ಹಾಸನ/ಆಲೂರು: ಕೋವಿಡ್‌ಗೆ ವೃದ್ಧ ದಂಪತಿ ಬಲಿಯಾಗಿರುವ ಘಟನೆ ತುರುಗನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ನಿವೃತ್ತ ಪೊಲೀಸ್ ಅಧಿಕಾರಿ ರಾಜೇಗೌಡ (75), ಪತ್ನಿ ರತ್ನಮ್ಮ (68) ಕೋವಿಡ್‌ಗೆ ಬಲಿಯಾದವರು. ಒಂದು ವಾರದ ಹಿಂದೆ ಪತ್ನಿ ರತ್ನಮ್ಮ ಅವರಿಗೆ ಕೋವಿಡ್ ತಗುಲಿದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಆರೈಕೆಗಾಗಿ ಪತಿ ರಾಜೇಗೌಡ ಆಗಾಗ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಮೂರು ದಿನಗಳ ಹಿಂದೆ ರಾಜೇಗೌಡರಿಗೆ ಪಾಸಿಟಿವ್ ಬಂದಿದ್ದರಿಂದ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಇದನ್ನೂ ಓದಿ: 'ಲಾಕ್ಡೌನ್ ಮಾಡದಿದ್ದರೆ ಕೊರೊನಾ ಚೈನ್ ಲಿಂಕ್ ತುಂಡರಿಸುವುದು ಕಷ್ಟ'
ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ರತ್ನಮ್ಮ ಮೃತಪಟ್ಟರೆ, ಇಂದು ಬೆಳಗ್ಗೆ ರಾಜೇಗೌಡ ಮೃತಪಟ್ಟಿದ್ದಾರೆ. ಕೋವಿಡ್ ನಿಯಮದಂತೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.