈಗಿತ್ತಿದ್ದಾರೆ. ಆದರೆ, ಹಾಸನದಿಂದ ಮೂಡಿಗೆರೆಗೆ ತರುವ ಮಾರ್ಗಮಧ್ಯೆ ಕಂದಮ್ಮ ಅಳಲು ಪ್ರಾರಂಭಿಸಿದೆ. ತಕ್ಷಣವೇ ಪೋಷಕರು ಮಗುವನ್ನು ಮೂಡಿಗೆರೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ಪರಿಶೀಲಿಸಿದ ವೈದ್ಯರು, ಮಗು ಹುಷಾರಿದೆ ಎಂದು ತಿಳಿಸಿದ್ದಾರೆ.

ಹಾಸನದ ಮಣಿ ಆಸ್ಪತ್ರೆ

ನಂತರ ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಣಿ ಆಸ್ಪತ್ರೆಯ ವೈದ್ಯರ ಎಡವಟ್ಟಿಗೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಹಾಸನ: ಮೃತಪಟ್ಟಿದೆ ಎಂದು ಉಸಿರಾಡುತ್ತಿದ್ದ ಮಗುವನ್ನು ವೈದ್ಯರು ಪೋಷಕರಿಗೆ ಒಪ್ಪಿಸಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.
Body:ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪದ ಹಳಿಯೂರಿನ ಲೋಕೇಶ್-ಸರೀತಾ ದಂಪತಿಯ ಮೂರು ತಿಂಗಳ ಮಗು ಆರವ್‌ನನ್ನು ಹುಷಾರಿಲ್ಲದ ಕಾರಣ ಮೂರು ದಿನಗಳ ಹಿಂದೆ ಹಾಸನದ ಮಣಿ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗೆ ಸರಿಯಾಗಿ ಮಗು ಸ್ಪಂದಿಸುತ್ತಿರಲಿಲ್ಲ. ಮಗು ಸರಿಯಾಗಿ ಸ್ಪಂದಿಸದ ಕಾರಣ ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ, ಮಗುವನ್ನು ಅವರ ಕೈಗೆ ನೀಡಿದ್ದಾರೆ. ಆದರೆ, ಹಾಸನದಿಂದ ಮೂಡಿಗೆರೆಗೆ ತರುವ ಮಾರ್ಗಮಧ್ಯೆ ಕಂದಮ್ಮ ಅತ್ತಿದೆ. ತಕ್ಷಣವೇ ಪೋಷಕರು ಮಗುವನ್ನು ಮೂಡಿಗೆರೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ನಂತರ ಮಗು ಹುಷಾರಿದೆ ಎಂದು ವೈದ್ಯರು ತಿಳಿಸಿದ್ದಾರೆ. Conclusion:ಹೆಚ್ಚಿನ ಚಿಕಿತ್ಸೆಗೆ ಆವರನ್ನು ಪೋಷಕರು ಈಗ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಣಿ ಆಸ್ಪತ್ರೆಯ ವೈದ್ಯರ ಎಡವಟ್ಟಿಗೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.