ETV Bharat / state

ಜೆಡಿಎಸ್ ಪಕ್ಷದವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಶ್ವೇತಾ ದೇವರಾಜು

ನಮಗೆ ಆಗುತ್ತಿರುವ ತೊಂದರೆ ಬಗ್ಗೆ ಎಲ್ಲಾ ವಿಷಯವನ್ನು ಪಕ್ಷದ ಮುಖಂಡರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಳಿ ಹೋಗಿ ಒಂದೊಂದಾಗಿ ಹೇಳುತ್ತೇನೆ ಎಂದು ಶ್ವೇತಾ ದೇವರಾಜು ತಿಳಿಸಿದರು.

District Panchayat Chairperson Shweta Devaraj
ಶ್ವೇತಾ ದೇವರಾಜು
author img

By

Published : Jun 21, 2020, 1:08 AM IST

ಹಾಸನ: ನಾನು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾದ ದಿನದಿಂದ ಜೆಡಿಎಸ್ ಪಕ್ಷದವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡಿ ನನಗೆ ಮಾನಸಿಕ ಹಿಂಸೆ ಕೊಡುತ್ತಿದ್ದು, ಈ ಬಗ್ಗೆ ಸದ್ಯದಲ್ಲಿಯೇ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ದೂರು ನೀಡುವುದಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜು ತಿಳಿಸಿದರು.

ಜಿಲ್ಲಾ ಪಂಚಾಯತ್ ಹೇಮಾವತಿ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ತಮ್ಮ ನೋವನ್ನು ಹಂಚಿಕೊಂಡ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಂದು ಪ್ರಧಾನಮಂತ್ರಿ ಮತ್ತು ಇಂದು ರಾಜ್ಯಸಭಾ ಸದಸ್ಯರಾಗಲು, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಹಾಗೂ ಜೆಡಿಎಸ್ ಪಕ್ಷ ಎಲ್ಲಾ ಕ್ಷೇತ್ರದಲ್ಲೂ ಸೋಲು ಅನುಭವಿಸಿ, ಪ್ರಜ್ವಲ್ ರೇವಣ್ಣನವರು ಹಾಸನದಲ್ಲಿ ಸಂಸದರಾಗಲು-ಒಟ್ಟಾರೆ ಜೆಡಿಎಸ್ ಅಧಿಕಾರ ಪಡೆಯಲು ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ ಎಂದರು.

ಇದೀಗ ನಮ್ಮ ಕಾಂಗ್ರೆಸ್ ಪಕ್ಷವನ್ನೇ ಬಳಸಿಕೊಂಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಈ ಮಟ್ಟದ ಮಾನಸಿಕ ಹಿಂಸೆಯಾಗುವಂತೆ ಮಾಡಲಾಗುತ್ತಿದೆ ಎಂದರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಹೇಗಿರಬೇಡ? ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇದೀಗ ಲಿಫ್ಟ್ -ಪ್ರವಾಸ ಭತ್ಯೆ ಇತರೆ ಅನುದಾನ ಹಂಚಿಕೆ ಸಂಬಂಧ ಚರ್ಚೆಗೆ ಸಭೆ ಕರೆಯಲು ಸದಸ್ಯರಲ್ಲದವರ ಸಹಿಯನ್ನು ಹಾಕಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ರಾಜೀನಾಮೆ ನೀಡಿರುವ ಸದಸ್ಯರಲ್ಲದ ಅಶೋಕ ಬಿ.ಎಸ್ ಎಂಬುವವರ ಸಹಿ ಪತ್ರದಲ್ಲಿ ಇದೆ. ಈ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ತನಿಖೆಗೆ ಒತ್ತಾಯಿಸುವುದಾಗಿ ಹೇಳಿದ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಹ ದಾವೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರವಾಸ ಭತ್ಯೆಯಾಗಿ ದಿನಕ್ಕೆ ಎರಡು ಸಾವಿರ ರೂ ನೀಡಲಾಗುತ್ತದೆ 20 ದಿನದ ಭತ್ಯೆ 40000 ಗಳನ್ನು ನೀಡಲಾಗುತ್ತಿದ್ದು, ಇದರಲ್ಲಿ ಯಾವುದೇ ಲೋಪವಾಗಿರುವುದಿಲ್ಲ. ಲಿಫ್ಟ್ ಅಳವಡಿಕೆ ವಿಚಾರ ಈಗಾಗಲೇ ಸಾಮಾನ್ಯಸಭೆಯಲ್ಲಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಸ್ಪಷ್ಟನೆ ನೀಡಲಾಗಿದೆ ಆದರೂ ಸಹ ಜೆಡಿಎಸ್​ನ ಕೆಲ ಮುಖಂಡರುಗಳು ಸೇರಿ ಅವರ ಪಕ್ಷದ ಸದಸ್ಯರನ್ನು ನನ್ನ ವಿರುದ್ಧ ಮಾತನಾಡುವಂತೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ತೊಡಕುಂಟು ಮಾಡುತ್ತಿರುವ ಜೆಡಿಎಸ್ ಸದಸ್ಯರು ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕಾನೂನು ಉಲ್ಲಂಘನೆ- ಅನುದಾನ ದುರ್ಬಳಕೆ- ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಾರೆ. ಇದರಿಂದ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಶ್ವೇತಾ ದೇವರಾಜ್ ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.