ETV Bharat / state

ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದ ಬೀದಿ ನಾಯಿ... ಪುಣ್ಯಕೋಟಿಗೆ ಕೈ ಮುಗಿದ ಜನ

ಇಂದು ಬೆಳಗ್ಗೆ ಬೀದಿ ನಾಯಿಯೊಂದು ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದು ಹಸಿವು ನೀಗಿಸಿಕೊಳ್ಳುತ್ತಿದ್ದ ದೃಶ್ಯ ನೋಡಿದವರು ಬೆರಗಾಗಿದ್ದಾರೆ.

author img

By

Published : Jul 27, 2019, 9:16 PM IST

ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದ ಬೀದಿ ನಾಯಿ

ಹಾಸನ: ಹಿಂದೆ ಬಂದರೆ ಒದೆಯಬೇಡ, ಮುಂದೆ ಬಂದರೆ ಹಾಯಬೇಡ... ಹೀಗಂತ ಕರು, ಹಸುವಿಗೆ ಹೇಳುತ್ತಿಲ್ಲ. ಬೀದಿ ನಾಯಿಯೊಂದು ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯುತ್ತಿರುವ ದೃಶ್ಯ ನೋಡಿದರೆ ನಿಮಗೂ ಈ 'ಪುಣ್ಯಕೋಟಿ'ಯ ಸಾಲುಗಳು ನೆನಪಿಗೆ ಬರದೇ ಇರವು.

ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದ ಬೀದಿ ನಾಯಿ

ಇಂಥದ್ದೊಂದು ದೃಶ್ಯ ಕಂಡುಬಂದಿದ್ದು ಹಾಸನ ತಾಲೂಕಿನ ಕೆ.ಬ್ಯಾಡರಹಳ್ಳಿಯಲ್ಲಿ. ಇಂದು ಬೆಳಗ್ಗೆ ಬೀದಿ ನಾಯಿಯೊಂದು ಮನೆಯ ಮುಂದೆ ಕಟ್ಟಿಹಾಕಿದ್ದ ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದು ಹಸಿವು ನೀಗಿಸಿಕೊಳ್ಳುತ್ತಿತ್ತು. ಈ ನಾಯಿ ಪ್ರತಿನಿತ್ಯ ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದು ಹೋಗುತ್ತಂತೆ. ಮನೆ ಮಾಲೀಕನಿಗೆ ಹಾಲು ಕರೆಯುವ ಸಮಯದಲ್ಲಿ ಮೊದಲು ನೀಡುತ್ತಿದ್ದ ಹಾಲಿನ ಪ್ರಮಾಣಕ್ಕೂ, ಕಳೆದ 15 ದಿನದಿಂದ ಹಸು ನೀಡುತ್ತಿದ್ದ ಹಾಲಿನ ಪ್ರಮಾಣಕ್ಕೂ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಇಂದು ಹಸುವನ್ನು ಹೊರಗೆ ಕಟ್ಟಿ ಹಸುವಿನ ಚಲನವಲನವನ್ನ ಗಮನಿಸಿದಾಗ ನಾಯಿಯೊಂದು ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯುವ ದೃಶ್ಯ ಕಂಡು ಬಂದಿದೆ. ಇದನ್ನು ನೋಡಿದ ಮಾಲೀಕ ನಿಬ್ಬೆರಗಾಗಿದ್ದಾನೆ.

ಈ ಘಟನೆಯನ್ನು ಚಿತ್ರೀಕರಿಸಿದ ಗ್ರಾಮದ ಯುವಕನೋರ್ವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

Intro:ಹಸುವಿನ ಕೆಚ್ಚಲಿಗೆ ನಾಯಿಯೊಂದು ಬಾಯಿ ಹಾಕಿ ಹಾಲು ಕುಡಿದು ಹಸಿವು ನೀಗಿಸಿಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ತಾಲ್ಲೂಕಿನ ಕೆ.ಬ್ಯಾಡರಹಳ್ಳಿ ಇಂತಹದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಇಂದು ಬೆಳಗ್ಗೆ ಬೀದಿ ನಾಯಿಯೊಂದು ಮನೆಯ ಮುಂದೆ ಕಟ್ಟಿಹಾಕಿದ್ದ ಹಸುವಿನ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದು ಧಣಿವಾರಿಸಿಕೊಂಡಿದೆ.

ಪ್ರತಿನಿತ್ಯ ಈ ನಾಯಿ ಹಸುವಿನ ಮೊಲೆಗೆ ಬಾಯಿ ಹಾಕಿ ಹಾಲು ಕುಡಿದು ಹೋಗುತ್ತಿತ್ತು ಎನ್ನುವ ಮಾತುಗಳನ್ನ ಈಗ ಗ್ರಾಮಸ್ಥರು ಹೇಳುತ್ತಿದ್ದು, ಮನೆ ಮಾಲೀಕ ಹಾಲನ್ನ ಕರೆಯುವ ಸಮಯದಲ್ಲಿ ಮೊದಲು ನೀಡುತ್ತಿದ್ದ ಹಾಲಿನ ಪ್ರಮಾಣಕ್ಕೂ ಕಳೆ 15 ದಿನದಿಂದ ನೀಡುತ್ತಿದ್ದ ಹಾಲಿನ ಪ್ರಮಾಣಕ್ಕೂ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಇಂದು ಹಸುವನ್ನ ಹೊರಗೆ ಕಟ್ಟಿ ಹಸುವಿನ ಚಲನವಲನವನ್ನ ಗಮನಿಸಿದಾಗ ನಾಯಿಯೊಂದು ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯುವ ದೃಶ್ಯ ಕಂಡು ಮಾಲೀಕ ನಿಬ್ಬೇರಗಾಗಿದ್ದಾನೆ.

ಗೋವುನ್ನ ನಾವು ದೇವರಂತ ಪೂಜಿಸುತ್ತೇವೆ. ಹಿಂದೆ ಬಂದರು ಹಾಯಬೇಡ, ಮುಂದೆ ಬಂದರು ಒದೆಯಬೇಡ ಎಂಬ ಗೋ ಮಾತೆಯ ಹಾಡಿನಂತೆ ಇಂದಿನ ದೃಶ್ಯ ನೋಡಿದ್ರೆ ಅದಕ್ಕೆ ಹೊಲಿಕೆಯಾಗುವಂತಿದೆ. ಇನ್ನು ಈ ದೃಶ್ಯವನ್ನ ಚಿತ್ರಿಕರಿಸಿದ ಅದೇ ಗ್ರಾಮದ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಹಸುವಿನ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗ್ತಿದೆ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.