ETV Bharat / state

ಸಂಜೀವಿನಿ ಸಹಕಾರಿ ಆಸ್ಪತ್ರೆ ಆಡಳಿತಾಧಿಕಾರಿಯ ಸರ್ವಾಧಿಕಾರ: ಎಚ್​ಡಿ ರೇವಣ್ಣ ಆರೋಪ - ಸಂಸ್ಥಾಪಕ ಮಾಜಿ ಶಾಸಕ ದಿವಂಗತ ಎಚ್. ಎಸ್ ಪ್ರಕಾಶ್

ರಾಜ್ಯದ ಏಕೈಕ ಸಹಕಾರಿ ಸಂಘವನ್ನು ಕಟ್ಟಿದ ಸಂಸ್ಥಾಪಕ ಮಾಜಿ ಶಾಸಕ ದಿವಂಗತ ಎಚ್. ಎಸ್ ಪ್ರಕಾಶ್ ಪುತ್ರ ಎಚ್​​ಪಿ ಸ್ವರೂಪ್ ಹೆಸರು ಸೇರಿದಂತೆ ಸಾಕಷ್ಟು ಮಂದಿ ಮತದಾರರ ಹೆಸರುಗಳನ್ನು ಸಂಜೀವಿನಿ ಸಹಕಾರಿ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಹಾಸನ ಜಿಲ್ಲಾ ಸಹಕಾರ ಸಂಘಗಳ ಪ್ರಭಾರಿ ಉಪನಿಬಂಧಕ ವಿ. ಸುನಿಲ್ ಚುನಾವಣಾ ಪಟ್ಟಿಯಿಂದ ತೆಗೆದುಹಾಕಿದ್ದು, ಕಾನೂನು ಬಾಹಿರವಾಗಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಕೇಳಿ ಬಂದಿದೆ.

dictatorship-hasana-cooperative-hospital-administrator-hd-ravanna-talk
ಸಂಜೀವಿನಿ ಸಹಕಾರಿ ಆಸ್ಪತ್ರೆ ಆಡಳಿತಾಧಿಕಾರಿಯ ಸರ್ವಾಧಿಕಾರ: ಎಚ್​ಡಿ ರೇವಣ್ಣ ಆರೋಪ
author img

By

Published : Oct 20, 2020, 5:20 PM IST

ಹಾಸನ: ಸಹಕಾರಿ ಸಂಘದ ಮೂಲಕ ಸ್ಥಾಪಿತವಾಗಿರುವ ರಾಜ್ಯದ ಏಕೈಕ ಆಸ್ಪತ್ರೆ ಎಂದರೆ ಅದು ನಗರದ ಸಂಜೀವಿನಿ ಸಹಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಶೋಧನಾ ಸಂಸ್ಥೆ. ಇಂತಹ ಸಂಘವನ್ನು ನಡೆಸಿಕೊಂಡು ಹೋಗುತ್ತಿರುವ ಕೆಲವು ಸದಸ್ಯರುಗಳ ಹೆಸರುಗಳನ್ನು ಕೈಬಿಟ್ಟು ಸಂಸ್ಥೆಯ ಆಡಳಿತಾಧಿಕಾರಿ ಸುನಿಲ್ ಸಂಸ್ಥೆಯನ್ನು ಮುಚ್ಚುವ ಹಂತಕ್ಕೆ ತಲುಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಗಂಭೀರವಾಗಿ ಆರೋಪಮಾಡಿದ್ದ

ಸಂಜೀವಿನಿ ಸಹಕಾರಿ ಆಸ್ಪತ್ರೆ ಆಡಳಿತಾಧಿಕಾರಿಯ ಸರ್ವಾಧಿಕಾರ: ಎಚ್​ಡಿ ರೇವಣ್ಣ ಆರೋಪ

ಹಾಸನ ಮೂಲದ ವೈದ್ಯರುಗಳಾದ ಡಾ. ಸಿ. ಮುನಿ ವೆಂಕಟೇಗೌಡ, ಡಾ. ಗುರುರಾಜ್ ಹೆಬ್ಬಾರ್ ಮತ್ತು ಮಾಜಿ ಶಾಸಕ ದಿ.ಎಚ್. ಎಸ್. ಪ್ರಕಾಶ್ ನೇತೃತ್ವದಲ್ಲಿ ಸ್ಥಾಪಿತಗೊಂಡ ಸಹಕಾರಿ ಸಂಜೀವಿನಿ ಸಂಶೋಧನಾ ಮತ್ತು ವೈದ್ಯಕೀಯ ಸಂಸ್ಥೆಯಲ್ಲಿ ಒಡಕು ಮೂಡಿದೆ.

ಏನಿದು ಪ್ರಕರಣ:

ರಾಜ್ಯದ ಏಕೈಕ ಸಹಕಾರಿ ಸಂಘವನ್ನು ಕಟ್ಟಿದ ಸಂಸ್ಥಾಪಕ ಮಾಜಿ ಶಾಸಕ ದಿವಂಗತ ಎಚ್. ಎಸ್ ಪ್ರಕಾಶ್ ಪುತ್ರ ಎಚ್​​ಪಿ ಸ್ವರೂಪ್ ಹೆಸರು ಸೇರಿದಂತೆ ಸಾಕಷ್ಟು ಮಂದಿ ಮತದಾರರ ಹೆಸರುಗಳನ್ನು ಸಂಜೀವಿನಿ ಸಹಕಾರಿ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಹಾಸನ ಜಿಲ್ಲಾ ಸಹಕಾರ ಸಂಘಗಳ ಪ್ರಭಾರಿ ಉಪನಿಬಂಧಕ ವಿ. ಸುನಿಲ್ ಚುನಾವಣಾ ಪಟ್ಟಿಯಿಂದ ತೆಗೆದುಹಾಕಿದ್ದು, ಕಾನೂನು ಬಾಹಿರವಾಗಿ ಚುನಾವಣೆ ನಡೆಸಲು ಮುಂದಾಗಿದ್ದಾರೆ ಎಂಬುದು ರೇವಣ್ಣನವರ ಗಂಭೀರ ಆರೋಪ.

ನನ್ನದೇನು ತಪ್ಪಿಲ್ಲ, ಸರ್ವ ಸದಸ್ಯರ ಸಭೆಗೆ ಹಾಜರಾಗಿಲ್ಲ:

ನಾನು ಕಾನೂನು ಬಾಹಿರವಾಗಿ ಯಾವುದೇ ಕೆಲಸವನ್ನು ಕೂಡ ಮಾಡಿಲ್ಲ. ಕಳೆದ ಮೂರು ವರ್ಷಗಳಿಂದ ಸ್ವರೂಪ್ ಸೇರಿದಂತೆ ಹಲವರು ಸರ್ವಸದಸ್ಯರ ಸಭೆಗೆ ಹಾಜರಾಗದೆ ಇರುವುದರಿಂದ ಸಂಘದ ನಿಯಮದಂತೆ ಅವರ ಹೆಸರನ್ನು ಕೈಬಿಡಬೇಕಾಗುತ್ತದೆ. ಸರ್ವ ಸದಸ್ಯರುಗಳ ತೀರ್ಮಾನದಂತೆ ಹಾಜರಾತಿ ಪುಸ್ತಕದಲ್ಲಿ ಸಭೆಗೆ ಬಂದವರು ಮಾತ್ರ ಸಹಿಹಾಕಿದ್ದಾರೆ. ನನ್ನ ಮೇಲಿನ ಆರೋಪ ಎಲ್ಲವೂ ಕೂಡ ನಿರಾಧಾರ, ನಾನು ಯಾವುದೇ ಕಾನೂನು ತನಿಖೆಗೂ ಸಿದ್ದವಿದ್ದೇನೆ ಎನ್ನುತ್ತಾರೆ ಆಡಳಿತಾಧಿಕಾರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.