ETV Bharat / state

ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಕೊರೊನಾ ಶಂಕೆ: ತಪಾಸಣೆ ಬಳಿಕ ಪರೀಕ್ಷೆಗೆ ಹಾಜರು

author img

By

Published : Jun 27, 2020, 3:14 PM IST

ಎಸ್​ಎಸ್​ಎಲ್​ಸಿ ಗಣಿತ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯಲ್ಲಿ ಕೊರೊನಾ ಲಕ್ಷಣ ಕಂಡು ಬಂದಿದೆ ಎಂಬ ವಿಚಾರದಿಂದಾಗಿ ಕೆಲ ಸಮಯ ಶಾಲಾ ಆವರಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು.

Corona suspection in SSLC students: Channarayapatna BEO clarification
ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಕೊರೊನಾ ಶಂಕೆ: ಚನ್ನರಾಯಪಟ್ಟಣ ಬಿಇಒ ಸ್ಪಷ್ಟನೆ

ಚನ್ನರಾಯಪಟ್ಟಣ: ಎಸ್​ಎಸ್​ಎಲ್​ಸಿ ಗಣಿತ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯಲ್ಲಿ ಕೊರೊನಾ ಲಕ್ಷಣ ಕಂಡು ಬಂದಿದೆ ಎಂಬ ವಿಚಾರದಿಂದಾಗಿ ಕೆಲ ಸಮಯ ಶಾಲಾ ಆವರಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಕೊರೊನಾ ಶಂಕೆ: ತಪಾಸಣೆ ಬಳಿಕ ಪರೀಕ್ಷೆಗೆ ಹಾಜರು

ಇಂದು ಗಣಿತ ಪರೀಕ್ಷೆ ಬರೆಯಲು ಹಾಜರಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹೀಗಾಗಿ ತಾಲೂಕು ದಂಡಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಪರೀಕ್ಷೆ ಮಾಡಿಸಿದ ನಂತರ ಯಾವುದೇ ತೊಂದರೆ ಇಲ್ಲ ಎಂದು ಮತ್ತೆ ವಿದ್ಯಾರ್ಥಿಯನ್ನು ಕರೆ ತಂದು ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸುತ್ತಿದ್ದಾರೆ.

ಈ ವಿಚಾರವಾಗಿ ಪರೀಕ್ಷಾ ಕೇಂದ್ರದ ಬಳಿ ಕೆಲಕಾಲ ಗೊಂದಲ ಸೃಷ್ಟಿಯಾಗಿದ್ದ ಹಿನ್ನೆಲೆ ಪ್ರಭಾರಿ ತಾಲೂಕು ಶಿಕ್ಷಣ ಅಧಿಕಾರಿ ವರಲಕ್ಷ್ಮಿ, ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ ಎಂದು ಧೈರ್ಯ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.