ETV Bharat / state

ಕೊರೊನಾ ಭೀತಿ: ಲಾಕ್​ಡೌನ್​ ಸಡಿಲಿಕೆ ಮಾಡಿದ್ರೂ ಹಾಸನದಲ್ಲಿ ಹೊರಗೆ ಬರ್ತಿಲ್ಲ ಜನ!

ಕಳೆದ 57 ದಿನಗಳಿಂದ ಕೊರೊನಾ ಹಿನ್ನೆಲೆ ಲಾಕ್​ಡೌನ್​ ಮಾಡಲಾಗಿತ್ತು. ಈಗ ಶೇ. 70ರಷ್ಟು ವ್ಯಾಪಾರ ವಹಿವಾಟು ನಡೆಸಲು ಸಡಿಲಿಕೆ ಸಿಕ್ಕಿದೆ. ಆದರೆ ನಗರದಲ್ಲಿ ಜನ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ.

rfgff
ಲಾಕ್​ಡೌನ್​ ಸಡಿಲಿಕೆ ಇದ್ರು ಹಾಸನ ಖಾಲಿ ಖಾಲಿ
author img

By

Published : May 21, 2020, 10:11 AM IST

ಹಾಸನ: ಲಾಕ್​ಡೌನ್​ನಲ್ಲಿ ಸಾಕಷ್ಟು ಸಡಿಲಿಕೆ ಇದ್ದರೂ ಮುಂಬೈನಿಂದ ಕೊರೊನಾ ಹೊತ್ತು ತಂದವರ ಭಯದಿಂದ ಜನ ಓಡಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ.

ಲಾಕ್​ಡೌನ್​ ಸಡಿಲಿಕೆ ಇದ್ರು ಹಾಸನ ಖಾಲಿ ಖಾಲಿ

ಕೊರೊನಾ ಭಾರತಕ್ಕೆ ಕಾಲಿಟ್ಟ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಿದೆ. ಆದರೆ ಸರ್ಕಾರ ಹೊರ ರಾಜ್ಯದಲ್ಲಿರುವವರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಬಹುದು ಎಂಬ ಆದೇಶ ಹೊರಡಿಸಿದೆ. ಇದರಿಂದ ಜಿಲ್ಲೆಗೆ ಮುಂಬೈನಿಂದ ಬಂದ ಜನರಿಂದ ಎಲ್ಲಿ ಕೊರೊನಾ ಹರಡುವುದೋ ಎಂಬ ಭಯ ಜನರಲ್ಲಿ ಕಾಡುತ್ತಿದೆ.

ಕಳೆದ ಮೂರು ತಿಂಗಳಿಂದ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಊಟಕ್ಕಾಗಿ ಪರದಾಡುತ್ತಿದ್ದಾರೆ. ನಮ್ಮ ನೆರವಿಗೆ ಸರ್ಕಾರ ಬಂದಿಲ್ಲ. ಕೆಜಿ ಅಕ್ಕಿ ಮತ್ತು ಬೇಳೆ ಕೊಟ್ಟರೆ ಜೀವನ ಸಾಗಲ್ಲ. ಬದುಕುವುದಕ್ಕೆ ಮತ್ತಷ್ಟು ಅಗತ್ಯ ವಸ್ತುಗಳು ಬೇಕು. ಆದರೆ ದುಡಿಮೆ ಇಲ್ಲದೆ ಮಕ್ಕಳನ್ನು ಸಾಕಲು ಕಷ್ಟವಾಗಿದೆ. ಮೊದಲು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲದಿದ್ದಾಗ ಲಾಕ್​ಡೌನ್​ ಮಾಡಿದರು. ಈಗ ಕೊರೊನಾ ಪ್ರಕರಣಗಳು ಹೆಚ್ಚಾಗಿ ಜನ ಹೊರಗಡೆ ಬರುತ್ತಿಲ್ಲ. ಆದರೆ ಸರ್ಕಾರ ಮಾತ್ರ ಯಾವುದೇ ನಿರ್ಬಂಧವಿಲ್ಲದೆ ಜನರಿಗೆ ಓಡಾಡಲು ಅವಕಾಶ ಕೊಟ್ಟಿದೆ. ಇದು ಸರಿಯಾದ ಮಾರ್ಗವಲ್ಲ ಎಂದು ಹೋಟೆಲ್ ಕಾರ್ಮಿಕರು ಅಭಿಪ್ರಾಯಪಟ್ಟಿದ್ದಾರೆ.

ಜನರಿಲ್ಲದೆ ಹೋಟೆಲ್​ಗಳು ಸಹ ಖಾಲಿ ಖಾಲಿಯಾಗಿವೆ. ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಮಟನ್ ಶಾಪ್, ಪಂಚರ್ ಶಾಪ್​ಗಳು ದಿನದ ವ್ಯಾಪಾರವಿಲ್ಲದೆ ಭಣಗುಡುತ್ತಿವೆ. ಆಟೋಗಳು ರಸ್ತೆಗಿಳಿದರೂ ಪ್ರಯಾಣಿಕರಿಲ್ಲದೆ ಬದುಕು ದುಸ್ತರವಾಗಿದೆ. ಸರ್ಕಾರ ಆಟೋ ಚಾಲಕರಿಗೆ 5000 ರೂ. ನೀಡುವುದಾಗಿ ಹೇಳಿದೆ. ಆದರೆ ಹಣ ಪಡೆಯಲು ಯಾವ ನಿಯಮ ಅನುಸರಿಸಬೇಕು ಎಂಬುದು ಗೊತ್ತಾಗದೆ ಆಟೋ ಚಾಲಕರಿಗೆ ದಿಕ್ಕು ತೋಚದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.