ETV Bharat / state

ಕೈ ನೊಂದವರ ಆಶಾಕಿರಣ: ಡಿ.ಕೆ.ಶಿವಕುಮಾರ್​ - ಈಟಿವಿ ಭಾರತ ಕನ್ನಡ

ಡಬಲ್​ ಇಂಜಿನ್​ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲ ಆಗಿಲ್ಲ ಎಂದು ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಡಿಕೆಶಿ ಹೇಳಿದರು.

ಪ್ರಜಧ್ವನಿ ಯಾತ್ರೆ
ಪ್ರಜಧ್ವನಿ ಯಾತ್ರೆ
author img

By

Published : Feb 28, 2023, 10:37 PM IST

ಪ್ರಜಾಧ್ವನಿ ಯಾತ್ರೆ

ಹಾಸನ: ಅನ್ನಭಾಗ್ಯ, ಕ್ಷೀರ ಭಾಗ್ಯ ಕೊಟ್ಟಿದ್ದಷ್ಟೇ ಅಲ್ಲದೇ ಕೊರೊನಾ ಸಂಕಷ್ಟದಲ್ಲಿ ರಾಜ್ಯದ ಜನರ ಧ್ವನಿಯಾಗಿ ನಿಂತಿದ್ದು ಕಾಂಗ್ರೆಸ್. ಕೈ ನೊಂದವರ ಆಶಾಕಿರಣವಾಗುತ್ತದೆಯೇ ಹೊರತು ಯಾವತ್ತೂ ಭರವಸೆಗಳನ್ನು ಕೊಟ್ಟು ಹಿಂದೆ ಸರಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಆಲೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲ ಆಗಿಲ್ಲ. ರೈತರ ಆದಾಯ ಡಬಲ್ ಮಾಡ್ತೀವಿ ಅಂತ ಸುಳ್ಳು ಭರವಸೆ ಕೊಟ್ರು.

ಹಾಸನದಲ್ಲಿ ಸಮಸ್ಯೆಗಳು ಸಾಕಷ್ಟು ಜೀವಂತವಾಗಿ ಇವೆ. ಮಲೆನಾಡು ಭಾಗದಲ್ಲಿ ಆನೆ ದಾಳಿಗೆ 78 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಪರಿಹಾರ ಮಾತ್ರ ಇನ್ನೂ ಸರಿಯಾಗಿ ಸಿಕ್ಕಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಮತ್ತು ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟ ಕೇಳೋದಕ್ಕೆ ಮೋದಿ ಬರ್ಲಿಲ್ಲ. ಜನರ ಸಂಕಷ್ಟಕ್ಕೆ ಜನರ ಮನೆ ಬಾಗಿಲಿಗೆ ಕಾಂಗ್ರೆಸ್ ಭೇಟಿ ನೀಡಿ ಸಮಸ್ಯೆ ಆಲಿಸಿತು. ಆದರೆ ಮೋದಿ ಯಡಿಯೂರಪ್ಪನವರ ಬರ್ತ್‌ಡೆಗೆ ಬರ್ತಾರೆ ಎಂದು ಹರಿಹಾಯ್ದರು.

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಪಿಎಸ್​ಐ ಹಗರಣವೇ ಸಾಕ್ಷಿ. ಅದನ್ನು ಪ್ರಶ್ನೆ ಮಾಡಿದ್ರೆ ಸಾಕ್ಷಿ ಕೊಡಿ ಅಂತ ನೋಟಿಸ್ ಕೊಡ್ತಾರೆ. ಒಬ್ಬ ಕುಲಪತಿಯನ್ನು ನೇಮಿಸಿಕೊಳ್ಳೋದಕ್ಕೆ 4 ರಿಂದ 10 ಕೋಟಿ ಲಂಚ ಕೊಡಬೇಕು ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ತೊಲಗಿಸೋಕೆ ನಿಮ್ಮಿಂದ ಮಾತ್ರ ಸಾಧ್ಯ ಎಂದರು.

ನಾಳೆಯಿಂದ ಸರ್ಕಾರಿ ನೌಕರರು ಮುಷ್ಕರ ಮಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ಕಾಂಗ್ರೆಸ್ ಸದಾ ಸಿದ್ಧವಿದೆ. ನಮ್ಮ ಸರ್ಕಾರ ಬಂದ್ರೆ ಏಳನೇ ವೇತನ ಆಯೋಗ ಜಾರಿ ಮಾಡ್ತೀವಿ. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಜೊತೆಗೆ ವರ್ಷಕ್ಕೆ 24,000 ಗೃಹಲಕ್ಷ್ಮಿ ಯೋಜನೆಯಡಿ ಹಣ ಸಂದಾಯ ಮಾಡುವ ಜೊತೆಗೆ ಪ್ರತಿ ಕುಟುಂಬದ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಎಂದರು.

ಇದನ್ನೂ ಓದಿ: ಹಾಸನ ಟಿಕೆಟ್​ ಡಿಸಿಶನ್ ಪೆಂಡಿಂಗ್‌; ದೇವೇಗೌಡರ ನಿರ್ಧಾರದ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.