ETV Bharat / state

ಹಾಸನ ಮೂಲದ ಸಿಆರ್​ಪಿಎಫ್ ಯೋಧ ಆತ್ಮಹತ್ಯೆ - kannadanews

ಹಾಸನ ಮೂಲದ ಸಿಆರ್​ಪಿಎಫ್ ಯೋಧರೊಬ್ಬರು ಹರಿಯಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಾಸನ ಮೂಲದ ಸಿಆರ್​ಪಿಎಫ್ ಯೋಧ ಆತ್ಮಹತ್ಯೆ
author img

By

Published : Jun 9, 2019, 9:27 PM IST

ಹಾಸನ: ಜಿಲ್ಲೆಯ ಕದಾಲು ಗ್ರಾಮದವರಾದ ಸಿಆರ್​ಪಿಎಫ್ ಯೋಧರಾಗಿದ್ದ ಮೋಹನ್ ಕುಮಾರ್ ಡೆತ್​ನೋಟ್​ ಬರೆದಿಟ್ಟು ,ತಮಗೆ ಕೊಟ್ಟಿದ್ದ ರೈಫಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೋಹನ್ ಕುಮಾರ್ ಕಳೆದ 8 ವರ್ಷಗಳಿಂದ ಭಾರತೀಯ ವಾಯ ಸೇನೆಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಎರಡು ತಿಂಗಳ ಹಿಂದಷ್ಟೆ ಮದುವೆ ಮಾಡಿಕೊಂಡಿದ್ದರು .ಮೋಹನ್ ಕರ್ತವ್ಯದಲ್ಲಿರುವಾಗ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿ ಶೌಚಗೃಹದ ಬಾಗಿಲಿನ ಬಳಿ ತಮ್ಮ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣವೆನೆಂಬುದು ತಿಳಿದು ಬಂದಿಲ್ಲ. ಆದ್ರೆ ಆತ್ಮಹತ್ಯೆಗೂ ಮುನ್ನ ಪತ್ರವೊಂದನ್ನ ಬರೆದಿಟ್ಟಿದ್ದರು ಎನ್ನಲಾಗಿದೆ. ಅಪ್ಪ ಅಮ್ಮ ಹುಟ್ಟಿನಿಂದ ಇಲ್ಲಿಯವರೆಗೆ ನಾನು ನಿಮಗೋಸ್ಕರ ಏನು ಮಾಡುವುದಕ್ಕೆ ಆಗಿಲ್ಲ. ಅಪ್ಪನಿಗೆ ಅಮ್ಮನಿಗೆ ಒಳ್ಳೆಯ ಮಗನಾಗದೇ ನಿಮಗೆ ಮೋಸ ಮಾಡಿದ್ದೇನೆ. ಅಣ್ಣನಿಗೆ ಒಳ್ಳೆಯ ತಮ್ಮನಾಗದೇ, ಕೊನೆಗೆ ಹೆಂಡತಿಗೆ ಒಳ್ಳೆಯ ಗಂಡನಾಗಿಲ್ಲ ಅನಿಸುತ್ತಿದೆ ಎಂದು ಮನನೊಂದು ಬರೆದಿದ್ದಾರೆ.

suicide
ಹಾಸನ ಮೂಲದ ಸಿಆರ್​ಪಿಎಫ್ ಯೋಧ ಆತ್ಮಹತ್ಯೆ

ಮೃತ ಯೋಧ ಮೋಹನ್ ಕುಮಾರ್ ರವರ ಕಳೇಬರವನ್ನು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ತರಲಾಗುವುದೆಂದು ಮಿಲಿಟರಿ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರಂತೆ. ಮೃತ ಯೋಧನಿಗೆ ಪತ್ನಿ, ತಂದೆ, ತಾಯಿ ಮತ್ತು ಸಹೋದರ ಇದ್ದಾರೆ. ಮೋಹನ್ ಸಾವಿನಿಂದ ಅವರ ಕುಟುಂಬದ ರೋಧನೆ ಮುಗಿಲು ಮುಟ್ಟಿದೆ.

Intro:ಹಾಸನ: ಜೀವನದಲ್ಲಿ ಜಿಗುಪ್ಸೆಯನ್ನ ಹೊಂದಿದ ಹಾಸನ ಮೂಲಕ ಸಿ.ಆರ್.ಪಿ.ಎಫ್.ಯೋಧರಬ್ಬರು ಹರಿಯಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಕದಾಲು ಗ್ರಾಮದವರಾದ ಮೋಹನ್ ಕುಮಾರ್ ತಮಗೆ ಕೊಟ್ಟಿದ್ದ ರೈಫಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 8 ವರ್ಷಗಳಿಂದ ಭಾರತೀಯ ವಾಯ ಸೇನೆಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಜೊತೆಗೆ ಎರಡು ತಿಂಗಳ ಹಿಂದಷ್ಟೆ ಗೃಹಸ್ಥಶ್ರಮಕ್ಕೆ ಕಾಲಿಟ್ಟಿದ್ರು.

ಆದ್ರೆ ಮೋಹನ್ ಕುಮಾರ್ ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಶೌಚಾಲಯಕ್ಕೆ ಹೋಗಿಬರುವುದಾಗಿ ಹೇಳಿ ಶೌಚಗೃಹದ ಬಾಗಿಲಿನ ಬಳಿ ತಮ್ಮ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೆನೆಂಬುದು ತಿಳಿದುಬಂದಿಲ್ಲ. ಆದ್ರೆ ಆತ್ಮಹತ್ಯೆಗೂ ಮುನ್ನ ಪತ್ರವೊಂದನ್ನ ಬರೆದಿಟ್ಟಿದ್ದರು ಎನ್ನಲಾಗಿದೆ.

"ಆ ಪತ್ರದಲ್ಲಿ ಪ್ರೀತಿಯ ಅಮ್ಮ ಮತ್ತು ಅಪ್ಪನಿಗೆ ನನ್ನ ನಮಸ್ಕಾರಗಳು. ಹುಟ್ಟಿನಿಂದ ಇಲ್ಲಿಯವರೆಗೆ ನಾನು ನಿಮಗೋಸ್ಕರ ಏನು ಮಾಡುವುದಕ್ಕೆ ಆಗಿಲ್ಲ. ಅಪ್ಪನಿಗೆ ಅಮ್ಮನಿಗೆ ಒಳ್ಳೆಯ ಮಗನಾಗದೇ ನಿಮಗೆ ಮೋಸ ಮಾಡಿದ್ದೇನೆ. ಅಣ್ಣಿನಗೆ ಒಳ್ಳೆಯ ತಮ್ಮನಾಗದೇ, ಕೊನೆಗೆ ಹೆಂಡತಿಗೆ ಒಳ್ಳೆಯ ಗಂಡನಾಗಿಲ್ಲ ಅನಿಸುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಇಷ್ಟುದಿನ ನನ್ನನ್ನು ಒಂದು ದಿವಸವೂ ಕೂಡಾ ನನ್ನನ್ನು ನೋಯಿಸದೇ ನೋಡಿಕೊಂಡಿದ್ದಕ್ಕೆ ನಿಮಗೆ ಚಿರಋಣಿಯಾಗಿರುತ್ತೇನೆ. ನಿಮ್ಮ ಮನಸ್ಸನ್ನ ನೋಯಿಸಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ. ಮುಂದಿನ ಜನ್ಮ ಇದ್ದರೆ ನನಗೆ ನಿಮ್ಮ ಪ್ರೀತಿಯೇ ಸಿಗಲಿ. ಇನ್ನು ಮುಂದೆ ನಿಮಗೆ ನನ್ನಿಂದ ಯಾವುದೇ ರೀತಿಯ ತೊಂದರೆ ಬರುವುದಿಲ್ಲ. ಅಮ್ಮ, ಅಪ್ಪ, ಅಣ್ಣ, ಅಪ್ಪಿ ನಿಮಗೆ ನಾನು ಯಾವಾಗಲೂ ನಿಮ್ಮ ಮನಸ್ಸಿನಲ್ಲಿಯೇ ಇರುತ್ತೇನೆ. ಮರೆಯದೇ ಕ್ಷಮಿಸಿ. ನೆನಪಾದರೇ ಲವ್ ಯೂ ಅಮ್ಮ, ಲವ್ ಯೂ ಚಿನ್ನು ಟೇಕ್ ಕೇರ್, ಐ ವಿಲ್ ಬಿ ಸೂನ್...ನನ್ನಿಂದ ಯಾರಿಗೂ ತೊಂದರೆಯಾಗಬಾರದು".

ಇಂತಿ ನಿಮ್ಮ ಪ್ರೀತಿಯ
ಮೋಹನ್ ಕುಮಾರ್. ಕೆ.ವಿ.

ಮೃತ ಮೋಹನ್ ಕುಮಾರ್ ರವರ ಕಳೇಬರವನ್ನು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ತರಲಾಗುವುದೆಂದು ಮಿಲಿಟರಿ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರಂತೆ. ಮೃತ ಯೋಧನಿಗೆ ಪತ್ನಿ, ತಂದೆ, ತಾಯಿ ಮತ್ತು ಸಹೋದರ ಇದ್ದಾರೆ .Body:0Conclusion:ಸುನಿಲ್ ಈಟಿವಿ ನ್ಯೂಸ್ ಹಾಸನ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.