ETV Bharat / state

ಹೊಸಕೊಪ್ಪಲು ಮನೆ ಮಾಲೀಕರಿಗೆ ಪರಿಹಾರ ಸಿಗದಿದ್ದರೆ ಹೋರಾಟದ ಎಚ್ಚರಿಕೆ

author img

By

Published : Jun 3, 2020, 6:29 PM IST

ಹಾಸನ ಮಾರ್ಗವಾಗಿ ಹೊಳೆನರಸೀಪುರಕ್ಕೆ ಹೋಗುವ ಎನ್.ಹೆಚ್.ರಸ್ತೆ ವಿಚಾರವಾಗಿ ಹಾಸನದ ಎಂ. ಹೊಸಕೊಪ್ಪಲು ಗ್ರಾಮದ ಬಳಿ ರಸ್ತೆ ವಿಸ್ತರಣೆ ಮಾಡುವ ಕಾಮಗಾರಿಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ.ಗೌಡರವರು ಮತ್ತು ಸಂಸದ ಪ್ರಜ್ವಲ್ ರೇವಣ್ಣನವರು ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ರಸ್ತೆಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆ ಅಥವಾ ಇಲ್ಲ ಎಂಬುದನ್ನು ತಿಳಿಯದೇ ಅನಗತ್ಯವಾಗಿ ಅಧಿಕಾರಿಗಳ ಮೇಲೆ ಗದಾ ಪ್ರಹಾರ ಮಾಡಿರುವುದು ಸಂಸದರಿಗೆ ಗೌರವ ತರುವ ವಿಚಾರವಲ್ಲ ಎಂದು ಕಾಂಗ್ರೆಸ್​ ಮುಖಂಡ ದೇವರಾಜೇಗೌಡ ದೂರಿದ್ದಾರೆ.

ಹಾಸನ: ಭೂಮಿ ಕಳೆದುಕೊಂಡಿರುವ ಎಂ.ಹೊಸಕೊಪ್ಪಲು ಮನೆ ಮಾಲೀಕರಿಗೆ ನ್ಯಾಯಯುತ ಪರಿಹಾರ ಸಿಗದಿದ್ದರೆ ಮಾಲೀಕರ ಪರವಾಗಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ಮಾಡುವುದಾಗಿ ಪಕ್ಷದ ಮುಖಂಡ ದೇವರಾಜೇಗೌಡ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಮಾರ್ಗವಾಗಿ ಹೊಳೆನರಸೀಪುರಕ್ಕೆ ಹೋಗುವ ಎನ್.ಹೆಚ್.ರಸ್ತೆ ವಿಚಾರವಾಗಿ ಹಾಸನದ ಎಂ. ಹೊಸಕೊಪ್ಪಲು ಗ್ರಾಮದ ಬಳಿ ರಸ್ತೆ ವಿಸ್ತರಣೆ ಮಾಡುವ ಕಾಮಗಾರಿಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ.ಗೌಡರವರು ಮತ್ತು ಸಂಸದ ಪ್ರಜ್ವಲ್ ರೇವಣ್ಣನವರು ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಸದರು ಅಧಿಕಾರಿಗಳಿಗೆ ಧಮ್ಕಿ ಕೂಡ ಹಾಕಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ರಸ್ತೆಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆ ಅಥವಾ ಇಲ್ಲ ಎಂಬುದನ್ನು ತಿಳಿಯದೇ ಅನಗತ್ಯವಾಗಿ ಅಧಿಕಾರಿಗಳ ಮೇಲೆ ಗದಾ ಪ್ರಹಾರ ಮಾಡಿರುವುದು ಸಂಸದರಿಗೆ ಗೌರವ ತರುವ ವಿಚಾರವಲ್ಲ ಎಂದು ದೂರಿದರು.

ಕಾಂಗ್ರೆಸ್​ ಮುಖಂಡ ದೇವರಾಜೇಗೌಡ ಸುದ್ದಿಗೋಷ್ಠಿ

ಸರ್ಕಾರವು ದರ ನಿಗದಿ ಮಾಡಬೇಕಾದರೆ ನೋಂದಣಿ ಕಚೇರಿಯ ದಾಖಲಾತಿಗಳ ಆಧಾರದ ಮೇಲೆ ದರ ನಿಗದಿ ಮಾಡುತ್ತದೆ . ಇದರಿಂದ ಮಾಲೀಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಪರಿಹಾರ ನೀಡದೇ ಮನೆಗಳನ್ನು ಒಡೆಯಲು ಪ್ರಯತ್ನ ಮಾಡಿದಲ್ಲಿ ಭಾಗದ ನಾಗರಿಕರೊಂದಿಗೆ ಪ್ರತಿಭಟನೆ ಮಾಡುವುದಾಗಿ ಕೂಡ ಸಂಸದರು ತಿಳಿಸಿದ್ದಾರೆ. ಅದೇ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಮಯದಲ್ಲಿ, ನಿಮ್ಮ ತಂದೆ ಉಸ್ತುವಾರಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ವಾಧೀನವನ್ನು ಮಾಡಿಕೊಳ್ಳದೇ, ಪರಿಹಾರವನ್ನು ನೀಡಿಲ್ಲ. ಆಗ ಕನಿಷ್ಠ ಅಧಿಕೃತ ನೋಟಿಸ್ ನೀಡದೇ ನೂರಾರು ಮನೆಗಳನ್ನು ಹಾಸನದ ಬಿ.ಎಂ. ರಸ್ತೆಯ ಎರಡು ಬದಿಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಒಬ್ಬ ಬಡಕುಟುಂಬದ ವ್ಯಕ್ತಿಯ ಆಸ್ತಿಯನ್ನು ರಾತ್ರೋರಾತ್ರಿ ಕೆಡವಲಾಗಿದೆ ಎಂದು ಆರೋಪಿಸಿದರು.

ಕೇವಲ ರಾಜಕೀಯ ಉದ್ದೇಶಕ್ಕಾಗಿ ಈ ರೀತಿ ಅನಗತ್ಯವಾಗಿ ಆ ಭಾಗದ ಜನರನ್ನು ಎತ್ತಿಕಟ್ಟಿ ಮಾತನಾಡಬಾರದು. ತಾವೇ ಮುಂದೆ ನಿಂತು ಭೂಮಿ ಮತ್ತು ಮನೆಯನ್ನು ಕಳೆದುಕೊಂಡಿರುವ ಮಾಲೀಕರಿಗೆ ಸರ್ಕಾರದಿಂದ ಬರಬೇಕಾದ ಕಾನೂನಾತ್ಮಕ ಪರಿಹಾರವನ್ನು ಕೊಡಿಸಲು ಪ್ರಯತ್ನ ಮಾಡಲಿ. ಇದರಿಂದ ತಮಗೂ ಗೌರವ ಸಿಗುತ್ತದೆ. ಆಸ್ತಿ ಕಳೆದುಕೊಂಡಿರುವ ರೈತರಿಗೂ ಅನುಕೂಲವಾಗುತ್ತದೆ ಎಂದು ಕಾಂಗ್ರೆಸ್​​​​​​ ಮುಖಂಡ ದೇವರಾಜೇಗೌಡ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.