ಹಾಸನ: ಇಲ್ಲಿನ ಹಾಸನಾಂಬ ದೇವಾಲಯಕ್ಕೆ ಪತ್ನಿ ಜತೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು, ದೇವಿಯ ದರ್ಶನ ಪಡೆದಿದ್ದಾರೆ.
ಬಳಿಕ ಮಾತನಾಡಿದ ಅವರು, ಜಿಲ್ಲಾಡಳಿತ ಕೊರೊನಾದ ನಡುವೆಯೂ ಈ ಆಚರಣೆ ಮುಂದುವರಿಸಿದ್ದಾರೆ. ಕಳೆದ ವರ್ಷ ಲಕ್ಷಾಂತರ ಜನ ದೇವಿಯ ದರ್ಶನಕ್ಕೆ ಬರುತ್ತಿದ್ದರು. ಆದರೆ, ಕೊರೊನಾದಿಂದ ಈ ಬಾರಿ ಕಡಿಮೆಯಾಗಿದೆ ಎಂದರು.
ದೀಪಾವಳಿಯ ದಿನದಂದು ದೇವಾಲಯದಲ್ಲಿ ದೀಪ ಹಚ್ಚಿ ಬಾಗಿಲು ಹಾಕಲಾಗುತ್ತದೆ. ಒಂದು ವರ್ಷವಾದರೂ ದೇವಿಯ ದೀಪ ಉರಿಯುತ್ತಿರುತ್ತದೆ ಎಂಬ ಪ್ರತೀತಿ ಇದೆ. ಜನಸಾಮಾನ್ಯರೂ ದೇವಿಯ ಬಗ್ಗೆ ನಂಬಿಕೆ ವಿಶ್ವಾಸವಿದೆ.
ಈ ಬಾರಿ ಜಿಲ್ಲಾಡಳಿತ ಕೂಡ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿದ್ದಾರೆ. ನಾನು ಹಾಸನ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎಲ್ಲರಿಗೂ ಹಾಸನಾಂಬೆ ಆರೋಗ್ಯ, ಆಯುಷ್ಯ ನೀಡಲಿ ಎಂದು ಬೇಡಿದ್ದೇನೆ. ಕೊನೆಗಾಲದಲ್ಲಿ ರಾಜ್ಯಸಭಾ ಸದಸ್ಯನಾಗಿದ್ದೇನೆ. ನನ್ನ ಕೈಲಾದಷ್ಟು ಜನರ ಕೆಲಸ ಮಾಡುತ್ತೇನೆ ಎಂದರು.