ETV Bharat / state

ಮಲೆನಾಡಲ್ಲಿ ವೇಗ ಪಡೆದುಕೊಳ್ಳದ ಕೃಷಿ ಚಟುವಟಿಕೆ: ಬೆಳೆಗಾರರಿಗೆ ಕಾರ್ಮಿಕರದ್ದೇ ಚಿಂತೆ - ಲಾಕ್​ಡೌ್ ಎಫೆಕ್ಟ್​

ಕೊರೊನಾದಿಂದಾಗಿ ಕೃಷಿ ವಲಯ ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ. ಮಲೆನಾಡು ಭಾಗದಲ್ಲಿ ವಾರ್ಷಿಕ ಕೃಷಿ ಚಟುವಟಿಕೆಗೆ ಹೋಲಿಸಿದರೆ, ಈ ಬಾರಿಯ ಕೃಷಿ ಕ್ಷೇತ್ರ ಮಂದಗತಿಯಲ್ಲಿ ಸಾಗುತ್ತಿದೆ. ಅಲ್ಲದೇ ಕೃಷಿಗೆ ಪೂರಕವಾಗಿ ಬೇಕಾಗಿದ್ದ ಅಗತ್ಯ ವಸ್ತುಗಳು ರೈತರ ಕೈಸೇರದೇ ಜಮೀನನ್ನು ಉಳುಮೆ ಮಾಡುವುದೂ ಸೇರಿ ಫಸಲನ್ನು ಕಟಾವು ಮಾಡುವಲ್ಲಿ ರೈತರು ಹಿಂದೇಟು ಹಾಕುವಂತಾಗಿದೆ.

Corona Effect: Agricultural Activity was decreasing In region of Malnad
ಕೊರೊನಾ ಎಫೆಕ್ಟ್​​: ಮಲೆನಾಡಲ್ಲಿ ವೇಗ ಪಡೆದುಕೊಳ್ಳದ ಕೃಷಿ ಚಟುವಟಿಕೆ
author img

By

Published : May 15, 2020, 11:28 PM IST

ಸಕಲೇಶಪುರ(ಹಾಸನ): ಕೊರೊನಾದಿಂದಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿದೆ. ಮಲೆನಾಡಿನಲ್ಲಿ ಪ್ರಮುಖ ಬೆಳೆ ಕಾಫಿ, ಏಲಕ್ಕಿ, ಮೆಣಸು ಹಾಗೂ ಭತ್ತದ ಬೆಳೆಗಳಾಗಿದ್ದು ಇತ್ತೀಚೆಗೆ ಕೆಲವು ಭಾಗಗಳಲ್ಲಿ ಮೆಣಸಿನಕಾಯಿ, ಬೀನ್ಸ್ ಎಂಬಂತಹ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಬಹುತೇಕ ಬೆಳೆಗಳನ್ನು ವರ್ಷದಲ್ಲಿ ಒಮ್ಮೆ ಮಾತ್ರ ಬೆಳೆಯಲಾಗುತ್ತದೆ.

ಕಾಫಿ ಫಸಲು ಸಾಮಾನ್ಯವಾಗಿ ಡಿಸೆಂಬರ್, ಜನವರಿಯಲ್ಲಿ ಬಂದರೆ, ಮೆಣಸು ಸಾಮಾನ್ಯವಾಗಿ ಫೆಬ್ರವರಿ ಮಾಹೆಯಲ್ಲಿ ಬರುತ್ತದೆ. ಮೂಡಸೀಮೆಗಳಲ್ಲಿ ಭತ್ತವನ್ನು ಸುಮಾರು 3 ಬಾರಿ ಬಿತ್ತನೆ ಮಾಡಿದರೆ ತಾಲೂಕಿನಲ್ಲಿ ಭತ್ತವನ್ನು ಒಮ್ಮೆ ಮಾತ್ರ ಬಿತ್ತನೆ ಮಾಡಿ ಉಳಿದ ಸಮಯದಲ್ಲಿ ಕೆಲವರು ಭೂಮಿಯನ್ನ ಹಾಗೆಯೆ ಬಿಟ್ಟರೆ ಇನ್ನೂ ಕೆಲವರು ಇತ್ತೀಚೆಗೆ ತರಕಾರಿಯನ್ನು ಬೆಳೆಯಲು ಮುಂದಾಗುತ್ತಿದ್ದಾರೆ.

ಲಾಕ್​​ಡೌನ್​​ನಿಂದಾಗಿ ಹಲವೆಡೆ ಕೃಷಿ ಕಾರ್ಮಿಕರ ಕೊರತೆ

ಜನವರಿ, ಫೆಬ್ರವರಿ ಮಾಹೆಯಲ್ಲಿ ಕಾಫಿ ಬೆಳೆ ಕುಯ್ಲು ನಡೆಸಿದ ನಂತರ ಮಾರ್ಚ್​ನಲ್ಲಿ ಮಳೆ ಬಾರದ ಕಾರಣ ರೈತರು ಕೃತಕವಾಗಿ ಬೆಳೆಗೆ ನೀರು ಸಿಂಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ನೀರು ಸಿಂಪಡಿಸಿದ ನಂತರ ಗಿಡಗಸಿ ಹಾಗೂ ಮರಗಸಿಗಳನ್ನು ಮಾಡಿಸಿ ನಂತರ ಮಳೆ ನೋಡಿಕೊಂಡು ಗೊಬ್ಬರ ಹಾಕುವುದು ವಾಡಿಕೆ, ಆದರೆ, ಮಾರ್ಚ್ ಮೂರನೇ ವಾರದಲ್ಲಿ ಲಾಕ್​ಡೌನ್ ಆರಂಭವಾಗಿದ್ದರಿಂದ ಕೂಲಿ ಕಾರ್ಮಿಕರ ಕೊರತೆ ಉಂಟಾಯಿತು.

ಕೆಲವು ಎಸ್ಟೇಟ್​ಗಳಲ್ಲಿ ಹೊರ ರಾಜ್ಯದ ಕೂಲಿ ಕಾರ್ಮಿಕರು ಅಲ್ಲೆ ನೆಲೆಸಿದ್ದು, ಪಟ್ಟಣಕ್ಕೆ ಸಮೀಪವಿರುವ ಕಾಫಿ ತೋಟಗಳಿಗೆ ಕುಡುಗರಹಳ್ಳಿ ಬಡಾವಣೆ, ಜನತಾ ಮನೆ, ಸಿಪಿಸಿ ಬಡಾವಣೆ, ಕುಶಾಲನಗರ, ಚಂಪಕನಗರ ಮುಂತಾದ ಕಡೆಗಳಿಗೆ ವಾಹನಗಳ ಮುಖಾಂತರ ಕಾಫಿ ತೋಟಗಳಿಗೆ ಹೋಗಿ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಆದರೆ, ಲಾಕ್​ಡೌನ್ ಉಂಟಾಗಿದ್ದರಿಂದ ಇಂತಹ ಕಾರ್ಮಿಕರು ಪಟ್ಟಣದಿಂದ ಗ್ರಾಮಗಳಿಗೆ ಹೋಗಿ ಕೆಲಸ ಮಾಡಲು ಅವಕಾಶ ದೊರಕದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ವಿಳಂಬವಾಗಲು ಕಾರಣವಾಯಿತು.

ಇದೀಗ ಲಾಕ್​ಡೌನ್ ತೆರವಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರಿಂದಾಗಿ ವಾಹನಗಳಲ್ಲಿ ಕಾರ್ಮಿಕರನ್ನು ತುಂಬಲು ಅವಕಾಶವಿಲ್ಲದಾಗಿದೆ. ಲಾಕ್​ಡೌನ್ ತೆರೆದರೂ ಸಹ ಕಾರ್ಮಿಕರು ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶವಿಲ್ಲದೇ ಕೃಷಿ ಚಟುವಟಿಕೆಗಳಿಗೆ ಪೆಟ್ಟು ಬಿದ್ದಿದೆ. ಕೆಲವೆಡೆ ಮಾತ್ರ ಕದ್ದು ಮುಚ್ಚಿ ಕೂಲಿ ಕಾರ್ಮಿಕರನ್ನು ಸಾಗಿಸಿ ಕೆಲಸ ಮಾಡಿಸಲಾಗುತ್ತಿದೆ.

ಇನ್ನು ಹೊರರಾಜ್ಯದ ಹಾಗೂ ಹೊರ ಜಿಲ್ಲೆಗಳ ಹಲವು ಕಾರ್ಮಿಕರುಗಳು ಲಾಕ್​ಡೌನ್ ಭಯದಿಂದ ತಮ್ಮ ರಾಜ್ಯ ಹಾಗೂ ಊರುಗಳಿಗೆ ಹೋಗುತ್ತಿದ್ದು, ಇದರಿಂದಾಗಿ ದೊಡ್ಡ ದೊಡ್ಡ ಎಸ್ಟೇಟ್​ಗಳಲ್ಲಿ ಸಹ ಕೃಷಿ ಚಟುವಟಿಕೆಗಳಿಗೆ ಪೆಟ್ಟು ಬಿದ್ದಿದೆ.

ದೊಡ್ಡ ದೊಡ್ಡ ಎಸ್ಟೇಟ್​​ಗಳಲ್ಲಿ ಕೆಲಸ ನೀಡಲು ಪರದಾಟ

ಬಹುತೇಕ ದೊಡ್ಡ ಕಾಫಿ ತೋಟಗಳ ಎಸ್ಟೇಟ್​ಗಳ ಮಾಲಿಕರು ಹೊರ ಊರುಗಳಲ್ಲಿ ಉದ್ಯಮಗಳನ್ನ ಹೊಂದಿದ್ದು, ಇದೀಗ ಲಾಕ್​​ಡೌನ್ ನಿಂದಾಗಿ ಉದ್ಯಮಗಳು ನಷ್ಟ ಅನುಭವಿಸುತ್ತಿರುವುದರಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಿಸಲು ಮುಂದಾಗದಿರುವುದಿರಂದ ಹೊರ ರಾಜ್ಯಗಳ ಕಾರ್ಮಿಕರು ಗುಳೆ ಏಳಲು ಕಾರಣವಾಗಿದೆ. ಮುಂದಿನ ಸಾಲಿನಲ್ಲಂತೂ ಕೂಲಿ ಕಾರ್ಮಿಕರ ಕೊರತೆ ವ್ಯಾಪಕವಾಗಿ ಬಾದಿಸುವುದರಲ್ಲಿ ಅನುಮಾನವಿಲ್ಲ.

ಹೊರರಾಜ್ಯದವರ ಗುಳೆಯಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿ ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ತೋಟದ ಮಾಲಿಕರಿಗೆ ಕಾರ್ಮಿಕರು ಸಿಗದಂತ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ.

ಕೆಲಸ ನಿಗದಿತ ಅವಧಿಯಲ್ಲಿ ಆಗದೇ ಪರದಾಟ

ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿದ್ದರೂ ಸಹ ಕೆಲವು ಬೆಳೆಗಾರರು ಮಾತ್ರ ತಮ್ಮ ತೋಟಗಳಿಗೆ ಬೇಗನೆ ಗೊಬ್ಬರ ಹಾಕಿಸಿದ್ದು ಬಹುತೇಕ ಕಾಫಿ ತೋಟಗಳಲ್ಲಿ ಇದೀಗ ಗಿಡಗಸಿ ಹಾಗೂ ಮರಗಸಿ ಅಂತ ಕೆಲಸ ತುಸು ತಡವಾಗಿ ನಡೆಯುತ್ತಿದೆ. ಮಳೆ ಈ ಬಾರಿ ಬೇಗನೆ ಬಿದ್ದರೂ ಸಹ ಅದರ ಪ್ರಯೋಜನ ಪಡೆಯುವಲ್ಲಿ ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ.

ಕಾಫಿ ದರ ಕುಸಿಯುವ ಆತಂಕ: ಲಾಕ್​ಡೌನ್ ಹಿನ್ನೆಲೆಯಲ್ಲಿ ವಿಶ್ವದೆಲ್ಲೆಡೆ ಆರ್ಥಿಕ ಹಿಂಜರಿತ ಉಂಟಾಗಿದ್ದು, ಈಗಾಗಲೇ ಹಲವು ಬೆಳೆಗಾರರು ಬೆಳೆದ ಕಾಫಿಯನ್ನು ಮಾರಾಟ ಮಾಡಿದ್ದಾರೆ. ಆದರೆ, ಕೆಲವರು ಕಾಫಿ ಮಾರಾಟ ಮಾಡದೇ ಉತ್ತಮ ದರಕ್ಕಾಗಿ ಕಾಯುತ್ತಿದ್ದರಿಂದ ಅಂತವರು ಇದೀಗ ಬೆಲೆ ಕುಸಿತದ ಆತಂಕ ಎದುರಿಸುತ್ತಿದ್ದಾರೆ. ಕಾಫಿ ಸಹ ಈ ಬಾರಿ ಸರಿಯಾಗಿ ವಿದೇಶಗಳಿಗೆ ರಪ್ತು ಆಗದ ಕಾರಣ ಕಾಫಿ ಕೊಳ್ಳುವ ಕಂಪನಿಗಳು ವರ್ತಕರಿಗೆ ಸರಿಯಾಗಿ ಕಾಫಿಯ ಹಣ ನೀಡುತ್ತಿಲ್ಲ. ಹೀಗಾಗಿ ಬೆಳೆಗಾರರು ಪರದಾಡುವಂತಾಗಿದೆ.

ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ

ಕಾಫಿ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ಎಕರೆಯೊಂದಕ್ಕೆ ಕನಿಷ್ಠ 50 ರಿಂದ 60ಸಾವಿರ ರೂ.ಗಳಷ್ಟು ನಿರ್ವಹಣೆಗೆ ಖರ್ಚು ಬರುತ್ತಿದೆ. ಇದರಿಂದ ಬರುವ ಲಾಭ ಮಾತ್ರ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಏರುತ್ತಿರುವ ಸಾಲ: ಕಾಫಿ ಉತ್ಪಾದನೆಗಾಗಿ ಬೆಳೆಗಾರರು ಹೆಚ್ಚಿನ ಸಾಲ ಮಾಡುತ್ತಿದ್ದು, ಅನೇಕ ಬೆಳೆಗಾರರು ಸಾಲದ ಬಡ್ಡಿ ಕಟ್ಟಲು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಪ್ರಾಕೃತಿಕ ಏರುಪೇರು: ಪ್ರತಿವರ್ಷ ಪ್ರಾಕೃತಿಕ ಏರುಪೇರಿಂದ ಬೆಳೆಗಾರರಿಗೆ ಅನೇಕ ತೊಂದರೆ ಉಂಟಾಗುತ್ತಿದೆ. ಕಳೆದ 2 ವರ್ಷಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಮಳೆಯ ಹೆಚ್ಚಳದಿಂದ ತೊಂದರೆ ಅನುಭವಿಸಿದರೆ ಬೇಸಿಗೆಯಲ್ಲಿ ವಿಪರೀತ ತಾಪಮಾನದಿಂದ ತೊಂದರೆ ಅನುಭವಿಸುವಂತಾಗಿದೆ.

ಮಾರುಕಟ್ಟೆಯಲ್ಲಿ ಸಾವಯವ ಗೊಬ್ಬರಕ್ಕೆ ದೊರಕದ ಪ್ರಾಮುಖ್ಯತೆ

ಹಿಂದೆ ಬಹುತೇಕ ಕಾಫಿ ತೋಟಗಳಲ್ಲಿ ದನದ ಗೊಬ್ಬರವನ್ನೆ ಹಾಕಲಾಗುತ್ತಿತ್ತು. ಕಾರ್ಮಿಕರ ಕೊರತೆಯಿಂದ ತೋಟಗಳಲ್ಲಿ ಪಶು ಸಾಕಣೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಕೇವಲ ಕೆಮಿಕಲ್ ಗೊಬ್ಬರಗಳೇ ದೊರಕುವುದರಿಂದ ಹೆಚ್ಚಿನ ಇಳುವರಿಗಾಗಿ ಬೆಳೆಗಾರರು ಕೆಮಿಕಲ್ ಗೊಬ್ಬರಗಳನ್ನೆ ಬಳಸುತ್ತಿದ್ದಾರೆ. ಕೆಮಿಕಲ್ ಗೊಬ್ಬರಗಳ ಬಳಕೆಯಿಂದಾಗಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ.

ಕಾಡಾನೆ ಹಾಗೂ ಕಾಡುಪ್ರಾಣಿಗಳ ಹಾವಳಿ

ಮಲೆನಾಡಿನಲ್ಲಿ ಕಳೆದೊಂದು ದಶಕದಲ್ಲಿ ಅಭಿವೃದ್ದಿ ಹೆಸರಿನಲ್ಲಿ ವ್ಯಾಪಕ ಅರಣ್ಯ ನಾಶವಾಗಿದ್ದರಿಂದ ಕಾಡಾನೆಗಳಿಗೆ ನೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳು ಆಹಾರ ಅರಸಿ ಕಾಫಿ ತೋಟಗಳಿಗೆ ದಾಳಿ ಮಾಡುತ್ತಿದೆ. ಇದರಿಂದಾಗಿ ಹಲವು ಸಾವು - ನೋವುಗಳು ಸಂಭವಿಸಿದ್ದು ಕೆಲವು ಭಾಗಗಳಲ್ಲಿ ಕಾಡಾನೆ ಸಮಸ್ಯೆ ಮಿತಿ ಮೀರಿರುವುದರಿಂದ ಇಂತಹ ಭಾಗದಲ್ಲಿರುವ ಕಾಫಿ ತೋಟಗಳಿಗೆ ಕೂಲಿ ಕಾರ್ಮಿಕರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಕಾಫಿ ಬೆಳೆಗಾರರು ಜಮೀನುಗಳನ್ನು ಹಾಳು ಬಿಡಬೇಕಾಗಿದೆ. ಕೆಲವೆಡೆ ಮಂಗಗಳ ಹಾವಳಿಯಾದರೆ ಪಶ್ಚಿಮ ಘಟ್ಟಗಳ ತಪ್ಪಲಿನ ಕಾಫಿ ತೋಟಗಳಲ್ಲಿ ಚಿರತೆ, ಹುಲಿಯಂತಹ ಕಾಡುಪ್ರಾಣಿಗಳ ಆತಂಕ ಸಹ ಬೆಳೆಗಾರರನ್ನು ಕಾಡುತ್ತಿದೆ.

ಒಟ್ಟಾರೆಯಾಗಿ ಕಾಫಿ ಬೆಳೆಗಾರರು ವ್ಯಾಪಕ ಸಮಸ್ಯೆ ಎದುರಿಸುತ್ತಿದ್ದು ಇದೀಗ ಲಾಕ್​​ಡೌನ್​ನಿಂದಾಗಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತಷ್ಟು ಕಾಫಿ ಬೆಳೆಗಾರರ ರಕ್ಷಣೆಗೆ ಪ್ಯಾಕೇಜ್​​​ಗಳನ್ನು ನೀಡುವ ಮುಖಾಂತರ ರಕ್ಷಣೆಗೆ ಬರಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.