ETV Bharat / state

ಡಿಕೆಶಿ ಅಕ್ರಮವಾಗಿ ಆಸ್ತಿ‌ ಮಾಡಿಲ್ಲ.. ಮಾಜಿ ಸಚಿವ ಹೆಚ್‌ ಡಿ ರೇವಣ್ಣ - ಎಚ್.ಡಿ.ರೇವಣ್ಣ

ಡಿಕೆಶಿ ಅಕ್ರಮವಾಗಿ ಆಸ್ತಿ‌ ಮಾಡಿಲ್ಲ. ನಾವು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇವೆ. ಅದನ್ನು ತಮಟೆ ಬಾರಿಸಿ‌ ಹೇಳಬೇಕಾಗಿಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

ಎಚ್.ಡಿ.ರೇವಣ್ಣ
author img

By

Published : Sep 18, 2019, 8:32 AM IST

ಹಾಸನ: ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿದೆ‌. ಕೆಲ ರಾಷ್ಟ್ರೀಯ ಪಕ್ಷಗಳು ತುಳಿಯಲು ಹುನ್ನಾರ ಮಾಡುತ್ತಿವೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರಾಷ್ಟ್ರೀಯ ಪಕ್ಷಗಳು ಸಹ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಕೆಲ ನಾಯಕರು‌ ಪಕ್ಷದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು, ಅಪಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು. ಇಂತಹ ಸನ್ನಿವೇಶದ ಆರೋಪಗಳನ್ನು ದೇವೇಗೌಡರು ಹಲವು ವರ್ಷಗಳಿಂದ ನೋಡುತ್ತಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದರು.

ಅಪಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು..

ರಾಜ್ಯ ಸರ್ಕಾರ ಯಾವುದೇ ಆದೇಶ ಮಾಡಿದರೂ ನನಗೊಂದು‌ ಪ್ರತಿ ತಲುಪಲಿದೆ. ಯಾವುದೇ ತನಿಖೆಗೂ ಹೆದರಲ್ಲ. ಆ ರೀತಿ ಕಡತಗಳಿಗೆ ಮುದ್ರೆ ಹೊಡೆದಿರುತ್ತೇನೆ. ರಾಜ್ಯದಲ್ಲಿ ಜೆಡಿಎಸ್ ಬರದಿದ್ದರೆ ರೈತರ 48 ಸಾವಿರ ಕೋಟಿ‌ ಸಾಲ‌ಮನ್ನಾ ಆಗುತ್ತಿರಲಿಲ್ಲ. ತೆಂಗು‌ ಬೆಳೆಗಾರರಿಗೆ ಪರಿಹಾರ, ಗೃಹ ಲಕ್ಷ್ಮಿ ಯೋಜನೆ‌, 1000 ಇಂಗ್ಲೀಷ್ ಶಾಲೆಯಂತಹ ಯೋಜನೆ ರೂಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು‌. ಡಿಕೆಶಿ ಅಕ್ರಮವಾಗಿ ಆಸ್ತಿ‌ ಮಾಡಿಲ್ಲ, ನಾವು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇವೆ. ಅದನ್ನು ತಮಟೆ ಬಾರಿಸಿ‌ ಹೇಳಬೇಕಾಗಿಲ್ಲ. ಡಿಕೆಶಿ ಅವರು ಕಷ್ಟದಲ್ಲಿ‌ರುವುದು ಬೇಸರ ತಂದಿದೆ ಎಂದರು.

Intro:ಹಾಸನ; ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಯಾದ ಅಸ್ತಿತ್ವ ಉಳಿಸಿಕೊಂಡಿದೆ‌. ಕೆಲ ರಾಷ್ಟ್ರಿಯ ಪಕ್ಷಗಳು ತುಳಿಯಲು ಹುನ್ನಾರ ಮಾಡುತ್ತಿವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ರಾಷ್ಟ್ರೀಯ ಪಕ್ಷಗಳು ಸಹ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲಾ , ಕೆಲ ನಾಯಕರು‌ ಪಕ್ಷದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು ಅಪಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು ಎಂದ ಅವರು ಇಂತಹ ಸನ್ನಿವೇಶ ಆರೋಪಗಳನ್ನು ದೇವೇಗೌಡರು ಹಲವು ವರ್ಷಗಳಿಂದ ನೋಡುತ್ತಿದ್ದಾರೆ ಅದಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ.
ಜೆಡಿಎಸ್ ಮುಗಿಸಲು ಯಾರಿಂದಲೂ ಆಗೊಲ್ಲಾ. ಪಕ್ಷಕ್ಕೆ ಜನರ ಆಶಿರ್ವಾದ ಇದೆ‌ ದೇವೇಗೌಡರ ೬೦ ವರ್ಷದ ರಾಜಕೀಯ ಇತಿಹಾಸ ಹೊಂದಿರುವ ಪಕ್ಷದ
ಕಾರ್ಯಕರ್ತರು ದೃತಿಗೆಡುವ ಅಗತ್ಯವಿಲ್ಲಾ ಎಂದರು‌.

ರಾಜ್ಯ ಸರ್ಕಾರ ಯಾವುದೇ ಆದೇಶ ಮಾಡಿದರೂ ನನಗೊಂದು‌ ಪ್ರತಿ ತಲುಪಲಿದೆ ಎಂದ‌ ರೇವಣ್ಣ
ಯಾವುದೇ ತನಿಖೆಗೂ ಹೆದರಲ್ಲಾ ಆ ರೀತಿ ಕಡತಗಳಿಗೆ ಮುದ್ರೆ ಹೊಡೆದಿರುತ್ತೇನೆ ಎಂದು ತಮ್ನ ಅಧಿಕಾರ ವ್ಯಾಪ್ತಿಯನ್ನು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಜೆಡಿಎಸ್ ಬರದಿದ್ದರೆ ರೈತರ ೪೮ ಸಾವಿರ ಕೋಟಿ‌ ಸಾಲ‌ಮನ್ನ ಆಗುತ್ತಿರಲಿಲ್ಲಾ. ತೆಂಗು‌ ಬೆಳೆಗಾರರಿಗೆ ಪರಿಹಾರ . ಗೃಹ ಲಕ್ಷ್ಮಿ ಯೋಜನೆ‌.೧೦೦೦ ಇಂಗ್ಲೀಷ್ ಶಾಲೆ ಯಂತಹ ಯೋಜನೆ ರೂಪಿಸಲು ಸಾದ್ಯವಾಗುತ್ತಿರಲಿಲ್ಲಾ ಎಂದರು‌

ದಳದಲ್ಲಿ ಯಾವ ತಳ‌ವೂ ಇಲ್ಲಾ‌ ಮಳವೂ ಇಲ್ಲಾ ಎಲ್ಲಾ ಕೆಲ ನಾಯಕರ ಅಪಪ್ರಚಾರವಷ್ಟೆ , ಡಿಕೆಶಿ ಅಕ್ರಮವಾಗಿ ಆಸ್ತಿ‌ ಮಾಡಿಲ್ಲಾ. ನಾವು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇವೆ ಅದನ್ನು ತಮಟೆ ಬಾರಿಸಿ‌ ಹೇಳಬೇಕಾಗಿಲ್ಲಾ, ಡಿಕೆಶಿ ಅವರು ಕಷ್ಟದಲ್ಲಿ‌ ಇದ್ದರೆ ಅದಕ್ಕ ನಮ್ಮ ಬೆಸರವಿದೆ ದೇಶದಲ್ಲಿ ಯಾರೂ ಡಿಕೆಶಿ ಅವರ ರೀತಿ ಹಣ‌ ಮಾಡೇ ಇಲ್ಲವೇ ಎಂದು ಪ್ರಶ್ನಿಸಿದರು.

ನಾವು ಮೊನ್ನೆ‌ ನಡೆದ ಪ್ರತಿಭಟನೆಗೆ ಹೋಗಿಲ್ಲಾ ಆದರೆ ಕುಮಾರಸ್ವಾಮಿ ಡಿಕೆಶಿ ತಾಯಿ‌‌ ಭೇಟಿ ಮಾಡಿಲ್ಲವೇ. ಸಾಂತ್ವನ ಹೇಳಿಲ್ಲವೇ ಇಲ್ಲಸಲ್ಲದ ಆರೋಪ ಸರಿಯಲ್ಲಾ , ಕುಮಾರ್ ಸ್ವಾಮಿ ಹಾಗೂ ಗೌಡರು ಇವರಿಂದ ರಾಜಕೀಯ ಪಾಠ ಕಲಿಯಬೇಕಿಲ್ಲಾ ಎಂದು ನುಡಿದರು.

ನನ್ನ ತಮ್ಮ ನಿಂದ ಅಧಿಕಾರ ಪಡೆದವರು ಇಂದು ತಿರುಗಿಬಿದ್ದಿದ್ದಾರೆ..‌ಕೆ ಆರ್ ಪೇಟೆ ಶಾಸಕ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದು ಅವರಿಗೆಲ್ಲಾ ನಾ‌ ಪ್ರತಿಕ್ರಿಯೆ ನೀಡೊದು ನಮಗೆ ಶ್ರೇಯವಲ್ಲಾ ಎಂದು ಹೇಳಿದರು

ಕಳೆದ ಸಮ್ಮಿಶ್ರ ಸರ್ಕಾರ ರಚನೆ ವೇಳೆ ನಾವೇನೂ ಸಿಎಂ‌ ಸ್ಥಾನಕ್ಕೆ ಬೇಡಿಕೆ ಇಡಲಿಲ್ಲಾ ಆದರೂ ನಮಗೆ ಅಧಿಕಾರ ಒಲಿಯಿತು, ನಮ್ಮ ಕೆಲಸ‌‌ ಏನಿದ್ದರು ಜನಪರ‌ ಕಾಳಜಿ‌ ಅಷ್ಟೇ ..ಸಾಲಮನ್ನ ಮಾಡಿದ್ದೇವೆ ಹಲವು ಜನಪರ‌ ಕೆಲಸ‌ ಮಾಡಿದ ತೃಪ್ತಿ ಇದೆ ಎಂದರು.

ನಮ್ಮ ಪಕ್ಷದ ವಿರುದ್ದ ಹಾಗೂ ನಾಯಕರ ವಿರುದ್ಧ ಮಾತನಾಡುವವರಿಗೆ ಜನರೇ ಉತ್ತರ ನಿಡಲಿದ್ದಾರೆ. ಬೆಂಗಳೂರು ಕಾರೀಡಾರ್‌ ರಸ್ತೆ ಯೋಜನೆಗೆ ನನ್ನ ಅಧಿಕಾರವಧಿಯಲ್ಲಿ ೪ ಸಾವಿರಕ್ಕೆ ಕರೆದ ಟೆಂಡರ್ ಇಂದು ೩೫ ಸಾವಿರ ಕೋಟಿ ತಲುಪಿದೆ ಅಲ್ಲದೆ ಬಿಜೆಪಿ ಸರ್ಕಾರ ೫ ವರ್ಷದಿಂದ ಏಕೆ‌‌‌ ಮಾಡಿಲ್ಲಾ‌ ಈ ಕಾಮಗಾರಿ ಕೈಗೊಳ್ಳಲಿಲ್ಲಾ ಎಂದು ಪ್ರಶ್ನಿಸಿದರು.

ಹಗಲು ಒಂದು ಕಡೆ ರಾತ್ರಿ ಒಂದು ಇರುವವರು ಡಿಕೆಶಿ ಪರ ಮಾರನಾಡುತ್ತಾರೆ ಎಂದು ಮಾಜಿ ಸಚಿವ ಹೆಚ್ .ಡಿ.ರೇವಣ್ಣ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ ಅವರು ನಾವು ಡಿಕೆಶಿ ಪರ ನಿಕಟ ಸಂಬಂಧ ಹೊಂದಿದ್ದೇವೆ.ಎಲ್ಲವನ್ನೂ ‌ನಾವು ಬಹಿರಂಗವಾಗಿ ಹೇಳಬೇಕಿಲ್ಲ ಎಂದು‌ ಚಾಟಿ ಬೀಸಿದರು.

ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗ ಸಮುದಾಯದವರು ನಡೆಸಿದ ಪ್ರತಿಭಟನೆಗೆ ಹೆಚ್.ಡಿ.ಕೆ. ಬಾಗಿಯಾಗದ ವಿಚಾರವಾಗಿ‌ ‌ಮಾತನಾಡಿದ ರೇವಣ್ಣ ಡಿಕೆಶಿ ಮನೆಗೆ ಹೋಗಿ ಧೈರ್ಯ ತುಂಬಿದ್ದಾರೆ. ಕೆಲವರಿಗೆ ಬೀಗರ ಔತಣಕ್ಕೆ ಓಡಾಡುವುದಣೆ ಕೆಲಸವಾಗಿದೆ ಟಾಂಗ್ ನೀಡಿದರು.

ನಾನೊಬ್ಬ ಅಣ್ಣನಾಗಿ ಕುಮಾರಸ್ವಾಮಿಗೆ ಬುದ್ದಿ ಹೇಳಿದ್ದೇನೆ. ನಮಗೆ ರಾಜಕೀಯ ಶಾಶ್ವತವಲ್ಲ. ನಾವು ಗಂಭೀರವಾಗಿ ಇರಬೇಕು ಎಂದು ಬುದ್ದಿಹೇಳಿದ್ದೇನೆ ಎಂದರು.

ಜೊತೆಯಲ್ಲಿ ಸರಿಯಾದವರನ್ನು ಇಟ್ಟುಕೊಂಡು ಓಡಾಡಬೇಕು ಎಂದು ಹೇಳಿದ್ದೇನೆ , ಡಿಕೆಶಿ ಬ್ರದರ್ಸ್ ರನ್ನು ಇಡಿ ಯವರಿಂದ ಹೆದರಿಸಲು ಸಾಧ್ಯವಿಲ್ಲ . ಇಂತಹ ಪ್ರಕರಣಗಳನ್ನು ‌ಎದರಿಸುವ ಸಾಮರ್ಥ್ಯ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ಜೆಡಿಎಸ್ ಅಳಿಸಲು ಯಾರಿಂದಲೂ‌ ಸಾಧ್ಯವಿಲ್ಲ. ದೇವೇಗೌಡರ‌ ಕುಟುಂಬವನ್ನು‌ ರಾಜ್ಯದ‌ ಜನತೆ ‌ಕೈ‌ಬಿಡುವುದಿಲ್ಲ .‌ಚಲುವರಾಯಸ್ವಾಮಿ‌ ಅವರನ್ನು ಕಳೆದ ಚುನಾವಣೆಯಲ್ಲಿ ಕಸದಬುಟ್ಟಿಗೆ ಎಸೆಯಲಾಗಿದೆ ಎಂದು ವ್ಯಂಗ್ಯವಾಡಿದರು.

ಬೈಟ್ 1 : ಎಚ್.ಡಿ. ರೇವಣ್ಣ, ಮಾಜಿ ಸಚಿವ.
Body:- ಅರಕೆರೆ ಮೋಹನಕುಮಾರ,ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.