ಹಾಸನ : ಬೆಂಗಳೂರು ಪ್ರವಾಸ ಮಾಡಿ ಜಿಲ್ಲೆಗೆ ವಾಪಸ್ ಬಂದು ಕೆಲಸ ನಿರ್ವಹಿಸಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಪೊಲೀಸ್ ಠಾಣೆಯನ್ನೇ ಸೀಲ್ಡೌನ್ ಮಾಡಲಾಗಿದೆ.
ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಜಿಲ್ಲೆಯ ಪೊಲೀಸ್ ಕಾನ್ಸ್ಟೇಬಲ್ ಒಂದು ದಿನದ ಹಿಂದೆ ಠಾಣೆಗೆ ಬಂದಿದ್ದರು, ಅವರು ವಾಪಾಸ್ ಬಂದ ತಕ್ಷಣ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ಪಾಸಿಟಿವ್ ಬಂದಿದೆ. ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆ ಪೊಲೀಸ್ ಠಾಣೆಯನ್ನೇ ಸೀಲ್ಡೌನ್ ಮಾಡಿದೆ.
ಪೊಲೀಸ್ ಠಾಣೆಗೆ ಬಂದು ಹೋಗಿರುವ ಜನರಲ್ಲಿ ಕೂಡ ಇದೀಗ ಆತಂಕದ ಹೆಚ್ಚಾಗಿದೆ. ಜೊತೆಗೆ ಪೊಲೀಸ್ ಕಾನ್ಸ್ಟೇಬಲ್ ಪ್ರವಾಸದ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ.
ಜಿಲ್ಲೆಯಲ್ಲಿ ಇಲ್ಲಿಯವೆರೆ 266 ಜನರಿಗೆ ಸೋಂಕು ಧೃಡಪಟ್ಟಿದ್ದು, ಇವರಲ್ಲಿ 215 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.