ಹಾಸನ: ನನಗೆ ಗ್ರಾಮದಲ್ಲಿ ಬಂದದ್ದು ಕೇವಲ 7 ಮತ. ಆದರೆ ನಿಷ್ಪಕ್ಷಪಾತವಾಗಿ ಶಾಸಕನ ಕರ್ತವ್ಯ ಮಾಡಿದ್ದೇನೆ. ಚುನಾವಣೆ ಬಂದಾಗ ಮಾತ್ರ ಪಕ್ಷಕ್ಕಾಗಿ ಹೋರಾಟ ಮಾಡಬೇಕು. ಉಳಿದಂತೆ, ನ್ಯಾಯಸಮ್ಮತವಾಗಿ ಜನ ಸೇವೆ ಮಾಡಬೇಕು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದ್ದಾರೆ.
ಹಾಸನ ತಾಲ್ಲೂಕಿನ ದ್ಯಾಪಲಾಪುರ ಗ್ರಾಮದಲ್ಲಿ ನಡೆದ ಸಾಗುವಳಿ ಚೀಟಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಐದಾರು ದಶಕಗಳಿಂದ ಇದ್ದ ಸಮಸ್ಯೆಯನ್ನು ಈ ಹಿಂದೆ ಶಾಸಕರಾಗಿದ್ದವರು, ಮಂತ್ರಿಯಾದವರು ಮಾಡಲಾಗದ ಕೆಲಸವನ್ನು ನಾನು ಮಾಡಿದ್ದೇನೆ. ಚುನಾವಣೆ ಸಂದರ್ಭದಲ್ಲಿ ನನಗೆ ಗ್ರಾಮದಲ್ಲಿ ದೊರೆತಿದ್ದು ಕೇವಲ ಏಳು ಮತಗಳಷ್ಟೇ. ಆದರೂ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದುಕೊಂಡೆ. ಒಮ್ಮೆ ದೇವೇಗೌಡರು ನಮ್ಮ ಕೈಹಿಡಿದಿದ್ದರು, ಇಂದು ಭೂಮಿ ಸಮಸ್ಯೆ ಬಂದಾಗ, ಗ್ರಾಮದ ಕೃಷಿಭೂಮಿ ಸಮಸ್ಯೆಯನ್ನು ಸರ್ಕಾರದ ಮುಂದಿಟ್ಟು ನಾನು ಬಗೆಹರಿಸಿಕೊಟ್ಟಿದ್ದೇನೆ ಎಂದರು.
ಇದನ್ನೂ ಓದಿ : ಜನ ಬದಲಾವಣೆ ಬಯಸಿದ್ದಾರೆ ಎಂದ ಭಾಸ್ಕರ್ ರಾವ್: ನೀವು ಆಪ್ ಸಿಎಂ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ಹೀಗಿದೆ ಉತ್ತರ..