ಹಾಸನ: ಜಿಲ್ಲೆಯ 10 ಮಂದಿ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಕುರಿತಂತೆ ಹಾಸನ ಡಿಡಿಪಿಐ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಶಾಲೆ ಪ್ರಾರಂಭವಾದ ಎರಡೇ ದಿನಗಳಲ್ಲಿ ಶಿಕ್ಷಕರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಪ್ರಾಥಮಿಕ ಶಾಲೆಯ 7 ಮಂದಿ ಮತ್ತು ಪ್ರೌಢಶಾಲೆಯ 3 ಮಂದಿ ಶಿಕ್ಷಕರಿಗೆ ಕೋವಿಡ್ ದೃಢಪಟ್ಟಿದೆ.
ಶಾಲೆ ಆರಂಭಕ್ಕೂ ಮುನ್ನ 3 ಮಂದಿ ಶಿಕ್ಷಕರಲ್ಲಿ ಕೊರೊನಾ ಬಂದಿತ್ತು. ಅವರು ಶಾಲೆಗೆ ಹಾಜರಾಗಿರಲಿಲ್ಲ ಎನ್ನಲಾಗುತ್ತಿದೆ.